ನೀವು ಪೌರಾಣಿಕ ಧಾರಾವಾಹಿ ನೋಡುವಾಗ, ಸಿನಿಮಾ ನೋಡವಾಗ ಅದರಲ್ಲಿ ದೇವತೆಗಳು ಮದಿರೆಯನ್ನ ಸೇವನೆ ಮಾಡುತ್ತಾರೆ. ಹೀಗಾಗಿಯೇ ಕೆಲವು ಉದ್ಧಟರು, ಅಂದಿನ ಕಾಲದಲ್ಲಿ ದೇವತಗೆಳೇ ಕುಡಿಯುತ್ತಿದ್ದರು, ನಾವ್ಯಾಕೆ ಕುಡಿಯಬಾರದು ಅನ್ನೋ ಪ್ರಶ್ನೆ ಕೇಳ್ತಾರೆ. ಆದ್ರೆ ಅಂದು ದೇವತೆಗಳು ಕುಡಿಯುತ್ತಿದ್ದದ್ದು, ಸೋಮರಸ. ಹಾಗಾದ್ರೆ , ಸೋಮರಸ ಎಂದರೇನು ಅಂತಾ ತಿಳಿಯೋಣ ಬನ್ನಿ..
ಅಂದು ದೇವತೆಗಳು ಕುಡಿಯುತ್ತಿದ್ದುದ್ದು ಸೋಮರಸ. ಮದಿರೆಯಲ್ಲ. ಆದ್ರೆ ಇಂದಿನ ಕಾಲದವರು ಕುಡಿಯುತ್ತಿರುವುದು ಮದಿರೆ. ಮದಿರೆ ಎಂದರೆ, ಮತ್ತೇರಿಸುವ ಪಾನ. ಆದ್ರೆ ಸೋಮರಸವೆಂಬುದು, ಮದಿರೆಯಷ್ಟು ಕೆಟ್ಟದ್ದಾಗಿರಲಿಲ್ಲ. ಹಾಗಾಗಿಯೇ ದೇವತೆಗಳು ಸೋಮರಸವನ್ನ ಕುಡಿಯುತ್ತಿದ್ದರು. ಸೋಮ ಬಳಸಿ ಮಾಡಿದ ರಸವೇ, ಸೋಮರಸ. ಸೋಮ ಎಂದರೆ, ಒಂದು ಗಿಡದ ಹೆಸರು. ಈ ಗಿಡದ ಎಲೆಯನ್ನ ಔಷಧಿಯ ರೂಪದಲ್ಲಿಯೂ ಬಳಸಲಾಗತ್ತೆ.
ಪೌರಾಣಿಕ ಕಥೆಗಳ ಪ್ರಕಾರ, ದೇವತೆಗಳನ್ನು ಒಲಿಸಿಕೊಳ್ಳಲು ಸೋಮರಸವನ್ನ ಬಳಸಲಾಗುತ್ತಿತ್ತು. ಯಜ್ಞ ಯಾಗಾದಿಗಳನ್ನ ಮಾಡುವಾಗ, ಸೋಮರಸವನ್ನು ತಯಾರಿಸಿ, ದೇವತೆಗಳನ್ನ ಪೂಜೆ ಮಾಡಿ, ಅವರನ್ನು ಸೋಮರಸ ಸೇವನೆಗೆ ಆಹ್ವಾನಿಸಲಾಗುತ್ತಿತ್ತು. ಆ ಯಾಗ ಯಜ್ಞದಿಂದ ದೇವತೆಗಳು ಸಂತುಷ್ಟರಾಗಿದ್ದರೆ, ಅವರು ಬಂದು ಸೋಮರಸವನ್ನ ಸೇವನೆ ಮಾಡಿ, ಬೇಕಾದ ವರವನ್ನು ಕೊಟ್ಟು ಹೋಗುತ್ತಿದ್ದರು. ಅದರಲ್ಲೂ ಇಂದ್ರದೇವನನ್ನು ಒಲಿಸಿಕೊಳ್ಳಲು ಸೋಮರಸವನ್ನ ಮಾಡಲಾಗುತ್ತಿತ್ತು ಎಂದು ಹೇಳಲಾಗುತ್ತದೆ. ಸೋಮ ಗಿಡದ ಎಲೆ, ಮೊಸರು, ಕಲ್ಲು ಸಕ್ಕರೆ ಮತ್ತು ಜೇನನನ್ನು ಬೆರೆಸಿ ಸೋಮರಸವನ್ನು ತಯಾರಿಸಲಾಗುತ್ತದೆ ಎಂದು ಕೆಲ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ.