Spiritual: ಇಂದಿನ ಕಾಲದಲ್ಲಿ ಪರ್ಮನೆಂಟ್ ಆಗಿ ಮನೆಯ ಮುಂದೆ ಅಂಗಳದಲ್ಲಿ ಪೇಂಟ್ ಮಾಡಿಸಿ, ರಂಗೋಲಿಯನ್ನು ಹಾಕಿಸಿಬಿಡುತ್ತಾರೆ. ಆದರೆ ಮೊದಲೆಲ್ಲ ಮನೆಯ ಮುಂದೆ ಬೆಳಿಗ್ಗೆ ಕಸ ಗುಡಿಸಿ, ನೀರು ಹಾಕಿ, ಸ್ವಚ್ಛಗೊಳಿಸಿ, ರಂಗೋಲಿ ಹಾಕುತ್ತಿದ್ದರು. ಈಗ ಈ ಪದ್ಧತಿ ಅಪರೂಪವಾಗಿದೆ. ಆದರೆ ಮನೆಯ ಮುಂದೆ ರಂಗೋಲಿ ಹಾಕಲು ಕಾರಣವೇನು ಅನ್ನೋದು ಹಲವರಿಗೆ ಗೊತ್ತಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯೋಣ ಬನ್ನಿ..
ಮನೆಯ ಮುಂದೆ ರಂಗೋಲಿ ಹಾಕುವುದರಿಂದ ಅದು ಜನರನ್ನು ಆಕರ್ಷಿಸುತ್ತದೆ. ಅಲ್ಲದೇ, ಮನೆಯಲ್ಲಿ ನಕಾರಾತ್ಮಕ ಶಕ್ತಿಯು ತೊಲಗಿ, ಸಕಾರಾತ್ಮಕ ಶಕ್ತಿಯ ಪ್ರಭಾವ ಹೆಚ್ಚಬೇಕು ಅಂದ್ರೆ, ಮನೆಯ ಮುಂದೆ ರಂಗೋಲಿ ಹಾಕುತ್ತಾರೆ. ರಂಗೋಲಿಯಲ್ಲಿರುವ ರಾಸಾಯನಿಕ ಅಂಶವು ಸೂರ್ಯನ ಕಿರಣದೊಂದಿಗೆ ಸೇರಿ, ಉತ್ತಮ, ಆರೋಗ್ಯಕರ ವಾತಾವರಣ ಸೃಷ್ಟಿಸುವಲ್ಲಿ ಸಹಕಾರಿಯಾಗಿದೆ.
ಅಲ್ಲದೇ, ಸೂರ್ಯೋದಯವಾಗಿ ಎರಡು ಗಂಟೆಯೊಳಗೆ ರಂಗೋಲಿ ಹಾಕಬೇಕು ಅಂತಾ ಹೇಳಲಾಗಿದೆ. ಯಾಕೆ ಅಂದರೆ, ಸೂರ್ಯನ ಬೆಳಕು ನಮ್ಮ ದೇಹಕ್ಕೆ ವಿಟಾಮಿನ್ ಡಿ ನೀಡುತ್ತದೆ. ಯಾರ ಶರೀರಕ್ಕೆ ಪ್ರತಿದಿನ ಸರಿಯಾಗಿ ವಿಟಮಿನ್ ಡಿ ಸಿಗುತ್ತದೆಯೋ, ಅಂಥವರು ಸದಾ ಆರೋಗ್ಯವಂತರು, ಸುಂದರವಾಗಿಯೂ ಇರುತ್ತಾರೆ..
ಸೂರ್ಯನ ಕಿರಣ ತಾಕುತ್ತಾ, ರಂಗೋಲಿ ಹಾಕುವ ಹೆಂಗೆಳೆಯರು ಆರೋಗ್ಯವಾಗಿ, ಸುಂದರವಾಗಿ ಇರುತ್ತಾರೆ. ಅಲ್ಲದೇ, ರಂಗೋಲಿ ಹಾಕುವಾಗ, ವ್ಯಾಯಾಮವೂ ಆಗುತ್ತದೆ. ಬೆರಳು, ಕಾಲುಗಳಿಗೆ ವ್ಯಾಯಾಮವಾಗುವುದರಿಂದ, ಆಯಾಸವಾಗುವುದೆಲ್ಲ ನಿಲ್ಲುತ್ತದೆ. ರಂಗೋಲಿ ಹಾಕುವುದರಿಂದ ಏಕಾಗೃತೆಯೂ ಹೆಚ್ಚುತ್ತದೆ. ಈ ರೀತಿ, ರಂಗೋಲಿ ಹಾಕುವುದರಿಂದ, ದೇಹಕ್ಕೆ ವ್ಯಾಯಾಮ, ಸೂರ್ಯನ ಕಿರಣದ ಜೊತೆಗೆ ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಪ್‌ರಭಾವ ಹೆಚ್ಚುವ ಕಾರಣಕ್ಕೆ, ಮನೆಯ ಮುಂದೆ ರಂಗೋಲಿ ಹಾಕಲಾಗುತ್ತದೆ.
ದಾನ ಮಾಡುವಾಗ ಇಂಥ ತಪ್ಪು ಮಾಡಬೇಡಿ, ಇಂಥ ವಸ್ತುಗಳನ್ನು ದಾನ ಮಾಡಬೇಡಿ..
ಮಂತ್ರಾಲಯದಲ್ಲಿ ರಾಯರ 352ನೇ ಆರಾಧನೆಗೆ ಶೇಷವಸ್ತ್ರ ಸಮರ್ಪಣೆ.. ಏನಿದರ ವಿಶೇಷ..?
ಈ ನಾಲ್ಕು ಸ್ಥಳಗಳು ನಿಮ್ಮ ಜೀವಕ್ಕೆ ಅಪಾಯ ತರಬಹುದು ಎನ್ನುತ್ತಾರೆ ಚಾಣಕ್ಯರು..