Tuesday, July 1, 2025

Latest Posts

ನೆಲ ಒರೆಸುವುದಕ್ಕೂ ಹಿಂದೂ ಧರ್ಮದಲ್ಲಿದೆ ಹಲವು ನಿಯಮ..

- Advertisement -

ನಮ್ಮ ಮನೆ ಕ್ಲೀನ್ ಇರಬೇಕು. ಮನೆಗೆ ಅತಿಥಿಗಳು ಬಂದ್ರೆ, ನಮ್ಮ ಮನೆಯಲ್ಲಿ ಸ್ವಚ್ಛತೆ ನೋಡಿ ಕೊಂಡಾಡಬೇಕು. ಮನೆಯಲ್ಲಿ ಯಾವಾಗಲೂ ಧನಾತ್ಮಕ ಶಕ್ತಿಯ ಪರಿಣಾಮ ಹೆಚ್ಚಿರಬೇಕು. ಲಕ್ಷ್ಮೀಯ ಕೃಪಾಕಟಾಕ್ಷ ನಮ್ಮ ಮೇಲಿರಬೇಕು ಅನ್ನೋ ಆಸೆ ಯಾರಿಗೆ ತಾನೇ ಇರಲ್ಲ ಹೇಳಿ. ಹಾಗಾಗಿಯೇ ಎಷ್ಟೋ ಹೆಣ್ಣು ಮಕ್ಕಳು, ಪ್ರತಿದಿನ 2ರಿದಂ 3 ಸಲ, ಕಸ ಗುಡಿಸಿ, ಮನೆ ಒರೆಸಿ, ಮನೆಯಲ್ಲಿ ಸ್ವಚ್ಚವಾಗಿ ಇಡ್ತಾರೆ. ಆದ್ರೆ ಹಿಂದೂ ಧರ್ಮದಲ್ಲಿ ನೆಲ ಒರೆಸುವುದಕ್ಕೂ ಕೆಲ ನಿಯಮಗಳಿದೆ. ಆ ನಿಯಮಗಳ ಬಗ್ಗೆ ತಿಳಿಯೋಣ ಬನ್ನಿ..

ಮೃತ ವ್ಯಕ್ತಿ ಪುನರ್ಜನ್ಮ ಹೇಗೆ ಪಡೆಯುತ್ತಾನೆ..?

12 ಗಂಟೆಯ ಬಳಿಕ ಮತ್ತು ಸಂಜೆ ಹೊತ್ತಲ್ಲಿ ಯಾವುದೇ ಕಾರಣಕ್ಕೂ ನೆಲ ಒರೆಸಬಾರದು. ಬೆಳಿಗ್ಗೆ ಪೂಜೆಗೂ ಮುನ್ನ ನೀವು ಕಸ ಗುಡಿಸಿ, ನೆಲ ಒರೆಸಬೇಕು. ಹೀಗೆ ಮಾಡುವುದರಿಂದ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಪ್ರಭಾವ ಕಡಿಮೆಯಾಗುತ್ತದೆ. ನಾವು ಮುಸ್ಸಂಜೆಗೆ ಲಕ್ಷ್ಮೀಯನ್ನು ಬರ ಮಾಡಿಕೊಳ್ಳುವುದು ನಿಜ. ಆದ್ರೆ ನೀವು 6 ಗಂಟೆಯೊಳಗೆ ಕಸ ಗುಡಿಸಬೇಕು. ವಿನಃ ನೆಲ ಒರೆಸಬೇಡಿ.

ನೀವು ವಾರದ 6 ದಿನವೂ ಬೆಳಿಗ್ಗೆ ನೆಲ ಒರೆಸಬಹುದು. ಆದ್ರೆ ಗುರುವಾರದ ದಿನ ಮಾತ್ರ ಮನೆಯಲ್ಲಿ ನೆಲ ಒರೆಸಬೇಡಿ. ಹೀಗೆ ಮಾಡುವುದರಿಂದ ಗುರು ಬಲ ಕಡಿಮೆಯಾಗುತ್ತದೆ. ಬ್ರಹಸ್ಪತಿಯ ಶಕ್ತಿ ಕಡಿಮೆಯಾಗುತ್ತದೆ. ಇದರಿಂದ ಪತಿ, ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸಂಬಂಧದಲ್ಲಿ ಬಿರುಕು ಮೂಡುತ್ತದೆ.

ಜಪಮಾಲೆಯಿಂದ ಆಗುವ ಪ್ರಯೋಜನಗಳೇನು..?

ಇನ್ನು ನೆಲ ಒರೆಸುವಾಗ ನೀವು ಗಮನದಲ್ಲಿಡಬೇಕಾದ ವಿಷಯ ಅಂದ್ರೆ, ಒಡೆದ ಬಕೇಟ್‌ನಲ್ಲಿ ನೀರು ಹಾಕಿ, ನೆಲ ಒರೆಸಬಾರದು. ಇದನ್ನು ಅಶುಭ ಎನ್ನಲಾಗಿದೆ. ಇನ್ನು ನೀವು ನೆಲ ಒರೆಸುವಾಗ ಉತ್ತರ ದಿಕ್ಕಿನಿಂದ ನೆಲ ಒರೆಸಬೇಕು. ಹೀಗೆ ಮಾಡುವುದರಿಂದ ಮನೆಗೆ ಒಳ್ಳೆಯದು. ಇದು ಧನದೇವ ಕುಬೇರನ ದಿಕ್ಕಾಗಿರುವುದರಿಂದ ನಿಮ್ಮ ಮನೆಯಲ್ಲಿ ಎಂದಿಗೂ ಆರ್ಥಿಕ ಪರಿಸ್ಥಿತಿ ಹದಗೆಡಬಾರದೆಂದರೆ, ನೀವು ಉತ್ತರ ದಿಕ್ಕಿನಿಂದ ನೆಲ ಒರೆಸುತ್ತ ಬನ್ನಿ..

ಇನ್ನು ನಿಮ್ಮ ಮನೆಯಲ್ಲಿ ಯಾರಾದರೂ ಪದೇ ಪದೇ ಅನಾರೋಗ್ಯಕ್ಕೀಡಾಗುತ್ತಿದ್ದರೆ, ಅಥವಾ ನಿಮ್ಮ ಮನೆಗೆ ಯಾರದ್ದೋ ದೃಷ್ಟಿ ಬಿದ್ದಿದೆ ಎಂದು ನಿಮಗನ್ನಿಸಿದರೆ, ನೆಲ ಒರೆಸುವ ನೀರಿನಲ್ಲಿ ಒಂದೆರಡು ಕಹಿಬೇವಿನ ಎಲೆಯನ್ನು ಹಾಕಿಡಿ. ಇದರಿಂದ ಮನೆಗೆ ನಕಾರಾತ್ಮಕ ಶಕ್ತಿ ಬರುವುದು ತಡೆಯುತ್ತದೆ.

- Advertisement -

Latest Posts

Don't Miss