Friday, November 22, 2024

Latest Posts

ಹಸುವಿನ ಶುದ್ಧ ತುಪ್ಪ ಸೇವಿಸುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

- Advertisement -

Health Tips: ಇತ್ತೀಚಿನ ದಿನಗಳಲ್ಲಿ ಹಲವರಿಗೆ ತುಪ್ಪದ ಬಗ್ಗೆ ಭಿನ್ನ ಭಿನ್ನವಾದ ಅಭಿಪ್ರಾಯವಿದೆ. ಕೆಲವರು ತುಪ್ಪ ತಿಂದ್ರೆ ಆರೋಗ್ಯಕ್ಕೆ ಲಾಭ ಎಂದು ಹೇಳುತ್ತಾರೆ. ಇನ್ನು ಕೆಲವರು ಡಯಟ್ ಮಾಡುವವರು, ತೂಕ ಇಳಿಸಲು ಇಚ್ಛಿಸುವವರು ತುಪ್ಪ ತಿನ್ನಬಾರದು ಅಂತಾ ಹೇಳ್ತಾರೆ. ಹಾಗಾದ್ರೆ ತುಪ್ಪ ತಿನ್ನುವುದು ಆರೋಗ್ಯಕ್ಕೆ ಲಾಭವೋ..? ನಷ್ಟವೋ..? ಅಂತಾ ತಿಳಿಯೋಣ ಬನ್ನಿ..

ತುಪ್ಪ ತಿನ್ನುವುದು ಆರೋಗ್ಯಕ್ಕೆ ತುಂಬಾನೇ ಉತ್ತಮ. ಆಯುರ್ವೇದದಲ್ಲಿ ಹಲವು ಔಷಧಿಗಳನ್ನು ತುಪ್ಪದೊಂದಿಗೆ ಸೇವನೆ ಮಾಡಲಾಗುತ್ತದೆ. ಅಗತ್ಯಕ್ಕಿಂತ ಹೆಚ್ಚು ಅಮೃತ ಕುಡಿದರೂ ವಿಷವೇ ಎಂಬಂತೆ, ನೀವು ತುಪ್ಪ ಆರೋಗ್ಯಕ್ಕೆ ಉತ್ತಮವೆಂದು, ಅಗತ್ಯಕ್ಕಿಂತ ಹೆಚ್ಚು ತುಪ್ಪ ತಿಂದರೆ, ಅದರಿಂದ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ. ಹಾಗಾಗಿ ಲಿಮಿಟಿನಲ್ಲಿ ನೀವು ಪ್ರತಿದಿನ ತುಪ್ಪದ ಸೇವನೆ ಮಾಡಬಹುದು.

ತುಪ್ಪ ತಿನ್ನುವುದರಿಂದ ನಿಮ್ಮ ಬುದ್ಧಿಶಕ್ತಿ ಉತ್ತಮವಾಗುತ್ತದೆ. ಕಣ್ಣಿನ ಆರೋಗ್ಯ ಹೆಚ್ಚಾಗುತ್ತದೆ. ಮುಖದಲ್ಲಿ ಕಾಂತಿ ಬರುತ್ತದೆ. ಕೂದಲ ಆರೋಗ್ಯವೂ ಉತ್ತಮವಾಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಬೇಕು ಎಂದಲ್ಲಿ ನೀವು ತುಪ್ಪದ ಸೇವನೆ ಖಂಡಿತ ಮಾಡಬೇಕು. ಅಷ್ಟೇ ಯಾಕೆ ನಿಮ್ಮ ಮೂಳೆ ಗಟ್ಟಿಮುಟ್ಟಾಗಿರಬೇಕು ಅಂದ್ರೆ ನೀವು ತುಪ್ಪವನ್ನು ತಿನ್ನಲೇಬೇಕು. ಅದಕ್ಕಾಗಿಯೇ ಗರ್ಭಿಣಿಯರಿಗೆ, ಬಾಣಂತಿಯರಿಗೆ ತುಪ್ಪದ ಸೇವನೆ ಮಾಡಲು ಹೇಳಲಾಗುತ್ತದೆ. ತುಪ್ಪ ತಿನ್ನುವುದರಿಂದ, ತಾಯಿ ಮಗು ಇಬ್ಬರೂ ಗಟ್ಟಿಮುಟ್ಟಾಗಿ, ಆರೋಗ್ಯವಾಗಿ ಇರುತ್ತಾರೆ.

ತುಪ್ಪ ತಿನ್ನುವುದರಿಂದ ಜೀರ್ಣಕ್ರಿಯೆ ಶಕ್ತಿ ಅತ್ಯುತ್ತಮವಾಗುತ್ತದೆ. ಹಾಗಂತ ನೀವು ಪೂರಿಯನ್ನ ಅಥವಾ ಯಾವುದಾದರೂ ಸಿಹಿ ತಿಂಡಿಯನ್ನ ತುಪ್ಪದಲ್ಲಿ ಕರಿದು ತಿನ್ನುವುದು ಅಂತಲ್ಲ. ಬದಲಾಗಿ ರೊಟ್ಟಿ, ಚಪಾತಿ ಅಥವಾ ಅನ್ನದ ಜೊತೆ ಒಂದು ಸ್ಪೂನ್ ತುಪ್ಪವನ್ನ ಸೇರಿಸಿ ತಿನ್ನಬೇಕು. ಅದನ್ನು ಬಿಟ್ಟು, ತುಪ್ಪ ಆರೋಗ್ಯಕ್ಕೆ ಉತ್ತಮವೆಂದು, ಸಿಕ್ಕ ಸಿಕ್ಕ ಆಹಾರವನ್ನು ತುಪ್ಪದಲ್ಲಿ ಕರಿದು ತಿಂದರೆ, ನಿಮ್ಮ ಆರೋಗ್ಯ ಅಭಿವೃದ್ಧಿಯಾಗುವ ಬದಲು, ಹಾಳಾಗುತ್ತದೆ.

ಇನ್ನು ಇಲ್ಲಿ ತುಪ್ಪವೆಂದರೆ, ಹಸುವಿನ ಶುದ್ಧ ತುಪ್ಪ. ಹಲವರು ಎಮ್ಮೆ ತುಪ್ಪವನ್ನು ತಿನ್ನುತ್ತಾರೆ. ಎಮ್ಮೆ ಹಾಲಿನ ತುಪ್ಪವೂ ಒಳ್ಳೆಯದು. ಆದರೆ ಅದರಿಂದ ದೇಹವಷ್ಟೇ ಬೆಳೆಯುತ್ತದೆ ಹೊರತು ಬುದ್ಧಿ, ಆರೋಗ್ಯ ಬೆಳೆಯುವುದಿಲ್ಲ. ಹಾಗಾಗಿ ನಿಮ್ಮ ಬಾಡಿ ಬಿಲ್ಡ್ ಮಾಡುವುದಿದ್ದಲ್ಲಿ, ನೀವು ಎಣ್ಣೆಯ ತುಪ್ಪ ತಿನ್ನಬಹುದು. ಆದರೆ, ನಿಮ್ಮ ಬುದ್ಧಿ ಬೆಳೆಯಬೇಕು. ನಿಮ್ಮ ಆರೋಗ್ಯ ಸರಿಯಾಗಿರಬೇಕು ಅಂದ್ರೆ, ನೀವು ಹಸುವಿನ ತುಪ್ಪದ ಸೇವನೆಯೇ ಮಾಡಬೇಕು.

ಕ್ಯಾಪ್ಸಿಕಂ ಮಸಾಲಾ ಕರಿ ರೆಸಿಪಿ..

ಗ್ರೀನ್ ಪಲಾವ್ (ಪಾಲಕ್ ರೈಸ್) ರೆಸಿಪಿ..

ಹೆಲ್ದಿ, ಟೇಸ್ಟಿ ಪಾಲಕ್ ಕಿಚಡಿ ರೆಸಿಪಿ..

- Advertisement -

Latest Posts

Don't Miss