Health Tips: ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ನಾವು ನಿಮಗೆ ಆರೋಗ್ಯಕ್ಕೆ ಸಂಬಂಧಿಸಿದಂತೆ ಹಲವು ವಿಚಾರಗಳನ್ನು ಹೇಳಿದ್ದೇವೆ. ಅಂತೆಯೇ, ಇಂದು ಸಿಲಿಂಡರ್ ಸ್ಪೋಟವಾಗುವ ಬಗ್ಗೆ ಜನ ನಿರ್ಲಕ್ಷ ವಹಿಸಬಾರದು ಅನ್ನೋ ಬಗ್ಗೆ ವೈದ್ಯರಾದ ರಮೇಶ್ ಅವರು ವಿವರಿಸಿದ್ದಾರೆ. ಆ ಬಗ್ಗೆ ತಿಳಿಯೋಣ ಬನ್ನಿ..
ಇತ್ತೀಚಿನ ದಿನಗಳಲ್ಲಿ ಸಿಲಿಂಡರ್ ಬ್ಲಾಸ್ಟ್ ಹೆಚ್ಚಾಗುತ್ತಿದೆ. ಈ ಕಾರಣಕ್ಕಾಗಿ ರಾತ್ರಿ ಮಲಗುವ ಮುನ್ನ, ಅಥವಾ ಎಲ್ಲಾದರೂ ಹೊರಗಡೆ ಹೋಗುವ ಮುನ್ನ, ಜನ ಸಿಲಿಂಡರ್ ಬಳಕೆಯಲ್ಲಿ ಎಚ್ಚರಿಕೆ ವಹಿಸಬೇಕು. ಸರಿಯಾಗಿ ಗ್ಯಾಸ್ ಆಫ್ ಮಾಡಬೇಕು. ಪೈಪ್‌ನಿಂದ ಗ್ಯಾಸ್ ಲೀಕಾಗುತ್ತಿದೆಯಾ ಎಂಬುದನ್ನ ನೋಡಬೇಕು.
ಇಂಥ ಸಣ್ಣಪುಟ್ಟ ಲೀಕ್‌ಗಳನ್ನು ಜನ ನಿರ್ಲಕ್ಷ್ಯ ಮಾಡುವುದರಿಂದಲೇ, ಇಂದು ಸಿಲಿಂಡರ್ ಸ್ಪೋಟ ಹೆಚ್ಚಾಗುತ್ತಿದೆ ಎಂದು ವೈದ್ಯರು ಹೇಳುತ್ತಾರೆ. ಇಂಥ ವಿಷಯದಲ್ಲಿ ಆದಷ್ಟು ನಿರ್ಲಕ್ಷ್ಯ ಮಾಡದಿರುವುದು ಉತ್ತಮ. ಗ್ಯಾಸ್ ಲೀಕಾದಾಗ ಅದರ ವಾಸನೆ ಬರುತ್ತದೆ. ಇಂಥ ಸಮಯದಲ್ಲಿ, ಲೈಟ್ ಹಾಕದೇ, ಗ್ಯಾಸ್ ಹೊತ್ತಿಸದೇ, ಬುದ್ಧಿವಂತಿಕೆಯಿಂದ ಮನೆಯ ಕಿಟಕಿ, ಬಾಗಿಲು ತೆಗೆದು, ಗಾಳಿ ಹೊರಹೋಗುವಂತೆ ನೋಡಿಕೊಳ್ಳಬೇಕು. ವೈದ್ಯರು ಈ ಬಗ್ಗೆ ಇನ್ನೂ ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..




