Wednesday, November 13, 2024

Latest Posts

ನಿಮ್ಮ Skin Dry ಆಗಿದ್ಯಾ? ಮುಖದಲ್ಲಿ Pimples ಹೆಚ್ಚಾಗಿದ್ರೆ ಏನ್ ಮಾಡ್ಬೇಕು.?

- Advertisement -

Beauty Tips: ನೋಡಲು ಸುಂದರವಾಗಿರಬೇಕು, ನಾಲ್ಕು ಜನರ ಮಧ್ಯೆ ಆಕರ್ಷಕವಾಗಿ ಕಾಣಬೇಕು ಅಂತಾ ಯಾರಿಗೆ ತಾನೇ ಅನ್ನಿಸೋದಿಲ್ಲ ಹೇಳಿ..? ಎಲ್ಲರೂ ತಾವು ಸುಂದರವಾಗಿ ಕಾಣಬೇಕು ಅಂತ ಬಯಸುತ್ತಾರೆ. ಅದಕ್ಕಾಗಿ ಹಲವಾರು ಪ್ರಾಡಕ್ಟ್, ಮನೆ ಮದ್ದು ಬಳಕೆ ಮಾಡುತ್ತಾರೆ. ಕೆಲವರಿಗೆ ಅದೆಲ್ಲ ಹೊಂದುತ್ತದೆ. ಇನ್ನು ಕೆಲವರಿಗೆ ತ್ವಚೆಯ ಸಮಸ್ಯೆಯಾಗುತ್ತದೆ. ಇಂದು ವೈದ್ಯೆ ದೀಪಿಕಾ ಒಣತ್ವಚೆಗೆ ಯಾವ ರೀತಿ ಚಿಕಿತ್ಸೆ ಪಡೆಯಬೇಕು ಎಂದು ಹೇಳಲಿದ್ದಾರೆ ಎಂದು ತಿಳಿಯೋಣ ಬನ್ನಿ..

ತ್ವಚೆಯಲ್ಲಿ ಮೂರು ರೀತಿಯ ತ್ವಚೆ ಇರುತ್ತದೆ. ನಾರ್ಮಲ್, ಎಣ್ಣೆ ತ್ವಚೆ, ಮತ್ತು ಒಣ ತ್ವಚೆ. ನಾರ್ಮಲ್ ಸ್ಕಿನ್ ಇದ್ದವರಿಗೆ ಎಷ್ಟು ತ್ವಚೆಯ ಸಮಸ್ಯೆ ಬರುವುದಿಲ್ಲ. ಚಳಿಗಾಲ, ಬೇಸಿಗೆಗಾಲ ಯಾವುದೇ ಕಾಲದಲ್ಲಿ ಅವರ ತ್ವಚೆ ಚೆಂದವಾಗಿರುತ್ತದೆ.

ಇನ್ನು ಎಣ್ಣೆಯುಕ್ತ ತ್ವಚೆ ಇದ್ದವರಿಗೆ ಮುಖದಲ್ಲಿ ಜಿಡ್ಡು ಜಾಸ್ತಿಯಾಗಿರುತ್ತದೆ. ಇವರಿಗೆ ಮುಖದ ಮೇಲೆ ಗುಳ್ಳೆಗಳು ಹೆಚ್ಚು ಇರುತ್ತದೆ. ಅಂಥವರಿಗೆ ಸೂಟ್ ಆಗುವ ಕ್ರೀಮ್‌ಗಳು ಸಿಗುತ್ತದೆ. ಅದನ್ನು ವೈದ್ಯರ ಸಲಹೆಯಂತೆ ಅವರು ಬಳಸಬೇಕು. ಇಲ್ಲವಾದಲ್ಲಿ ಅವರು ಬಳಸುವ ಕ್ರೀಮ್‌ಗಳಿಂದ ಅವರಿಗೆ ಅಲರ್ಜಿಯಾಗಬಹುದು.

ಇನ್ನು ಒಣತ್ವಚೆ ಇರುವವರು, ವೈದ್ಯರ ಸಲಹೆ ಮೇರೆಗೆ ಯಾವುದೇ ಕ್ರೀಮ್, ಜೆಲ್‌ಗಳನ್ನು ಬಳಸಬೇಕು. ಇಲ್ಲವಾದಲ್ಲಿ, ಅವರ ತ್ವಚೆ ಇನ್ನಷ್ಟು ಹಾಳಾಗುತ್ತದೆ. ವೈದ್ಯರು ಹೇಳುವ ಕ್ಲೆನ್ಸರ್‌, ಮಾಯ್ಶರೈಸರ್ ಬಳಸಿದಾಗ ಅವರ ತ್ವಚೆ ಚೆನ್ನಾಗಿ ಇರುತ್ತದೆ. ಇನ್ನು ಆಹಾರದ ವಿಷಯದಲ್ಲೂ ಕಾಳಜಿ ಮಾಡಬೇಕಾಗುತ್ತದೆ. ಹೆಚ್ಚು ಬೇಕರಿ ತಿಂಡಿ, ಎಣ್ಣೆ ತಿಂಡಿ, ಚಾಕೋಲೇಟ್‌ ನಂಥ ತಿಂಡಿಗಳ ಸೇವನೆ ಕಂಟ್ರೋಲ್ ಮಾಡಬೇಕು. ಈ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಗಾಗಿ ಈ ವೀಡಿಯೋ ನೋಡಿ..

Lipstick ಬಳಸುವು ಎಷ್ಟು ಉತ್ತಮ? ಲಿಪ್ ಕೇರ್ ಮಾಡುವುದು ಹೇಗೆ..?

C-Section ಹೆರಿಗೆಯಲ್ಲಿರೋ ಚಾಲೆಂಜಸ್ ಏನೇನು..?

Pimples ಕೈಯಿಂದ ಮುಟ್ಟೋದು ತಪ್ಪಾ..? ಯಾವ Facewash ಉತ್ತಮ?

- Advertisement -

Latest Posts

Don't Miss