Sunday, September 8, 2024

Latest Posts

ಮೊಹರಂ ಹಬ್ಬವನ್ನು ಯಾಕೆ ಆಚರಿಸಲಾಗತ್ತೆ..?- ಭಾಗ 1

- Advertisement -

ಆಗಸ್ಟ್ ತಿಂಗಳೆಂದರೆ, ಹಿಂದೂಗಳಿಗೆ ಹಬ್ಬಗಳ ಮಾಸ. ಆದರೆ ಈ ತಿಂಗಳು ಮೊಹರಂ ಹಬ್ಬದ ಆಚರಣೆಯನ್ನ ಕೂಡ ಮಾಡಲಾಗತ್ತೆ. ಕೆಲ ಊರುಗಳಲ್ಲಿ ಹಿಂದೂ ಮುಸ್ಲಿಂಮರು ಸೇರಿ ಮೊಹರಂ ಹಬ್ಬವನ್ನು ಆಚರಿಸುತ್ತಾರೆ. ಹಾಗಾದ್ರೆ ಈ ಮೊಹರಂ ಹಬ್ಬವನ್ನು ಆಚರಿಸೋದ್ಯಾಕೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ..

ಇಮಾಮ್ ಹುಸೇನ್ ಮತ್ತು ಅವರೊಂದಿಗೆ ಹುತಾತ್ಮರಾದ ಜನರ ನೆನಪಿಗಾಗಿ ಮೊಹರಂ ಹಬ್ಬವನ್ನು ಆಚರಿಸಲಾಗತ್ತೆ. ಮೊಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿದೆ. ಇದರಲ್ಲಿ ಮೊದಲ ಹತ್ತು ದಿನ ಇಮಾಮ್ ಹುಸೇನ್‌ರಿಗಾಗಿ ಶೋಕಾಚರಣೆ ಮಾಡಲಾಗತ್ತೆ. ಇನ್ನು ಇಮಾಮ್ ಹುಸೇನ್ ಮೊಹಮ್ಮದ್ ಪೈಗಂಬರರ ಮೊಮ್ಮಗನಾಗಿದ್ದರು. ಇವರು ಹುತಾತ್ಮರಾಗಿದ್ದು ಯಾಕೆ ಅಂತಾ ಹೇಳೋದಾದ್ರೆ, ಸಿರಿಯಾ ದೇಶದಲ್ಲಿ ಯಜೀದ್ ಎಂಬುವವನು ತನ್ನನ್ನೇ ಖಲಿಫಾ ಎಂದು ಘೋಷಣೆ ಮಾಡಿಕೊಂಡ.

ಆತನ ಆಡಳಿತದಿಂದ ಅಲ್ಲಿನ ಜನ ಬೇಸತ್ತು ಹೋಗಿತ್ತು. ಅಲ್ಲದೇ ಮಕ್ಕಾದಲ್ಲಿದ್ದ ಇಮಾಮ್ ಹುಸೇನ್, ಯಜೀದ್‌ನನ್ನು ಖಲೀಫಾ ಎಂದು ಒಪ್ಪಿಕೊಳ್ಳಲಲು ತಯಾರಿರಲಿಲ್ಲ. ಹೀಗಾಗಿ ಯಜೀದ್ ಮದೀನಾದ ರಾಜ್ಯಪಾಲರ ಮಗನಿಗೆ ಒಂದು ಸಂದೇಶ ಕಳುಹಿಸಿದ. ಅದೇನೆಂದರೆ, ಇಮಾಮ್‌ ಹುಸೇನ್ ತನ್ನನ್ನು ಖಲೀಫಾ ಎಂದು ಒಪ್ಪಿಕೊಳ್ಳುವಂತೆ ರಾಜಿ ಮಾಡಿ ಎಂದು ಹೇಳಿದ್ದ. ಹಾಗೇನಾದರೂ ಇದನ್ನು ಇಮಾಮ್ ಒಪ್ಪಿಕೊಳ್ಳದಿದ್ದಲ್ಲಿ, ಅವರ ತಲೆಯನ್ನು ಕಡಿದು ಹಾಕುವುದಾಗಿ ಬೆದರಿಕೆ ಹಾಕಿದ.

ಆಗ ರಾಜ್ಯಪಾಲರ ಮಗ, ಇಮಾಮ್ ಹುಸೇನ್‌ರನ್ನು ರಾಜಭವನಕ್ಕೆ ಕರೆಸಿಕೊಂಡು, ಯಜೀದ್ ಕಳುಹಿಸಿದ್ದ ಪತ್ರವನ್ನು ಓದಿ ಹೇಳಿದರು. ಆಗ ಇಮಾಮ್ ಹುಸೇನ್, ನಾನು ಓರ್ವ ಭ್ರಷ್ಟಾಚಾರಿ, ವ್ಯಭಿಚಾರಿ ಮತ್ತು ಅಲ್ಲಾಹುನನ್ನು ನಂಬದ ಯಜೀದ್‌ನ ಆಡಳಿತವನ್ನು ಒಪ್ಪುವುದಿಲ್ಲ ಎಂದು ಹೇಳುತ್ತಾರೆ. ಇದಾದ ಬಳಿಕ ಅವರು ಮಕ್ಕಾ ಮದೀನಾ ಯಾತ್ರೆ ಪೂರ್ಣಗೊಳಿಸಲು ತೆರಳುತ್ತಾರೆ. ಇದಾದ ಬಳಿಕ ಏನಾಯಿತು ಅನ್ನೋದನ್ನ ಮುಂದಿನ ಭಾಗದಲ್ಲಿ ತಿಳಿಯೋಣ..

- Advertisement -

Latest Posts

Don't Miss