Sunday, September 8, 2024

Latest Posts

Janmashtami Special: ಕೃಷ್ಣ ಒಂದೇ ಜಗದ್ಗುರುಂ ಅಂತಾ ಹೇಳಲು ಕಾರಣವೇನು..?

- Advertisement -

Spiritual: ಭಗವದ್ಗೀತೆಯಲ್ಲಿ ಬರುವ ಶ್ಲೋಕಗಳಲ್ಲಿ ‘ವಸುದೇವ ಸುತಂ ದೇವಂ, ಕಂಸ ಚಾಣೂರ ಮರ್ಧನಂ, ದೇವಕಿ ಪರಮಾನಂದಂ ಕೃಷ್ಣ ಒಂದೇ ಜಗದ್ಗುರುಂ’ ಎಂದು ಹೇಳಲಾಗಿದೆ. ಹಾಗಾದರೆ ಶ್ರೀಕೃಷ್ಣನೊಬ್ಬನೇ ಈ ಜಗತ್ತಿಗೆ ಗುರು ಅಂತಾ ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..

ಭಗವದ್ಗೀತೆ ಹಿಂದೂಗಳ ಶ್ರೇಷ್ಠ ಗ್ರಂಥಗಳಲ್ಲೇ ಪ್ರಮುಖವಾಗಿದೆ. ಮಹಾಭಾರತ ಯುದ್ಧದ ವೇಳೆ ಯುದ್ಧಭೂಮಿಯಲ್ಲಿ ರಕ್ತವನ್ನು ನೋಡಬೇಕಾಗುತ್ತದೆ. ಒಂದು ಯುದ್ಧದಿಂದ ಎಷ್ಟೆಲ್ಲ ಮಕ್ಕಳು ಅನಾಥರಾಗುತ್ತಾರೆ. ಎಷ್ಟೆಲ್ಲ ಹೆಣ್ಣು ಮಕ್ಕಳು ವಿಧವೆಯರಾಗುತ್ತಾರೆ. ಅದೆಷ್ಟು ಅಪ್ಪ ಅಮ್ಮಂದಿರು ತಮ್ಮ ಮಕ್ಕಳನ್ನು ಕಳೆದುಕೊಳ್ಳುತ್ತಾರೆಂದು ಯೋಚಿಸಿದ ಅರ್ಜುನನಿಗೆ, ಪಾಂಡವರ ಪರ ನಿಂತು ಯುದ್ಧ ಮಾಡಲು ಕಷ್ಟವಾಗುತ್ತದೆ.

ಹಾಗಾಗಿ ಅರ್ಜುನ ತಾನು ಯುದ್ಧ ಮಾಡುವುದಿಲ್ಲ, ಪಾಂಡವರಿಗೆ ಸಾರಥಿಯಾಗುವುದಿಲ್ಲ, ನನ್ನಿಂದ ಈ ರಕ್ತ ಸಿಕ್ತ ಯುದ್ಧ ಭೂಮಿ ನೋಡಲಾಗುವುದಿಲ್ಲವೆಂದು ಶ್ರೀಕೃಷ್ಣನಿಗೆ ಹೇಳುತ್ತಾನೆ. ಆಗ ಕೃಷ್ಣ, ಅರ್ಜುನನಿಗೆ ನೀಡುವ ಜೀವನ ಪಾಠವೇ, ಭಗವದ್ಗೀತೆ. ಶ್ರೀಕೃಷ್ಣ ತನ್ನ ವಿರಾಟ್ ರೂಪ ತೋರಿಸಿ, ಅರ್ಜುನನಿಗೆ ಪಾಪ ಪುಣ್ಯದ ಬಗ್ಗೆ, ಜೀವನದ ಬಗ್ಗೆ ವಿವರಿಸುತ್ತಾನೆ. ಹಾಗಾಗಿ ಶ್ರೀಕೃಷ್ಣನನ್ನು ಪರಮ ಗುರು, ಅಸಮಾನ್ಯ ಗುರು, ಜಗತ್ತಿಗೆ ಒಬ್ಬನೇ ಗುರು ಎಂದು ಕರೆಯುತ್ತಾರೆ.

ಭಗವದ್ಗೀತೆಯಲ್ಲಿ ಬರುವ ಇನ್ನೊಂದು ಶ್ಲೋಕದಲ್ಲಿ ಇಡೀ ಜೀವನದ ಪಾಠವನ್ನು ಬರೀ ಒಂದೇ ವಾಕ್ಯದಲ್ಲಿ ಹೇಳಲಾಗಿದೆ. ‘ಪರಿತ್ರಾಣಾಯ ಸಾಧುನಾಮ್ ವಿನಾಶಾಯ ಚ ದುಷ್ಕೃತಾಮ್, ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’. ಉತ್ತಮರ ರಕ್ಷಣೆ, ಕೆಟ್ಟವರ ಸಂಹಾರ ಮಾಡಿಯಾದರೂ ಧರ್ಮವನ್ನು ರಕ್ಷಿಸಬೇಕೆಂದು ಮತ್ತು ಅಧರ್ಮಿಗಳನ್ನು ಶಿಕ್ಷಿಸಬೇಕೆಂದು ಶ್ರೀಕೃಷ್ಣ ಹೇಳಿದ್ದಾನೆ.

ಧರ್ಮದ ರಕ್ಷಣೆಗೆ ನಿಲ್ಲಬೇಕಾದರೆ, ಅಧರ್ಮಿಗಳು ನಮ್ಮವರೇ ಆಗಿದ್ದರು, ಅವರನ್ನು ಎಂದಿಗೂ ಬೆಂಬಲಿಸಬಾರದು ಎಂದು ಶ್ರೀಕೃಷ್ಣ ಹೇಳುತ್ತಾನೆ. ಅದರಂತೆ ತನ್ನ ಸೋದರ ಮಾವನಾದ ಅಧರ್ಮಿ ಕಂಸನನ್ನು ಕೂಡ ಶ್ರೀಕೃಷ್ಣ ಸಂಹರಿಸಿದ್ದ. ಬದುಕಲ್ಲಿ ಎಂಥ ಕೆಲಸಗಳನ್ನು ಮಾಡಬೇಕು, ಯಾವ ಕೆಲಸವನ್ನು ಮಾಡಬೇಕು. ನಾವು ಮಾಡಿದ ಕರ್ಮಗಳು ನಮಗೆ ಹೇಗೆ ಫಲ ಕೊಡುತ್ತದೆ ಎಂಬ ಬಗ್ಗೆ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ವಿವರಿಸಿದ್ದಾನೆ. ಹಾಗಾಗಿ ಹಿರಿಯರು, ಜೀವನ ಸಾರ ತಿಳಿಯಬೇಕೆಂದಲ್ಲಿ, ಜೀವನದಲ್ಲಿ ಉತ್ತಮ ರೀತಿಯಲ್ಲಿ ಬದಲಾಗಬೇಕು ಎಂದಲ್ಲಿ, ಭಗವದ್ಗೀತೆ ಓದಿರಿ ಎನ್ನುತ್ತಾರೆ.

ಇದೇ ರೀತಿ ಪಾಂಡವರಿಗೆ ಕೌರವರ ವಿರುದ್ಧ ಹೇಗೆ ಗೆಲ್ಲಬೇಕು ಎನ್ನುವುದರ ಬಗ್ಗೆಯೂ ಸಲಹೆ ನೀಡಿದವನೇ ಶ್ರೀಕೃಷ್ಣ. ದುಷ್ಠ ಸಂಹಾರಕ್ಕಾಗಿ ಮಹಾಭಾರತ ಯುದ್ಧ ನಡೆಸಿದ ಸೂತ್ರಧಾರನೇ ಶ್ರೀಕೃಷ್ಣ ಪರಮಾತ್ಮ.

ಶಕುನಿ ಕುರುವಂಶದವರ ನಾಶಕ್ಕಾಗಿ ಪಣ ತೊಟ್ಟಿದ್ದು ಯಾಕೆ..?

ಮನೆಯ ಮುಂದೆ ರಂಗೋಲಿಯನ್ನು ಏಕೆ ಹಾಕಬೇಕು..?

ವಿವಾಹವಾಗುವ ಬಗ್ಗೆ ಚಾಣಕ್ಯರು ಹೀಗೆ ಹೇಳಿದ್ದಾರೆ..

- Advertisement -

Latest Posts

Don't Miss