ದೇಹದ ತೂಕ ಇಳಿಸಲು ಹಲವರು ನಾನಾ ತರಹದ ಕಸರತ್ತು ಮಾಡುತ್ತಾರೆ. ಅದರಲ್ಲಿ ವಾಕಿಂಗ್ ಮತ್ತು ಜಾಗಿಂಗ್ ಕೂಡ ಒಂದು. ಆದ್ರೆ ತೂಕ ಇಳಿಸಲು ಯಾವುದಾದರೂ ಒಂದನ್ನು ಮಾಡಿದ್ರೆ ಸಾಕು. ಹಾಗಾದ್ರೆ ವೇಯ್ಟ್ ಲಾಸ್ ಮಾಡಲು ವಾಕಿಂಗ್ ಒಳ್ಳೆಯದೋ, ಜಾಗಿಂಗ್ ಒಳ್ಳೆಯದೋ..? ಅನ್ನೋ ಬಗ್ಗೆ ತಿಳಿಯೋಣ ಬನ್ನಿ..
ತೂಕ ಇಳಿಸಲು ವಾಕಿಂಗ್ ಮತ್ತು ಜಾಗಿಂಗ್ ಎರಡೂ ಕೂಡ ಸಹಾಯಕವಾಗಿದೆ. ಆದ್ರೆ ನೀವು 2 ನಿಮಿಷ ಜಾಗಿಂಗ್ ಮಾಡಿದ್ರೆ 3 ನಿಮಿಷ ವಾಕಿಂಗ್ ಮಾಡಬೇಕು. ಆದ್ರೆ ಜಾಗಿಂಗ್‌ಗಿಂತ ವಾಕಿಂಗ್ ಒಂದು ಪಟ್ಟು ಹೆಚ್ಚಿರಬೇಕು. ವಾಕಿಂಗ್ ಮಾಡುವಾಗ ನಿಮ್ಮೆರಡೂ ಪಾದಗಳು ಭೂಮಿಗೆ ತಾಗಿರುತ್ತದೆ. ಅದೇ ಜಾಗಿಂಗ್ ಮಾಡುವಾಗ ಒಂದು ಪಾದ ಭೂಮಿಗೆ ತಾಕುತ್ತದೆ. ಇದರಿಂದ ನಿಮ್ಮ ದೇಹದ ಮೇಲೆ ಹೆಚ್ಚು ಭಾರ ಬೀಳುತ್ತದೆ. ಹಾಗಾಗಿ ಜಾಗಿಂಗ್ ಕೂಡ ಮಾಡುವುದು ಮುಖ್ಯ.
ಆದರೆ ನಿಮ್ಮ ದೇಹದ ತೂಕ ಬೇಗ ಇಳಿಯಬೇಕು ಅಥವಾ ಜಾಗಿಂಗ್ ಮಾಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ಕಾರಣಕ್ಕೆ ನೀವು ಅಗತ್ಯಕ್ಕಿಂತ ಹೆಚ್ಚು, ನಡೆದರೆ ಅಥವಾ ಓಡಿದರೆ, ಅದರಿಂದ ನಿಮ್ಮ ಹೃದಯದ ಆರೋಗ್ಯ ಹಾಳಾಗುತ್ತದೆ. ಹೃದಯಕ್ಕೆ ಸರಿಯಾಗಿ ರಕ್ತ ಸಂಚಾರವಾಗುವುದಿಲ್ಲ. ಕೆಲವರು ಬೇಗ ತಮ್ಮ ತೂಕ ಇಳಿಯಬೇಕು ಎಂದು ಹೆಚ್ಚು ವಾರ್ಮಪ್, ಜಿಮ್, ಜಾಗಿಂಗ್ ಮಾಡುತ್ತಾರೆ. ಇದರಿಂದಲೇ ಅವರ ಹೃದಯದ ಆರೋಗ್ಯ ಹಾಳಾಗಿ, ಹಾರ್ಟ್ ಅಟ್ಯಾಕ್ ಬರುತ್ತದೆ.
ಇನ್ನು ಮುಖ್ಯವಾದ ವಿಷಯ ಅಂದ್ರೆ ನಿಮಗೆ ಈಗಾಗಲೇ ಹೃದಯದ ಸಮಸ್ಯೆ ಇದೆ. ಅಥವಾ ನೀವು ಅಗತ್ಯಕ್ಕಿಂತ ಹೆಚ್ಚು ದಪ್ಪಗಿದ್ದೀರಿ ಎಂದಲ್ಲಿ, ವೈದ್ಯರ ಬಳಿ ನಾನು ಜಾಗಿಂಗ್ ಮಾಡಬಹುದೇ ಎಂದು ಕೇಳಿ, ನಂತರ ಜಾಗಿಂಗ್ ಮಾಡಿ. ಇಲ್ಲವಾದಲ್ಲಿ, ವಾಕಿಂಗ್ ಮತ್ತು ಜಾಗಿಂಗ್ ನಿಮ್ಮ ಆರೋಗ್ಯ ಕಾಪಾಡುವುದು ಬಿಟ್ಟು, ನಿಮ್ಮ ಜೀವಕ್ಕೆ ಕುತ್ತು ತರುತ್ತದೆ.