Divotional story:
ಹಿಂದೂ ಪುರಾಣ ಗ್ರಂಥಗಳು ಸಾಕಷ್ಟಿವೆ. ಭಗವದ್ಗೀತೆ, ರಾಮಾಯಣ, ಮಹಾಭಾರತ, ದೇವಿ ಭಾಗವತ, ಸ್ಕಂದ ಪುರಾಣ ಹೀಗೆ ಹಲವು ಪುರಾಣ ಗ್ರಂಥಗಳಿದೆ. ಇವನ್ನೆಲ್ಲ ಓದಲು ಎಲ್ಲರೂ ಮನಸ್ಸು ಮಾಡುತ್ತಾರೆ. ಆದ್ರೆ ಗರುಡ ಪುರಾಣ ಓದಲು ಮಾತ್ರ ಹಲವರು ಮನಸ್ಸು ಮಾಡೋದಿಲ್ಲಾ. ಹಾಗಾದ್ರೆ ಗರುಡ ಪುರಾಣ ಓದಲು ಯಾಕೆ ಜನ ಹೆದರುತ್ತಾರೆ..? ಗರುಡ ಪುರಾಣ ಓದುವುದು ತಪ್ಪೇ..? ಇತ್ಯಾದಿ ವಿಷಯಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ ಬನ್ನಿ..
ಗರುಡ ಪುರಾಣವನ್ನು ಎಲ್ಲರೂ ಓದಬಹುದು. ಇದರಿಂದೇನೂ ಸಮಸ್ಯೆಯಾಗುವುದಿಲ್ಲ. ಆದ್ರೆ ಮುಟ್ಟಿನ ಸಮಯದಲ್ಲಿ, ಮೈಲಿಗೆಯಾಗಿರುವ ಸಂದರ್ಭದಲ್ಲಿ, ನಾನ್ವೆಜ್ ತಿಂದಾಗ, ಮದ್ಯಪಾನ ಮಾಡಿದಾಗ ಮತ್ತು ಸೂತಕದ ಸಮಯದಲ್ಲಿ ಗರುಡ ಪುರಾಣದ ಗ್ರಂಥವನ್ನು ಮುಟ್ಟುವಂತಿಲ್ಲ. ಇವಿಷ್ಟು ಸಮಯದಲ್ಲಿ ಬಿಟ್ಟು ಉಳಿದ ಸಮಯದಲ್ಲಿ ನೀವು ಗರುಡ ಪುರಾಣವನ್ನು ಓದಬಹುದು.
ಹನುಮನನ್ನು ನೆನೆದವರಿಗೆ ಶನಿ ತೊಂದರೆ ಕೊಡುವುದಿಲ್ಲವೇಕೆ..? ಇದರ ಹಿಂದಿರುವ ಕಾರಣವೇನು..?
ಕೆಲವರ ಮನೆಯಲ್ಲಿ ವ್ಯಕ್ತಿ ಸತ್ತ 14ನೇ ದಿನಕ್ಕೆ ಗರುಡ ಪುರಾಣ ಪಠಣ ಮಾಡಲಾಗುತ್ತದೆ. ಯಾಕಂದ್ರೆ ಇದರಲ್ಲಿ ಮರಣದ ಬಳಿಕ, ಏನೇನಾಗುತ್ತದೆ. ಸತ್ತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನು ಯಾಕೆ ಪದ್ಧತಿ ಪ್ರಕಾರ ಮಾಡಬೇಕು. ಮಾಡದಿದ್ದಲ್ಲಿ ಏನಾಗುತ್ತದೆ..? ಯಾವ ಪಾಪ ಮಾಡಿದ್ದಲ್ಲಿ, ಮುಂದಿನ ಜನ್ಮದಲ್ಲಿ ಮತ್ತು ಯಮಲೋಕದಲ್ಲಿ ಎಂಥ ಶಿಕ್ಷೆ ಅನುಭವಿಸಬೇಕಾಗುತ್ತದೆ..? ಇತ್ಯಾದಿ ವಿಷಯಗಳ ಬಗ್ಗೆ ವಿವರಿಸಲಾಗುತ್ತದೆ.
ಈ ವೇಳೆ ಅಲ್ಲಿ ಸಿಗುವ ಕಠಿಣ ಶಿಕ್ಷೆಗಳ ಬಗ್ಗೆ ವಿವರಿಸಲಾಗುತ್ತದೆ. ಈ ಶಿಕ್ಷೆಯ ಬಗ್ಗೆ ಕೇಳುವುದಕ್ಕೂ ಮತ್ತು ಓದಿ ವಿವರಿಸುವುದಕ್ಕೂ ಧೈರ್ಯ ಬೇಕಾಗುತ್ತದೆ. ಹಾಗೆ ಎಲ್ಲರಿಗೂ ಶಿಕ್ಷೆ ಕೇಳುವ ಧೈರ್ಯವಿರುವುದಿಲ್ಲ. ಹಾಗಾಗಿ ಇಂಥ ಶಿಕ್ಷೆಯ ಬಗ್ಗೆ ನೆನೆಸಿಕೊಂಡು ಹೆದರುವ ಜನರು, ಗರುಡ ಪುರಾಣ ಓದಲೇಬಾರದು ಅನ್ನೋ ಸುಳ್ಳನ್ನ ಹುಟ್ಟುಹಾಕಿದರು. ಇನ್ನು ಮರಣಕ್ಕೆ ಹೆದರುವವರು ಕೂಡ ಈ ಪುಸ್ತಕವನ್ನು ಓದಲು ಇಚ್ಛಿಸುವುದಿಲ್ಲ.
ದೀಪಾವಳಿಯ ಮುಂಚೆ ಈ ಒಂದು ಕೆಲಸ ಮಾಡಿದರೆ ನಿಮಗೆ ಹಣದ ಕೊರತೆ ಉಂಟಾಗುವುದಿಲ್ಲ …!




