Tuesday, October 22, 2024

Latest Posts

ಸ್ನಾನಕ್ಕೆ ಸೋಪ್ ಬಳಸೋದು ಒಳ್ಳೆಯದಾ..? ಬಾಡಿ ವಾಶ್ ಬಳಸೋದು ಒಳ್ಳೆಯದಾ..?

- Advertisement -

ನಮ್ಮಲ್ಲಿ ಮೊದಲಿನಿಂದಲೂ ನಡೆದುಕೊಂಡು ಬಂದ ಪದ್ಧತಿ ಅಂದ್ರೆ ಸ್ನಾನ ಮಾಡುವಾಗ ಸೋಪ್ ಬಳಸೋದು. ಹಾಗಾಗಿ ಈಗಲೂ ಹೆಚ್ಚಿನವರಿಗೆ ಬಾಡಿ ವಾಶ್ ಜೆಲ್ ಬಗ್ಗೆ ಗೊತ್ತಿಲ್ಲ. ಆದ್ರೆ ಈ ಬಾಡಿ ವಾಶ್ ಜೆಲ್ ಒಳ್ಳೆಯದಾ..? ಸೋಪ್ ಒಳ್ಳೆಯದಾ ಅನ್ನೋ ಕನ್‌ಫ್ಯೂಶನ್‌ನಲ್ಲಿ ಹಲವರಿದ್ದಾರೆ. ಅವರಿಗಾಗಿ ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವಿಂದು ನೀಡಲಿದ್ದೇವೆ.

ಸ್ನಾನಕ್ಕೆ ಸೋಪ್ ಬಳಸಿದ್ರೆ, ನೀರಿನ ಉಳಿತಾಯ ಮಾಡಬಹುದು. ಅದೇ ಬಾಡಿ ವಾಶ್ ಬಳಸಿದ್ರೆ, ದುಪ್ಪಟ್ಟು ನೀರು ಬಳಕೆಯಾಗುತ್ತದೆ. ಅದು ಹೇಗೆ ಅಂದ್ರೆ ಬಾಡಿ ವಾಶ್ ಬಳಸಿದಾಗ, ಅದು ನಿಮ್ಮ ಚರ್ಮದಿಂದ ಬೇಗ ದೂರವಾಗುವುದಿಲ್ಲ. ಹಾಗಾಗಿ ಅದನ್ನ ದೂರವಾಗಿಸುವುದಕ್ಕೆ ನೀವು, ಹೆಚ್ಚು ನೀರು ಬಳಸಬೇಕಾಗುತ್ತದೆ. ಮತ್ತು ಸೋಪ್ ಬಳಸಿದ್ರೆ, ಬೇಗ ಅದು ತೊಳೆದುಹೋಗುವ ಕಾರಣಕ್ಕೆ ಕಡಿಮೆ ನೀರು ಬಳಕೆಯಾಗುತ್ತದೆ.

ಇನ್ನು ಬಾಡಿವಾಶ್‌ಗಿಂತ ಸೋಪ್ ಉತ್ತಮ. ಯಾಕಂದ್ರೆ ಬಾಡಿವಾಶ್ ಜೆಲ್ ಚರ್ಮದಿಂದ ಬೇಗ ದೂರವಾಗದ ಕಾರಣ, ಅದಕ್ಕೆ ಹೆಚ್ಚು ನೀರು ಬಳಸಬೇಕಾಗುತ್ತದೆ. ನೀವು ಹೆಚ್ಚು ನೀರು ಬಳಸದಿದ್ದಲ್ಲಿ, ನಿಮ್ಮ ಚರ್ಮ ಒಣಗುತ್ತದೆ. ಇನ್ನು ಪ್ರತಿದಿನ ನೀವು ಸರಿಯಾಗಿ ನೀರು ಬಳಸದೇ, ಸ್ನಾನ ಮಾಡಿದ್ರೆ, ನಿಮ್ಮ ಚರ್ಮ ಹಾಳಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ಬಾಡಿ ವಾಶ್‌ಗಿಂತ ಸೋಪ್ ಉತ್ತಮ.

ಇನ್ನು ನೀವು ಸೋಪ್ ಬಳಕೆ ಮಾಡುವಾಗಲೂ ಉತ್ತಮ ಸೋಪನ್ನೇ ಬಳಸಿ. ಹರ್ಬಲ್, ಆಯುರ್ವೇದಿಕ್ ಸೋಪ್ ಬಳಸಿ. ಯಾಕಂದ್ರೆ ಇದರಲ್ಲಿ ಕೆಮಿಕಲ್ ಬಳಕೆ ಹೆಚ್ಚಿರುವುದಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ಕೆಲ ಸೋಪ್‌ಗಳಲ್ಲಿ ಕೆಮಿಕಲ್‌ಗಳೇ ಹೆಚ್ಚಿರುತ್ತದೆ ಈ ಕಾರಣಕ್ಕೆ, ನಿಮ್ಮ ಚರ್ಮಕ್ಕೆ ಹಾನಿಯಾಗಬಹುದು. ಹಾಗಾಗಿ ಒಳ್ಳೆಯ ಆಯುರ್ವೇದಿಕ್ ಸೋಪ್ ಬಳಸಿ.

- Advertisement -

Latest Posts

Don't Miss