Thursday, August 21, 2025

Latest Posts

ಹಲಸಿನ ಹಣ್ಣಿನ ಪಾಯಸದ ರೆಸಿಪಿ..

- Advertisement -

Recipe: ಹಲಸಿನ ಹಣ್ಣು ಅಂದ್ರೆ ಹಲವರಿಗೆ ಇಷ್ಟವಾದ್ರೆ, ಇನ್ನು ಕೆಲವರಿಗೆ ಅಷ್ಟಕ್ಕಷ್ಟೆ. ಆದರೆ ಹಲಸಿನ ಹಣ್ಣು ಇಷ್ಟಪಡುವವರಿಗೆ, ಅದರಿಂದ ಮಾಡುವ ತರಹೇವಾರಿ ಪದಾರ್ಥಗಳು ಇಷ್ಟವಾಗುತ್ತದೆ. ಇಂದು ನಾವು ಹಲಸಿನ ಹಣ್ಣಿನ ಪಾಯಸದ ರೆಸಿಪಿಯ ಬಗ್ಗೆ ಹೇಳಲಿದ್ದೇವೆ.

ಮೊದಲು ಒಂದು ಕಪ್ ಹಲಸಿನ ಹಣ್ಣನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಬೇಕು. ಬಳಿಕ ಪ್ಯಾನ್‌ಗೆ ..ಬೆಲ್ಲ, ತುಪ್ಪ ನೀರು ಹಾಕಿ, ಕುದಿಸಬೇಕು. ಈ ಪಾಕ ನೀರು ನೀರಾಗಿರಬೇಕು. ಬಳಿಕ ಇದಕ್ಕೆ ಹಲಸಿನ ಹಣ್ಣನ್ನು ಹಾಕಿ, ಬೇಯಿಸಬೇಕು. ಬಳಿಕ, ಒಂದು ಕಪ್ ಹಾಲು ಹಾಕಿ ಕುದಿಸಿ, ಬಳಿಕ ಒಂದು ಕಪ್ ಕಾಯಿ ಹಾಲು ಹಾಕಿ ಬೇಯಿಸಿ. ಈಗ ಪಾಯಸ ರೆಡಿ. ಇದಕ್ಕೆ ಏಲಕ್ಕಿ ಪುಡಿ, ತುಪ್ಪದಲ್ಲಿ ಹುರಿದ ದ್ರಾಕ್ಷಿ, ಗೋಡಂಬಿ, ಸಣ್ಣಗೆ ಕತ್ತರಿಸಿದ ತೆಂಗಿನ ಕಾಯಿಯನ್ನು ಹುರಿದು ಪಾಯಸಕ್ಕೆ ಸೇರಿಸಿ, ತುಪ್ಪದ ಜೊತೆ ಪಾಯಸ ಸವಿಯಿರಿ.

ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..

ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..

ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..

- Advertisement -

Latest Posts

Don't Miss