Health Tips: ಮುಖದ ಮೇಲೆ ಪಿಂಪಲ್ ಆದಾಗ, ಹಲವರು ಅದನ್ನ ಪದೇ ಪದೇ ಮುಟ್ಟಿಕೊಳ್ಳುತ್ತಾರೆ. ಅದರಿಂದಲೇ ಅಲ್ಲಿ ಕಲೆ ಕೂರುತ್ತದೆ. ಹಾಗಾಗಿ ಈ ರೀತಿ ಪಿಂಪಲ್ಸ್ ಮುಟ್ಟಿಕೊಳ್ಳೋದು ತಪ್ಪು ಎನ್ನುತ್ತಾರೆ ವೈದ್ಯರು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಪಡೆಯೋಣ ಬನ್ನಿ..
ಮೊಡವೆಗಳು ತಾವಾಗಿಯೇ ಒಡೆಯಬೇಕು. ನಾವು ಅದನ್ನು ಮುಟ್ಟಿ ಒಡೆದಾಗ, ಅಲ್ಲಿ ಕಲೆಯಾಗುತ್ತದೆ. ಆ ಕಲೆ ಹೋಗಲಾಡಿಸುವುದು ತುಂಬಾ ಕಠಿಣವಾಗಿರುತ್ತದೆ. ಹಾಗಾಗಿ ಗುಳ್ಳೆ, ಮೊಡವೆಗಳಿಗೆ ಉಗುರು ತಾಕಿಸಬಾರದು ಅಂತಾರೆ ವೈದ್ಯೆ ದೀಪಿಕಾ.
ಇನ್ನು ಇಂಥ ಸಮಸ್ಯೆಗಳಿಗೆ ವೈದ್ಯರು ಫೇಸ್‌ವಾಶ್ ಕೊಡುತ್ತಾರೆ. ಎಲ್ಲ ರೀತಿಯ ತ್ವಚೆ ಹೊಂದಿದವರಿಗೂ ಫೇಸ್‌ವಾಶ್ ಲಭ್ಯವಿರುತ್ತದೆ. ಇನ್ನು ಆಹಾರ ಸೇವನೆಯ ವಿಷಯದಲ್ಲೂ ನೀವು ಗಮನಹರಿಸಬೇಕು. ಎಣ್ಣೆ ಪದಾರ್ಥ, ಸಿಹಿ ಪದಾರ್ಥಗಳನ್ನು ತಿನ್ನುವುದನ್ನು ಕಡಿಮೆ ಮಾಡಬೇಕು. ಆರೋಗ್ಯಕರ ಆಹಾರಗಳನ್ನು ಸೇವಿಸಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..