Wednesday, August 20, 2025

Latest Posts

ಸಲಾರ್ ಸಿನಿಮಾದಲ್ಲಿ ನಟಿಸುತ್ತಿದ್ದಾರಾ ಯಶ್..?: ಸ್ಪಷ್ಟನೆ ನೀಡಿದ ಪ್ರಶಾಂತ್ ನೀಲ್

- Advertisement -

Movie News: ಡೈರೆಕ್ಟರ್ ಪ್ರಶಾಂತ್ ನೀಲ್ ಕೆಜಿಎಫ್ ನಿರ್ದೇಶನದ ಮೂಲಕ ತಮ್ಮ ಖದರ್ ಏನು ಅಂತಾ ಇಡೀ ವಿಶ್ವಕ್ಕೆ ತೋರಿಸಿದ್ದಾರೆ. ಇದೀಗ ಪ್ರಭಾಸ್ ಜೊತೆ ಸೇರಿ, ಸಲಾರ್ ಸಿನಿಮಾ ಮಾಡಹೊರಟಿದ್ದು, ಇದರಲ್ಲೂ ಯಶ್ ನಟಿಸುತ್ತಿದ್ದಾರಾ ಅನ್ನೋ ಸಂದೇಹದಲ್ಲಿ, ರಾಕಿಭಾಯ್ ಫ್ಯಾನ್ಸ್ ಇದ್ದಾರೆ. ಆದರೆ ಈ ಬಗ್ಗೆ ಪ್ರಶಾಂತ್ ಸ್ಪಷ್ಟನೆ ನೀಡಿದ್ದು, ಸಲಾರ್ ಸಿನಿಮಾದಲ್ಲಿ ರಾಕಿಂಗ್ ಸ್ಟಾರ್ ಯಶ್ ನಟಿಸುತ್ತಿಲ್ಲವೆಂದು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನ ನೀಡಿರುವ ಪ್ರಶಾಂತ್, ರಾಕಿಂಗ್ ಸ್ಟಾರ್ ಯಶ್ ಈ ಸಿನಿಮಾದಲ್ಲಿ ನಟಿಸಿಲ್ಲ. ಅತಿಥಿ ಪಾತ್ರದಲ್ಲೂ ಇಲ್ಲ. ಇದ್ದಿದ್ದರೆ ನಾನು ಹೇಳಿರುತ್ತಿದ್ದೆ. ಅವರ ಬಗ್ಗೆ ಪ್ರಚಾರ ಮಾಡಲು ನನಗ್ಯಾವುದೇ ತೊಂದರೆ ಇಲ್ಲ. ಆದರೆ ಯಶ್ ಅವರು ಸಲಾರ್ ಸಿನಿಮಾದಲ್ಲಿ ನಟಿಸಿಲ್ಲ ಎಂದು ಪ್ರಶಾಂತ್ ಹೇಳಿದ್ದಾರೆ.

ಇನ್ನು ಸಲಾರ್ ಸಿನಿಮಾದಲ್ಲಿ ಪ್ರಭಾಸ್‌ಗೆ ಶೃತಿ ಹಾಸನ್, ಪ್ರಥ್ವಿರಾಜ್ ಸುಕುಮಾರನ್, ಜಗಪತಿ ಬಾಬು ಸೇರಿ ಹಲವು ಕಲಾವಿದರು ಸಾಥ್ ಕೊಟ್ಟಿದ್ದಾರೆ. ಹೊಂಬಾಳೆ ಫಿಲ್ಮ್ಸ್ ನಡಿ ವಿಜಯ್ ಕಿರಗಂದೂರ್ ಚಿತ್ರ ನಿರ್ಮಾಣ ಮಾಡಿದ್ದು, ಪ್ರಶಾಂತ್ ನೀಲ್‌ ನಿರ್ದೇಶಿಸಿದ್ದಾರೆ.

ಕ್ಷಮೆಯಾಚನೆ ಪತ್ರ ಬರೆಯುವಂತೆ ಡ್ರೋನ್ ಪ್ರತಾಪ್‌ಗೆ ಲೀಗಲ್ ನೋಟೀಸ್ ಜಾರಿ..

ನಟಿ ಹೇಮಾ ಚೌಧರಿ ಆರೋಗ್ಯದಲ್ಲಿ ಏರುಪೇರು: ಐಸಿಯುನಲ್ಲಿ ಚಿಕಿತ್ಸೆಗೆ ಸ್ಪಂದನೆ

ಹೊಡೆದಾಡಿಕೊಂಡ ಬಿಗ್‌ಬಾಸ್ ಫ್ಯಾನ್ಸ್: ವಾಹನಗಳು ಜಖಂ

- Advertisement -

Latest Posts

Don't Miss