- Advertisement -
Janmashtami Special: ಕೃಷ್ಣ ಜನ್ಮಾಷ್ಠಮಿ ಸಮೀಪಿಸುತ್ತಿದೆ. ಈ ವೇಳೆ ಹಲವರು ಪೂಜೆಗೆ ಬಗೆ ಬಗೆಯ ಖಾದ್ಯವನ್ನು ತಯಾರಿಸಿ, ನೈವೇದ್ಯ ಮಾಡುತ್ತಾರೆ. ಹಾಗಾಗಿ ಇಂದು ನಾವು ಉದ್ದಿನ ಚಕ್ಕುಲಿ ರೆಸಿಪಿಯನ್ನು ಹೇಗೆ ಮಾಡುವುದೆಂದು ಹೇಳಲಿದ್ದೇವೆ.
ಮೊದಲು 1 ಕಪ್ ಅಕ್ಕಿಯನ್ನು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ. ಬಳಿಕ ಕಾಲು ಕಪ್ ಉದ್ದಿನ ಬೇಳೆಯನ್ನು ಘಮ ಬರುವವರೆಗೂ ಹುರಿಯಿರಿ. ಬಳಿಕ ಪುಡಿ ಮಾಡಿ. ಈಗ ನೆನೆಸಿಟ್ಟ ಅಕ್ಕಿಯನ್ನು ಮಿಕ್ಸಿ ಜಾರ್‌ಗೆ ಹಾಕಿ, ರುಬ್ಬಿ. ಒಂದು ಬೌಲ್‌ಗೆ ರುಬ್ಬಿದ ಅಕ್ಕಿಹಿಟ್ಟು, ಉದ್ದಿನಬೇಳೆ ಹಿಟ್ಟು, ಉಪ್ಪು, ಜೀರಿಗೆ, ಎಳ್ಳು, ಕೊಂಚ ಬೆಣ್ಣೆ ಹಾಕಿ ಚೆನ್ನಾಗಿ ನಾದಿಕೊಳ್ಳಿ. ಈಗ ಚಕ್ಕುಲಿ ಹಿಟ್ಟು ರೆಡಿ. ಚಕ್ಕುಲಿ ಅಚ್ಚಿನಲ್ಲಿ ಹಿಟ್ಟನ್ನು ಹಾಕಿ, ಕಾದ ಎಣ್ಣೆಯಲ್ಲಿ ಚಕ್ಕುಲಿ ಕರಿಯಿರಿ.
- Advertisement -