Spiritual: ದಕ್ಷಿಣ ಕನ್ನಡದಲ್ಲಿರುವ ಹಲವಾರು ಪ್ರಸಿದ್ಧ ದೇವಸ್ಥಾನಗಳಲ್ಲಿ, ಬೆಳ್ತಂಗಡಿಯ ಸೂರ್ಯನಾರಾಯಣ ದೇವಸ್ಥಾನ ಕೂಡ ಒಂದು. ಈ ದೇವಸ್ಥಾನ ಮಣ್ಣಿನ ಹರಕೆಯ ದೇವಸ್ಥಾನವೆಂದೇ ಪ್ರಸಿದ್ಧವಾಗಿದೆ. ಹಾಗಾದ್ರೆ ಈ ದೇವಸ್ಥಾನದ ಪ್ರಾಮುಖ್ಯತೆ ಏನು ಅಂತಾ ತಿಳಿಯೋಣ ಬನ್ನಿ..
ಈ ಸೂರ್ಯ ನಾರಾಯಣ ದೇವಸ್ಥಾನವನ್ನು ಸದಾಶಿವ ರುದ್ರ ದೇವಸ್ಥಾನವೆಂದು ಕರೆಯುತ್ತಾರೆ. ಇದು ಸೂರ್ಯ ಎಂಬ ಹಳ್ಳಿಯಲ್ಲಿರುವ ಕಾರಣ, ಇದಕ್ಕೆ ಸೂರ್ಯನಾರಾಯಣ ದೇವಸ್ಥಾನವೆಂದು ಹೆಸರು ಬಂತು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ಈ ದೇವಸ್ಥಾನವಿದೆ. ಓರ್ವ ಮಹಿಳೆ ತನ್ನ ಮಗ ಸೂರೆಯನೊಂದಿಗೆ, ಹುಲ್ಲು ಹರೆಯಲು ಹೋಗಿರುತ್ತಾಳೆ. ಆಗ ಆಕೆ ಹುಲ್ಲು ಹರಿಯುವಾಗ, ಕತ್ತಿ ತಾಗಿ ಶಿವಲಿಂಗದಿಂದ ರಕ್ತ ಹರಿಯಿತು. ಆಗ ಆಕೆ ಗಾಬರಿಗೊಂಡು, ಸೂರೆಯ ಎಂದು ಕರೆದಳು. ಆಗ ಈ ಊರಿಗೆ ಸೂರಯ ಎಂಬ ಹೆಸರು ಬಂತು ಎಂದು ಹೇಳಲಾಗುತ್ತದೆ. ಕ್ರಮೇಣ ಇದನ್ನು ಸೂರ್ಯ ಎಂದು ಹೇಳಲಾಗಿದೆ.
ರಕ್ತ ಸುರಿದ ಶಿವಲಿಂಗಲೇ ಸದಾಶಿವ ರುದ್ರನಾಗಿ ಪೂಜಿಸಲ್ಪಡುತ್ತಿರುವ ಲಿಂಗವೆಂದು ಹೇಳಲಾಗುತ್ತದೆ. ಇದು ಮಣ್ಣಿನ ಹರಕೆಯ ಕ್ಷೇತ್ರವೆಂದೇ ಪ್ರಸಿದ್ಧವಾಗಿದ್ದು, ಇಲ್ಲಿರುವ ಹರಕೆಬನದಲ್ಲಿ, ಜನ ತಮ್ಮ ಮಣ್ಣಿನ ಮೂರ್ತಿಯ ಹರಕೆ ಸಲ್ಲಿಸಿ, ಪೂಜೆ ಮಾಡುತ್ತಾರೆ. ನಿಮಗೆ ಮನೆ ಕಟ್ಟಿಸುವುದಿದ್ದರೆ, ಮದುವೆ ಆಗಬೇಕೆಂದಿದ್ದರೆ, ಸಂತಾನ ಭಾಗ್ಯಕ್ಕಾಗಿ ಮಣ್ಣಿನ ಗೊಂಬೆ ಮಾಡಿ ಹರಕೆ ಕೊಡಬೇಕಾಗುತ್ತದೆ.
ನೀವು ಈ ದೇವಸ್ಥಾನಕ್ಕೆ ಬಂದು ನನಗೆ ಮದುವೆಯಾದರೆ, ಅಥವಾ ಮಕ್ಕಳಾದರೆ, ಅಥವಾ ಮಮನೆ ಕಟ್ಟಿಸಾದ ಬಳಿಕ ಬಂದು ನಿನ್ನಲ್ಲಿ ಹರಕೆ ಸಲ್ಲಿಸುತ್ತೇನೆ. ನನ್ನ ಆಸೆಯನ್ನು ಈಡೇರಿಸು ಎಂದು ಬೇಡಿ, ಪೂಜೆ ಸಲ್ಲಿಸಿ, ಹೋದರೆ, ಆ ಕೆಲಸ ನಿಶ್ಚಿತವಾಗಿ ಆಗುತ್ತದೆ ಎಂಬ ನಂಬಿಕೆ ಇದೆ. ನಿಮ್ಮ ಆಸೆ ಈಡೇರಿದ ಬಳಿಕ ಇಲ್ಲಿ ಬಂದು, ಇಲ್ಲೇ ಸಿಗುವ ಮಣ್ಣಿನ ಮನೆ, ಜೋಡಿ ಗೊಂಬೆ, ತೊಟ್ಟಿಲನ್ನು ಹರಕೆ ಬನಕ್ಕೆ ಒಪ್ಪಿಸಿ, ಪೂಜೆ ಸಲ್ಲಿಸಿ ಹೋಗಬೇಕು.
ಈ ಪದ್ಧತಿ ಹೇಗೆ ಶುರುವಾಯಿತು ಎಂಬ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಆದರೆ ಹರಕೆ ಬನದಲ್ಲಿ ನೀವು ರಾಶಿ ರಾಶಿ ಹರಕೆಯ ಮಣ್ಣಿನ ಗೊಂಬೆಗಳನ್ನ ಕಾಣಬಹುದು. ಇಲ್ಲಿ ಬರೀ ಮಕ್ಕಳು, ಮದುವೆ, ಮನೆ ಬಗ್ಗೆ ಅಲ್ಲದೇ, ಆರೋಗ್ಯ ಅಭಿವೃದ್ಧಿಯಾಗಲು, ಅಥವಾ ಯಾವುದಾದರೂ ರೋಗ ವಾಸಿಯಾಗಬೇಕು ಎಂದರೆ, ಇಲ್ಲಿ ಅದರದ್ದೇ ಗೊಂಬೆ ಮಾಡಿ ಹರಕೆ ಸಲ್ಲಿಸುತ್ತಾರೆ. ಉದಾಹರಣೆಗೆ ಹಾರ್ಟ್ ಪೇಶೆಂಟ್ ಆರೋಗ್ಯ ಸರಿಯಾಗಬೇಕು ಅಂದ್ರೆ, ಮಣ್ಣಿನ ಹಾರ್ಟ್ ಮಾಡಿ, ಇಲ್‌ಲಿ ಹರಕೆ ಸಲ್ಲಿಸಲಾಗುತ್ತದೆ. ಇಲ್ಲಿ ಎಷ್ಟೋ ಜನ ತಮ್ಮ ಆಸೆ ಈಡೇರಿಸಿಕೊಂಡು, ಹರಕೆ ಸಲ್ಲಿಸಿದ್ದಾರೆ.
ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..