Sunday, September 8, 2024

Latest Posts

ಈ ಹೆಸರಿನ ಹೆಣ್ಣು ಮಕ್ಕಳು ಗಂಡನ ಮನೆಯಲ್ಲೂ ರಾಣಿಯಂತೆ ಇರುತ್ತಾರೆ..

- Advertisement -

ಪ್ರತೀ ತಂದೆ-ತಾಯಿಗೂ ತಮ್ಮ ಮಗಳು ಓದಿ, ವಿದ್ಯಾವಂತೆಯಾಗಬೇಕು. ಅವಳ ಮುಂದಿನ ಭವಿಷ್ಯ ಅತ್ಯುತ್ತಮವಾಗಿರಬೇಕು. ವಿವಾಹದ ಬಳಿಕ ಪತಿಯ ಮನೆಯಲ್ಲಿ ಅವಳು ಖುಷಿಯಾಗಿ, ನೆಮ್ಮದಿಯಾಗಿ ರಾಣಿಯಂತೆ ಇರಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಹಾಗಾಗಿ ಆಕೆಯ ವಿಷಯಕ್ಕೆ ಸಂಬಂಧಪಟ್ಟಂತೆ, ನಾಮಕರಣ, ಚಾಳ, ಕಿವಿ ಚುಚ್ಚುವುದು, ಎಂಗೇಜ್‌ಮೆಂಟ್, ಮದುವೆ ಈ ಎಲ್ಲ ಕಾರ್ಯಕ್ರಮವನ್ನೂ ಉತ್ತಮ ಮುಹೂರ್ತದಲ್ಲಿ ಮಾಡಿ, ಆಕೆಗೆ ಯಾವುದೇ ಕೆಡುಕಾಗದಂತೆ ನೋಡಿಕೊಳ್ತಾರೆ. ಅದೇ ರೀತಿ ಕೆಲವರು ತಮ್ಮ ಮಗಳು ಅದೃಷ್ಟಶಾಲಿಯಾಗಲಿ ಎಂದು, ಲಕ್ಕಿ ನೇಮ್ ಇಡುತ್ತಾರೆ. ಇಂದು ನಾವು ಅದೃಷ್ಟ ತಂದುಕೊಡುವ 4 ಅಕ್ಷರಗಳ ಹೆಸರುಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ..

ಅ ಮತ್ತು ಆ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು ಪತಿಯ ಮನೆಯಲ್ಲಿ ಎಲ್ಲರಿಂದಲೂ ಪ್ರೀತಿ ಗಳಿಸುತ್ತಾರೆ. ಅವರು ತವರು ಮನೆಯಲ್ಲಿ ಎಷ್ಟು ಚೆನ್ನಾಗಿ ಇರುತ್ತಿದ್ದರೋ, ಅಷ್ಟೇ ಚೆನ್ನಾಗಿ ಪತಿಯ ಮನೆಯಲ್ಲಿರುತ್ತಾರೆ. ಇವರ ಮಾತು ಸಿಹಿಯಾಗಿರುವ ಕಾರಣಕ್ಕೆ, ಇವರ ಮಾತಿಗೆ ಹಲವರು ಮಾರು ಹೋಗ್ತಾರೆ. ಹಾಗಾಗಿ ಇವರ ಮಾತಿನಿಂದಲೇ ಇವರು,ಪತಿಯ ಮನೆಯವರಿಗೆ ಫೇವರಿಟ್ ಎನ್ನಿಸಿಕೊಳ್ಳುತ್ತಾರೆ.

ದ ಮತ್ತು ಡ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು, ತಮ್ಮ ಗಂಡನಿಗೆ ಲಕ್ಕಿಯಾಗಿರ್ತಾರೆ. ಈ ಅಕ್ಷರಗಳ ಹೆಸರಿರುವ ಹೆಣ್ಣು ಮಕ್ಕಳ ಪತಿ, ವಿವಾಹದ ಬಳಿಕ ಲಕ್ಕಿಯಾಗಿರುತ್ತಾನೆ. ಅವನ ಜೀವನ ಅತ್ಯುತ್ತಮವಾಗಿ ಬದಲಾಗುತ್ತದೆ. ಯಾಕಂದ್ರೆ ಇಂಥ ಅಕ್ಷರದ ಹೆಣ್ಣು ಮಕ್ಕಳ ಮೇಲೆ ಲಕ್ಷ್ಮೀ ದೇವಿಯ ಕೃಪೆ ಇರುತ್ತದೆ. ಹಾಗಾಗಿ ಇವರು ಗಂಡನ ಮನೆಯಲ್ಲಿ ರಾಣಿಯಂತೆ ಮೆರೆಯುತ್ತಾರೆ.

ಗ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು ಶಾಂತ ಸ್ವಭಾವದವರಾಗಿರ್ತಾರೆ. ಈ ಕಾರಣಕ್ಕೆ ಅವರು ಪತಿಯ ಮನೆಯವರಿಗೆ ತುಂಬಾ ಇಷ್ಟವಾಗುತ್ತಾರೆ. ಮನೆಗೆಲಸ, ಅಥವಾ ಮನೆ ಜನರಿಗೆ ಯಾವುದಾದರೂ ಸಮಸ್ಯೆ ಬಂದರೆ, ಅದನ್ನು ಪರಿಹರಿಸಲು, ಜನಾಬ್ದಾರಿ ನಿಭಾಯಿಸಲು ಇವರು ಸದಾ ಸನ್ನದ್ಧರಾಗಿರುತ್ತಾರೆ. ಹಾಗಾಗಿ ಪತಿಯ ಮನೆಯವರಿಗೆ ಇವರು ಅಚ್ಚುಮೆಚ್ಚಾಗಿರ್ತಾರೆ.

ಲ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು ಅದೃಷ್ಟಶಾಲಿಗಳು ಅಂತಾನೇ ಹೇಳಲಾಗುತ್ತದೆ. ಇವರು ಯಾವ ಮನೆಗೆ ಹೋಗುತ್ತಾರೋ, ಅಥವಾ ಈ ಹೆಸರಿನ ಹೆಣ್ಣು ಮಕ್ಕಳಿರುವ ಮನೆಯಲ್ಲಿ ಎಂದಿಗೂ ಆರ್ಥಿಕ ಸಮಸ್ಯೆ ಬರುವುದಿಲ್ಲ. ಹಾಗಾಗಿ ಇವರು ಜೀವನಪೂರ್ತಿ ರಾಣಿಯಂತಿರುತ್ತಾರೆ.

ಸ, ಶ ಮತ್ತು ಕ್ಷ ಅಕ್ಷರದಿಂದ ಶುರುವಾಗುವ ಹೆಸರಿನ ಹೆಣ್ಣು ಮಕ್ಕಳು, ತಮಗಿಂತ, ತಮ್ಮ ಮನೆಯವರಿಗೆ ಹೆಚ್ಚು ಪ್ರೀತಿ ಪಾತ್ರರಾಗಿರುತ್ತಾರೆ. ಯಾಕಂದ್ರೆ ಇವರು ತಮ್ಮ ಮನೆಯವರಿಗೆ ಲಕ್ಕಿಯಾಗಿರ್ತಾರೆ. ಹಾಗಾಗಿ ಇವರಿಂದ ಮನೆಯವರಿಗೆ ಹೆಚ್ಚು ಸಹಾಯವಾಗುತ್ತದೆ. ಈ ಕಾರಣಕ್ಕೆ ಇವರು ಪತಿಯ ಮನೆಯವರಿಗೆ ಅದೃಷ್ಟಶಾಲಿಯಾಗಿರುತ್ತಾರೆ.

- Advertisement -

Latest Posts

Don't Miss