Health Tips: ಮಕ್ಕಳಲ್ಲಿ ದೃಷ್ಟಿದೋಷ ಬರುವ ವಿಚಾರದ ಬಗ್ಗೆ ವೈದ್ಯೆಯಾದ ಮೈತ್ರಿಯವರು ಸಾಕಷ್ಟು ವಿಷಯಗಳನ್ನು ಹೇಳಿದ್ದಾರೆ. ಮಕ್ಕಳಿಗೆ ದೃಷ್ಟಿ ದೋಷ ಬರಲು ಕಾರಣವೇನು..? ದೂರದೃಷ್ಟಿ ದೋಷ, ಸಮೀಪ ದೃಷ್ಟಿದೋಷ ಎಂದರೇನು..? ಹೀಗೆ ಇತ್ಯಾದಿ ವಿಷಯಗಳ ಬಗ್ಗೆ ಡಾ.ಮೈತ್ರಿ ವಿವರಣೆ ನೀಡಿದ್ದಾರೆ. ಇಂದು ಮಕ್ಕಳಲ್ಲಿ ದೃಷ್ಟಿ ದೋಷ ಇದ್ದರೂ ಗೊತ್ತಾಗುವುದಿಲ್ಲ. ಹಾಗಾಗಿ ಪೋಷಕರು ಏನೇನು ಎಚ್ಚರಿಕೆ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಹೇಳಲಿದ್ದಾರೆ.
ವೈದ್ಯರು ಹೇಳುವ ಪ್ರಕಾರ, ಮಕ್ಕಳಲ್ಲಿ ದೃಷ್ಟಿದೋಷ ಇದೆ ಎಂದು, ಮಕ್ಕಳಿಗೂ ಗೊತ್ತಾಗುವುದಿಲ್ಲ. ಪೋಷಕರಿಗೂ ಗೊತ್ತಾಗುವುದಿಲ್ಲ. ಹಾಗಾಗಿ ಮಕ್ಕಳಿಗೆ ಕಣ್ಣಿನ ಪರೀಕ್ಷೆ ಮಾಡಿಸಲೇಬೇಕು. ಒಂದು ವರ್ಷ, 3ವರ್ಷ ಮತ್ತು 5 ವರ್ಷಕ್ಕೆ ಮಕ್ಕಳಿಗೆ ಕಮ್ಣಿನ ತಪಾಸಣೆ ಮಾಡಿಸಬೇಕು. ಹೀಗೆ ಕಣ್ಣಿನ ಪರೀಕ್ಷೆ ಮಾಡಿಸುವುದರಿಂದ, ಮಕ್ಕಳ ಕಣ್ಣು ಆರೋಗ್ಯವಾಗಿ ಇದೆಯಾ, ಇಲ್ಲವಾ ಅನ್ನೋದು ಗೊತ್ತಾಗುತ್ತದೆ.
ವಯಸ್ಸಿಗೆ ತಕ್ಕಹಾಗೆ ಕಣ್ಣಿನ ಆರೋಗ್ಯವಿರುತ್ತದೆ. ಮಕ್ಕಳ ಕಣ್ಣಿನ ತಪಾಸಣೆ ಮಾಡುವುದರಿಂದ, ಮಕ್ಕಳಿಗೆ ಆಯಾ ವಯಸ್ಸಿಗೆ ತಕ್ಕಂತೆ, ದೃಷ್ಟಿ ಸರಿಯಾಗಿ ಇದೆಯಾ ಇಲ್ಲವಾ ಅಂತಾ ಗೊತ್ತಾಗುತ್ತದೆ. ದೃಷ್ಟಿ ದೋಷವಿದ್ದಲ್ಲಿ, ಅದು ಹೇಗೆ ಬಂತು, ಅದಕ್ಕೆ ಯಾವ ರೀತಿಯ ಚಿಕಿತ್ಸೆ ಮಾಡಬಹುದು ಎಂದು ವೈದ್ಯರಿಗೆ ಗೊತ್ತಾಗುತ್ತದೆ. ದೃಷ್ಟಿ ದೋಷದ ಬಗ್ಗೆ ವೈದ್ಯರು ಇನ್ನು ಏನೇನು ಹೇಳಿದ್ದಾರೆಂದು ತಿಳಿಯಲು ಈ ವೀಡಿಯೋ ನೋಡಿ..