Thursday, September 19, 2024

Latest Posts

ರೆಡಿಯೇಶನ್ ಎಫೆಕ್ಟ್ ಆಗಬಾರದು ಅಂದ್ರೆ ಮೊಬೈಲ್, ಲ್ಯಾಪ್ಟಾಪ್ ಹೇಗೆ ಬಳಸಬೇಕು..?

- Advertisement -

ಇಂದಿನ ಜೀವಮಾನದಲ್ಲಿ ಜನ ಒಂದು ಹೊತ್ತಿನ ಊಟ ಬಿಟ್ಟು ಬೇಕಾದ್ರೂ ಬದುಕಬಲ್ಲರು, ಆದ್ರೆ ಮೊಬೈಲ್ ಬಿಟ್ಟಲ್ಲ. ಇನ್ನು ಕೆಲಸಕ್ಕೆ ಹೋಗುವವರು, ಯಾವಾಗಲೂ ಲ್ಯಾಪ್‌ಟಾಪನ್ನ ಕುಟ್ಟುತ್ತಲೇ ಇರುತ್ತಾರೆ. ಹೀಗಿರುವಾಗ, ಅದರ ರೆಡಿಯೇಶನ್ ಎಫೆಕ್ಟ್ ಆಗದೇ ಇರತ್ತಾ ಹೇಳಿ..? ಈ ವಿಕಿರಣದ ಪರಿಣಾಮವಾಗಿ ನಮಗೆ ಹಲವು ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮೊಬೈಲ್ ಮತ್ತು ಲ್ಯಾಪ್‌ಟಾಪ್ ಯಾವ ರೀತಿ ಬಳಸಿ, ಈ ವಿಕಿರಣದ ಪರಿಣಾಮ ಕಡಿಮೆ ಮಾಡಿಕೊಳ್ಳಬಹುದು ಅನ್ನೋ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇಂದಿನ ದಿನಗಳಲ್ಲಿ ಮೊಬೈಲ್, ಲ್ಯಾಪ್‌ಟಾಪ್, ಟ್ಯಾಬ್ಲೇಟ್ ಮತ್ತು ವೈಫೈ ರೌಟರ್ ಬಳಸೋದು ಬರೀ ಶೋಕಿಗಲ್ಲ. ಹೆಚ್ಚಿನ ಅವಶ್ಯಕತೆ ಇರುವ ಕಾರಣಕ್ಕೆ. ಆದ್ರೆ ಇದನ್ನ ಸರಿಯಾದ ರೀತಿಯಲ್ಲಿ ಬಳಸುವುದರಿಂದ, ಇದರಿಂದ ನಮ್ಮ ಆರೋಗ್ಯಕ್ಕೆ ಯಾವ ಹಾನಿಯೂ ಉಂಟಾಗುವುದಿಲ್ಲ.

ಪಂಚರತ್ನ ರಥಯಾತ್ರೆ, ಕುಮಾರಸ್ವಾಮಿ ಗ್ರಾಮವಾಸ್ತವ್ಯಕ್ಕೆ ಭರ್ಜರಿ ತಯಾರಿ..

ಮೊದಲನೇಯದಾಗಿ ನೀವು ನಿಮ್ಮ ಮನೆಯಲ್ಲಿ ವೈ ಫೈ ರೋಟರ್ ಬಳಸುವುದಿದ್ದರೆ, ಅದನ್ನ ಹಾಲ್‌ನಲ್ಲಿರಿಸಿ. ಯಾವುದೇ ಕಾರಣಕ್ಕೂ ನಿಮ್ಮ ಮಲಗುವ ಕೋಣೆಯಲ್ಲಿ ಇರಿಸಬೇಡಿ. ಮತ್ತು ಹಾಲ್‌ನಲ್ಲಿ ಯಾರೂ ಮಲಗಬೇಡಿ. ಯಾಕಂದ್ರೆ ವೈಫೈ ನಿಂದ ಹೊರ ಬರುವ ವಿಕಿರಣಗಳಿಂದ ತಲೆ ನೋವು ಬರುವ ಸಾಧ್ಯತೆ ಇರುತ್ತದೆ. ಪುರುಷತ್ವ ನಾಶವಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ಮಲಗುವ ಸಮಯದಲ್ಲಿ ನಿಮ್ಮ ರೂಮ್‌ನಲ್ಲಿ ವೈ ಫೈ ರೋಟರ್ ಇರಬಾರದು.

ಎರಡನೇಯದಾಗಿ ಮೊಬೈಲ್ ಬಳಕೆ. ಮಲಗುವ ಒಂದು ಗಂಟೆ ಮುಂಚೆಯಾದ್ರೂ ನೀವು ಮೊಬೈಲ್ ಬಳಸುವುದನ್ನ ಸ್ಟಾಪ್ ಮಾಡಿ. ನಿಮ್ಮ ರೂಮ್‌ನಲ್ಲಿ ಬೆಡ್‌ನಿಂದ ಸ್ವಲ್ಪ ದೂರದ ಜಾಗದಲ್ಲಿ ಮೊಬೈಲ್ ಇರಿಸಿ. ಜೊತೆಗೆ ಬೇಗ ಏಳಲು ಅಲಾಂ ಕೂಡ ಇರಿಸಿ. ಇದರಿಂದ ನೀವು ಅಲಾಂ ಬಾರಿಸಿದ ಬಳಿಕ, ಮೊಬೈಲ್ ತೆಗೆದುಕೊಳ್ಳಲು ದೂರ ಹೋದಂತಾಗುತ್ತದೆ. ಬೇಗ ಎದ್ದ ಹಾಗೆಯೂ ಆಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಮೊಬೈಲ್‌ನ್ನ ಎದೆಯ ಬಳಿ, ತಲೆಯ ಬಳಿ ಇಟ್ಟುಕೊಳ್ಳಬೇಡಿ.

ಕಾಡುಕೊತ್ತನಹಳ್ಳಿ ಗ್ರಾಮ ಮಾದರಿ ಗ್ರಾಮವಾಗಬೇಕು: ಕೆ.ಗೋಪಾಲಯ್ಯ

ಮೂರನೇಯದಾಗಿ ಲ್ಯಾಪ್‌ಟಾಪ್. ಕೆಲಸ ಮಾಡುವವರಿಗೆ ಲ್ಯಾಪ್‌ಟಾಪ್ ಅವಶ್ಯಕತೆ ಹೆಚ್ಚಿರುತ್ತದೆ. ಕೆಲವರು ಇದನ್ನ ತೊಡೆಯ ಮೇಲಿಟ್ಟು ಕೆಲಸ ಮಾಡಿದ್ರೆ, ಇನ್ನು ಕೆಲವರು ತೊಡೆಯ ಮೇಲೆ ದಿಂಬಿಟ್ಟು, ಅದರ ಮೇಲೆ ಲ್ಯಾಪ್‌ಟಾಪ್‌ ಇಟ್ಟುಕೊಳ್ಳುತ್ತಾರೆ. ಇವೆರಡು ಕೂಡ ತಪ್ಪು. ನಿಮ್ಮ ಮುಂದೆ ಒಂದು ಟೇಬಲ್ ಇರಿಸಿ, ಅದರ ಮೇಲೆ ಲ್ಯಾಪ್‌ಟಾಪ್ ಇರಿಸಿ, ಸಪರೇಟ್ ಆಗಿರುವ ಮೌಸ್ ಮತ್ತು ಕೀಬೋರ್ಡ್ ಬಳಸಿ. ಹೀಗೆ ಮಾಡುವುದು ಆರೋಗ್ಯಕ್ಕೆ ಉತ್ತಮ.

- Advertisement -

Latest Posts

Don't Miss