Saturday, July 27, 2024

Latest Posts

ಮದುವೆಯಾದರೂ, ಹನುಮಂತನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ..?

- Advertisement -

ಅಂಜನಿ ಪುತ್ರ ಆಂಜನೇಯನನ್ನು ರಾಮನಭಕ್ತನೆಂದು ಪೂಜಿಸಲಾಗುತ್ತದೆ. ಧೈರ್ಯಕ್ಕೆ ಹೆಸರಾಗಿರುವ ಹನುಮನನ್ನು ಪೂಜಿಸಿದರೆ, ನಮ್ಮಲ್ಲೂ ಧೈರ್ಯ ಬರುತ್ತದೆ, ಯಶಸ್ಸು ಸಿಗುತ್ತದೆ ಅನ್ನೋ ನಂಬಿಕೆ ಇದೆ. ಇದೇ ಹನುಮನನ್ನು ನಾವು ಬ್ರಹ್ಮಚಾರಿ ಎಂದು ಕರೆಯುತ್ತೇವೆ. ಆದ್ರೆ ಪುರಾಣ ಕಥೆಗಳಲ್ಲಿ ಹನುಮ ವಿವಾಹಿತ ಅಂತಾ ಹೇಳಲಾಗಿದೆ. ಹಾಗಾದ್ರೆ ವಿವಾಹವಾದ್ರೂ ಹನುಮನನ್ನು ಬ್ರಹ್ಮಚಾರಿ ಅಂತಾ ಕರಿಯೋದೇಕೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಹನುಮಂತ ಸೂರ್ಯದೇವನ ಶಿಷ್ಯರಾಗಿದ್ದರು. ಸೂರ್ಯದೇವನಿಂದ 9 ವಿದ್ಯೆಯನ್ನು ಕಲಿಯಲು ಬಯಸಿದ್ದರು. ಸೂರ್ಯದೇವ ಹನುಮನಿಗೆ 9ರಲ್ಲಿ 5 ವಿದ್ಯೆಯನ್ನ ಹೇಳಿಕೊಟ್ಟರು. ಆದ್ರೆ ಇನ್ನುಳಿದ ನಾಲ್ಕು ವಿದ್ಯೆ ಕಲಿಯಬೇಕಾದರೆ, ವಿವಾಹವಾಗಬೇಕಿತ್ತು. ವಿವಾಹವಾದರಷ್ಟೇ ಇನ್ನುಳಶಿದ ವಿದ್ಯೆ ಕಲಿಯುವುದು ಸಾಧ್ಯವಾಗಿತ್ತು. ಹಾಗಾಗಿ ಹನುಮನಿಗೆ ವಿವಾಹವಾಗದೇ ಬೇರೆ ದಾರಿ ಇರಲಿಲ್ಲ.

ಸೂರ್ಯದೇವನ ಪುತ್ರಿ ಸುವರ್ಚಲಾಳನ್ನೇ ಹನುಮ ಮದುವೆಯಾಗಬೇಕಿತ್ತು. ಹಾಗಾಗಿ ಸೂರ್ಯ ಹನುಮನನ್ನು ಕುರಿತು, ಸುವರ್ಚಲಾ ತಪಸ್ವಿ, ತೇಜಸ್ವಿ ಹೆಣ್ಣಾಗಿದ್ದಾಳೆ. ನೀನು ಆಕೆಯ ತೇಜಸ್ಸನ್ನ ತಡೆಯಲಾಗದಷ್ಟು ಶಕ್ತಿ ಆಕೆಯಲ್ಲಿದೆ. ಹಾಗಾಗಿ ನೀವು ಈಕೆಯನ್ನು ವಿವಾಹವಾದರೆ, ಉಳಿದ 4 ವಿದ್ಯೆಯನ್ನ ಕಲಿಯಲು ಅರ್ಹನಾಗುತ್ತಿಯಾ. ಆದ್ರೆ ಸುವರ್ಚಲಾಳನ್ನು ವಿವಾಹವಾದ ಬಳಿಕ, ಅವಳು ಪುನಃ ತಪಸ್ಸಿಗೆ ಹೊರಡುತ್ತಾಳೆ. ಹಾಗಾಗಿ ನೀವು ಅವಳೊಂದಿಗೆ ಸಂಸಾರ ಮಾಡಲು ಸಾಧ್ಯವಿಲ್ಲ ಎನ್ನುತ್ತಾನೆ.

ಇದಕ್ಕೆ ಒಪ್ಪಿದ ಹನುಮ ಸುವರ್ಚಲಾಳನ್ನು ವಿವಾಹವಾಗುತ್ತಾನೆ. ಉಳಿದ ವಿದ್ಯೆಯನ್ನು ಕಲಿಯುತ್ತಾನೆ. ಆದ್ರೆ ಹನುಮ ವಿವಾಹವಾಗಿಯೂ, ಸಂಸಾರ ಮಾಡದ ಕಾರಣ, ಬ್ರಹ್ಮಚಾರಿಯೇ ಎನ್ನಿಸಿಕೊಳ್ಳುತ್ತಾನೆ.

ಇನ್ನು ವರುಣ ದೇವ ಮತ್ತು ರಾವಣನ ಮಧ್ಯೆ ನಡೆದ ಯುದ್ಧದಲ್ಲಿ ಹನುಮ ವರುಣನ ಪರ ಯುದ್ಧ ಮಾಡುತ್ತಾನೆ. ಆಗ ರಾವಣ ಸೋತ ಕಾರಣಕ್ಕೆ ತನ್ನ ಪುತ್ರಿಯನ್ನೇ ಹನುಮನಿಗೆ ವಿವಾಹ ಮಾಡಿ ಕೊಡುತ್ತಾನೆ. ಆದರೂ ಕೂಡ ಹನುಮಂತ ಪತ್ನಿಯೊಂದಿಗೆ ಸಂಸಾರ ಮಾಡುವುದಿಲ್ಲ. ಇನ್ನೊಂದು ಕಥೆಯ ಪ್ರಕಾರ, ವರುಣ ದೇವ ಗೆದ್ದಿದ್ದಕ್ಕೆ, ಅವನೂ ಕೂಡ ತನ್ನ ಪುತ್ರಿಯನ್ನು ಹನುಮನಿಗೆ ಕೊಟ್ಟು ಮದುವೆ ಮಾಡಿದ. ಆದರೆ ಆಕೆಯೊಂದಿಗೂ ಹನುಮ ಸಂಸಾರ ಮಾಡಲಿಲ್ಲವೆಂದು ಹೇಳಲಾಗಿದೆ.

- Advertisement -

Latest Posts

Don't Miss