ಭಾರತದಲ್ಲಿ ದೇವಿಯನ್ನ ಹೆಚ್ಚಿನ ಜನರು ಆರಾಧಿಸುತ್ತಾರೆ. ನವರಾತ್ರಿಯಲ್ಲಿ ನವದೇವಿಯರನ್ನ ಆರಾಧಿಸುವ ಮೂಲಕ ವಿಜಯದಶಮಿ ದಸರಾವನ್ನ ಆಚರಿಸಲಾಗುತ್ತದೆ. ಎಲ್ಲ ರಾಜ್ಯಗಳಿಗಿಂತಲೂ ಬಂಗಾಳದಲ್ಲಿ ನವರಾತ್ರಿಯನ್ನ ಪ್ರತೀ ಹಿಂದೂಗಳು ಅದ್ಧೂರಿಯಾಗಿ ಆಚರಿಸುತ್ತಾರೆ. ಅಲ್ಲಿ ಕೆಲವೆಡೆ ಮೂರ್ತಿಯನ್ನ ಕೂರಿಸುವ ಪದ್ಧತಿ ಇದೆ. ನವರಾತ್ರಿಯ 9 ದಿನಗಳಲ್ಲೂ ನವದುರ್ಗೆಯನ್ನು ಪೂಜಿಸಿ, 9 ವಿಧದ ನೈವೇದ್ಯ ಮಾಡಿ ಉಣ ಬಡಿಸಲಾಗತ್ತೆ. ಇಂಧ ಬಂಗಾಳದಲ್ಲಿ ಕಾಳಿ ದೇವಿಯ ದೇವಸ್ಥಾನವಿದೆ. ಅದೇ ದಕ್ಷಿಣೇಶ್ವರ ಕಾಳಿ ಮಂದಿರ. ಆ ದೇವಸ್ಥಾನದ ಇತಿಹಾಸವನ್ನ ನಾವಿಂದು ನಿಮಗೆ ಹೇಳಲಿದ್ದೇವೆ.
ಭಕ್ತನನ್ನು ಪರೀಕ್ಷಿಸಿದ್ದ ಶ್ರೀಕೃಷ್ಣ.. ಚಿಕ್ಕ ಕಥೆ..
ರಾಮಕೃಷ್ಣ ಪರಮಹಂಸರ ಬಗ್ಗೆ ಓದುವಾಗ, ಅವರು ಕಾಳಿದೇವಿ ಉಪಾಸಕರಾಗಿದ್ದರು. ಸ್ವಾಮಿ ವಿವೇಕಾನಂದರಿಗೂ ದೇವಿಯ ಆರಾಧನೆ ಮಾಡುವಂತೆ ಹೇಳಿದ್ದರು. ಕಾಳಿ ದೇವಿಯ ಉಪಾಸನೆಯಿಂದಲೇ, ರಾಮಕೃಷ್ಣರು ಅಪಾರ ಶಕ್ತಿ ಗಳಿಸಿದ್ದರು ಎಂದು ಓದಿರುತ್ತೇವೆ. ಅದೇ ಕಾಳಿ ದೇವಿಯೇ ಈ ಬಂಗಾಳದಲ್ಲಿರುವ ದಕ್ಷಿಣೇಶ್ವರ ಕಾಳಿ ಮಂದಿರದ, ಕಾಳಿ ದೇವಿ. ಪರಮಹಂಸರು ಇಲ್ಲೇ ದೇವಿಯ ಉಪಾಸನೆ ಮಾಡಿದ್ದರು.
ಇನ್ನು ಈ ದೇವಸ್ಥಾನ ನಿರ್ಮಿಸಿದ್ದು ಯಾರರು..? ಯಾಕೆ ನಿರ್ಮಿಸಿದ್ದರು ಅಂತಾ ತಿಳಿಯೋಣ. ಹಿಂದಿನಕಾಲದಲ್ಲಿ ರಶ್ಮೋನಿ ಎಂಬ ರಾಣಿ ಇದ್ದಳು. ಆಕೆ ಆಗರ್ಭ ಶ್ರೀಮಂತೆಯಾಗಿದ್ದು, ಕಾಳಿಯ ಪರಮಭಕ್ತೆಯಾಗಿದ್ದಳು. ಆಕೆ ಕಾಳಿ ದೇವಿಯ ದರ್ಶನ ಮಾಡಲು ಕಾಶಿಗೆ ಹೋಗಬೇಕು ಎಂದುಕೊಂಡಿದ್ದಳು. ಆದ್ರೆ ಆಕೆಯ ಕನಸ್ಸಿನಲ್ಲಿ ಬಂದ ಕಾಳಿ ದೇವಿ, ನೀನು ನನ್ನನ್ನು ಕಾಣಲು ಕಾಶಿ ಬರಬೇಕಂತಿಲ್ಲ. ನಾನೇ ನಿನ್ನಲ್ಲಿಗೆ ಬರುತ್ತೇನೆ. ನನಗಾಗಿ ಒಂದು ಮಂದಿರ ನಿರ್ಮಿಸೆಂದು ಹೇಳುತ್ತಾಳೆ.
ಬಟ್ಟೆಯಲ್ಲಿ ಅಡಗಿದೆ ಭಾಗ್ಯ ಮತ್ತು ದೌರ್ಭಾಗ್ಯ.. ಯಾವ ದಿನ ಯಾವ ಬಣ್ಣದ ಬಟ್ಟೆ ಧರಿಸಬೇಕು..?
ಈ ಕನಸ್ಸು ಬಿದ್ದ ಕೆಲವೇ ದಿನಗಳಲ್ಲಿ ಭೂಮಿ ಖರೀದಿಸಿದ ರಾಣಿ, ದೊಡ್ಡದಾದ ಕಾಳಿ ಮಂದಿರವನ್ನು ನಿರ್ಮಿಸಿ, ಬ್ರಾಹ್ಮಣರಿಂದ ದೇವಿಯ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದಳು. ನಂತರ ಆ ಮೂರ್ತಿಯಲ್ಲಿ ಕಾಳಿ ದೇವಿಯನ್ನು ಆಹ್ವಾಹನೆ ಮಾಡಲಾಯಿತು. ಆ ದೇವಸ್ಥಾನವೇ ದಕ್ಷಿಣೇಶ್ವರ ಕಾಳಿ ಮಂದಿರ.