Tuesday, October 14, 2025

Latest Posts

ಮೊಹರಂ ಹಬ್ಬವನ್ನು ಯಾಕೆ ಆಚರಿಸಲಾಗತ್ತೆ..?- ಭಾಗ 2

- Advertisement -

ಮೊದಲ ಭಾಗದಲ್ಲಿ ನಾವು ಇಮಾಮ್ ಹುಸೇನ್, ಯಜೀದ್ ಬೆದರಿಕೆಗೆ ಜಗ್ಗದೇ, ಮಕ್ಕಾ ಮದೀನಾ ಯಾತ್ರೆ ಮುಂದುವರಿಸಲು ಹೋದರು ಅನ್ನೋವರೆಗೆ ಹೇಳಿದ್ದೆವು. ಇಂದು ಮುಂದುವರಿದ ಭಾಗವಾಗಿ, ಮುಂದೇನಾಯಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಆಗ ಯಜೀದ್, ಹುಸೇನ್‌ರನ್ನು ಕೊಲ್ಲಲು, ಮಕ್ಕಾಗೆ ತನ್ನ ಸೈನಿಕರನ್ನು ಕಳುಹಿಸುತ್ತಾನೆ. ಇದು ಇಮಾಮ್ ಹುಸೇನ್‌ಗೆ ತಿಳಿಯುತ್ತದೆ. ಮತ್ತು ಇಸ್ಲಾಂ ಧರ್ಮದ ಪದ್ಧತಿ ಪ್ರಕಾರ, ಮಕ್ಕಾದಲ್ಲಿ ಕೊಲೆ, ಸುಲಿಗೆ ನಿಷೇಧ. ಹಾಗೆ ಮಾಡುವುದು ಪಾಪವೆಂಬ ನಂಬಿಕೆ ಇದೆ. ಹಾಗಾಗಿ ಇಮಾಮ್ ಹುಸೇನ್ ತಮ್ಮ ಪರಿವಾರದೊಂದಿಗೆ, ಇರಾನ್ ಹೋಗುವ ತಯಾರಿ ಮಾಡುತ್ತಾರೆ.

ಹೀಗೆ ಹೋಗುವಾಗ, ಇಮಾಮ್ ಹುಸೇನ್ ಮತ್ತು ಅವರ ಕುಟುಂಬಸ್ಥರನ್ನ, ಬೆಂಬಲಿಗರನ್ನ ಯಜೀದ್ ಸೈನಿಕರು ಆವರಿಸಿದರು. ಆಗ ಇಮಾಮ್ ಹುಸೇನ್ ಆ ಸೈನಿಕರಿಗೆ 8 ದಿನಗಳ ಕಾಲ ಅಲ್ಲಾಹುವಿನ ಬಗ್ಗೆ, ಒಳ್ಳೆಯತನದ ಬಗ್ಗೆ ಮಾಹಿತಿ ನೀಡಿದರು. ಆದರೂ ಕೂಡ, ಸೈನಿಕರು ತಮ್ಮ ಕ್ರೂರತ್ವ ಬಿಡಲಿಲ್ಲ. ಆಗ ಇಮಾಮ್ ಹುಸೇನ್ ತನಗೆ ಅಲ್ಲಾಹುವಿಗೆ ಧನ್ಯವಾದ ಹೇಳಲು ಒಂದು ರಾತ್ರಿ ಅವಕಾಶ ಬೇಕೆಂದು ಕೇಳಿದರು. ಅದಕ್ಕೆ ಸೈನಿಕರು ಒಪ್ಪಿಗೆ ನೀಡಿದರು.

ಇದಾದ ಬಳಿಕ ಯಜೀದ್ ಸೈನಿಕ ಇಮಾಮ್ ಸೈನ್ಯದ ಮೇಲೆ ಬಾಣ ಬಿಟ್ಟ, ಯುದ್ಧ ಶುರುವಾಯಿತು. ಇಮಾಮ್ ಬೆಂಬಲಿಗರೆಲ್ಲ ಸತ್ತರು. ಇಮಾಮ್ ಒಬ್ಬರೇ ಬದುಕುಳಿದರು. ಅವರ 6 ತಿಂಗಳ ಮಗು ಬಾಯಾರಿಕೆಯಿಂದ ಅಳುತ್ತಿತ್ತು. ಹಾಗಾಗಿ ಅವರು ಸೈನಿಕರ ಬಳಿ, ತಮ್ಮ ಮಗುವಿಗೆ ನೀರು ಕೊಡಲು ಹೇಳಿದರು. ಆದರೆ ಕ್ರೂರ ಸೈನಿಕರು ಆ ಮಗುವನ್ನು ಮತ್ತು ಇಮಾಮ್ ಹುಸೇನ್‌ರನ್ನು ಬಾಣಬಿಟ್ಟು ಕೊಂದುಬಿಟ್ಟರು.

ಈ ಕಾರಣಕ್ಕೆ ಮೊಹರಂನ್ನು ಶೋಕದಿನವನ್ನಾಗಿ ಆಚರಿಸಲಾಗತ್ತೆ. ಈ ದಿನ ಕೆಲವು ಕಡೆ ಇಸ್ಲಾಂ ಧರ್ಮದವರು, ತಮ್ಮ ದೇಹಕ್ಕೆ ಹೊಡೆದುಕೊಂಡು, ಶೋಕಾಚರಣೆ ಮಾಡುತ್ತಾರೆ. ಇನ್ನು ಕೆಲವನು ಕಡೆ ಇಸ್ಲಾಂ ದೇವರನ್ನು ಮೆರವಣಿಗೆ ಮಾಡಲಾಗತ್ತೆ. ಇದನ್ನು ಮೊಹರಂ ಪಂಜಾ ಎಂದು ಹೇಳಲಾಗತ್ತೆ. ಶೋಕಾಚರಣೆ ಬಳಿಕ ಚೋಂಗೆ ಎನ್ನುವ ಸಿಹಿ ತಿಂಡಿ ಮಾಡಲಾಗತ್ತೆ.

- Advertisement -

Latest Posts

Don't Miss