Health Tips: ಆಹಾರ ತಜ್ಞೆ, ವೈದ್ಯೆಯಾದ ಡಾ.ಹೆಚ್.ಎಸ್.ಪ್ರೇಮಾ ಅವರು ಆಹಾರ ಸೇವನೆ ಬಗ್ಗೆ ಹಲವು ಮಾಹಿತಿಗಳನ್ನು ನೀಡಿದ್ದಾರೆ. ಯಾವ ರೀತಿಯ ಆಹಾರ ಸೇವನೆ ಮಾಡಬೇಕು..? ಒಂದೇ ಆಹರವನ್ನೇ ತಿನ್ನುತ್ತಿದ್ದರೆ ಏನಾಗುತ್ತದೆ..? ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಬೇಕು ಅಂದ್ರೆ ನಾವು ಯಾವ ಆಹಾರವನ್ನು ಸೇವಿಸಬೇಕು. ಹೀಗೆ ಹಲವು ಪ್ರಶ್ನೆಗಳಿಗೆ ಡಾ.ಪ್ರೇಮಾ ಅವರು ಉತ್ತರಿಸಿದ್ದಾರೆ. ಅದೇ ರೀತಿ ಇಂದು ಡಾ.ಪ್ರೇಮಾ ಅವರು ಗೋದಿ ಉತ್ತಮವೋ..? ಅಕ್ಕಿ ಉತ್ತಮವೋ..? ಇವೆರಡರಲ್ಲಿ ಯಾವುದು ಆರೋಗ್ಯಕ್ಕೆ ಒಳ್ಳೆಯದು..? ಅನ್ನೋ ಬಗ್ಗೆ ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಗೋದಿ ಮತ್ತು ಅಕ್ಕಿಯನ್ನು ಸೇರಿಸಿ ತಯಾರಿಸಿ ಪದಾರ್ಥ ತಿನ್ನಬಹುದು. ಆದರೆ ಈ ವೇಳೆ ಅಕ್ಕಿಯನ್ನು ಹೆಚ್ಚು ಬಳಸಿ. ಏಕೆಂದರೆ, ಗೋದಿಗಿಂತ, ಅಕ್ಕಿ ಆರೋಗ್ಯಕ್ಕೆ ಉತ್ತಮ. ಹಾಗಾಗಿ ಗೋದಿಗಿಂತ ಅಕ್ಕಿ ಹೆಚ್ಚು ಬಳಸಬಹುದು.
ಇನ್ನು ಕೆಲವರಿಗೆ ಅನ್ನ ತಿನ್ನುವುದರಿಂದ ದೇಹದ ತೂಕ ಹೆಚ್ಚಾಗುತ್ತದೆ ಅನ್ನೋ ಹೆದರಿಕೆ ಇದೆ. ಆ ಬಗ್ಗೆ ಮಾತನಾಡಿರುವ ವೈದ್ಯರು. ಅನ್ನ ತಿಂದಾಗ ಅದನ್ನು ಸರಿಯಾಗಿ ಜೀರ್ಣಿಸಿಕೊಳ್ಳಬೇಕು. ಆಗ ನಮ್ಮ ದೇಹದ ತೂಕ ಹೆಚ್ಚಾಗುವುದಿಲ್ಲ ಎಂದಿದ್ದಾರೆ. ಸುಮ್ಮನೆ ಕುಳಿತುಕೊಳ್ಳುವವರು, ಅಥವಾ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರು. ಇಂಥವರು ಅನ್ನದ ಸೇವನೆ ಮಾಡಿದರೆ, ದೇಹದ ಬೊಜ್ಜು ಬೆಳೆಯುತ್ತದೆ.
ಆದರೆ ಅನ್ನ ಸೇವಿಸಿ, ಮನೆಗೆಲಸ, ಪ್ರತಿದಿನ ಯೋಗ, ವ್ಯಾಯಾಮ ಮಾಡಿದರೆ, ಅಂಥ ಸಮಯದಲ್ಲಿ ದೇಹದ ಬೊಜ್ಜು ಬೆಳೆಯುವುದಿಲ್ಲ. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ವೀಡಿಯೋ ನೋಡಿ..