Sunday, December 22, 2024

Latest Posts

‘ಇಂದಿರಾ’ ಚಿತ್ರದ ಪೋಸ್ಟರ್ ಬಿಡುಗಡೆಗೊಳಿಸಿದ ಪವರ್ ಸ್ಟಾರ್

- Advertisement -

ನಟಿ ಅನಿತಾ ಭಟ್ ಸಿನಿಮಾ ನಿರ್ಮಾಣದತ್ತ ಹೊಸ ಹೆಜ್ಜೆ ಇಟ್ಟಿದ್ದಾರೆ. ಅನಿತ ಭಟ್ ಕ್ರಿಯೇಷನ್ಸ್ ಅಡಿ ಹೊಸ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಸಂಸ್ಥೆಯ ಮೊದಲ ಸಿನಿಮಾವಾಗಿ ‘ಸಮುದ್ರಂ’ ಚಿತ್ರ ಈಗಾಗಲೇ ಸೆಟ್ಟೇರಿದ್ದು, ಇದೀಗ ಎರಡನೇ ಚಿತ್ರವಾಗಿ ‘ಇಂದಿರಾ’ ಸಿನಿಮಾವನ್ನು ಅನೌನ್ಸ್ ಮಾಡಲಾಗಿದೆ.

ಇಂದಿರಾ ಚಿತ್ರದ ಟೈಟಲ್  ಪೋಸ್ಟರನ್ನು  ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಬಿಡುಗಡೆ ಮಾಡುವ ಮೂಲಕ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದ್ದು, ಒಂದು ಆಕ್ಸಿಡೆಂಟ್ ನ ಸುತ್ತ ಇಡೀ ಕಥೆ ಸುತ್ತಲಿದೆ. ಚಿತ್ರ ಕಥೆ ಬರೆದಿರೋ ರಿಷಿಕೇಶ್ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಅನಿತಾ ಭಟ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೃಷ್ಟಿಹೀನ ಮರೆಗುಳಿಯ  ಪಾತ್ರಕ್ಕೆ ಅನಿತ ಭಟ್ ಜೀವತುಂಬಲಿದ್ದಾರೆ. ಈ ಚಿತ್ರದ ತಾರಾಬಳಗದಲ್ಲಿ  ಶಫಿ, ನೀತೂ ಶೆಟ್ಟಿ, ಎಸ್ ಜೆ ಕಾರ್ತಿಕ್ ಗೌಡ, ರೆಹಮಾನ್ ಹಾಸನ್, ಚಕ್ರವರ್ತಿ ಚಂದ್ರಚೂಡ್ ಮುಂತಾದವರು ಕಾಣಿಸಿಕೊಳ್ಳಲಿದ್ದಾರೆ.

ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣವಾಗುತ್ತಿದ್ದು, ಅನಿತಾ ಭಟ್ ಹಾಗೂ ಸಹ ನಿರ್ಮಾಪಕರಾಗಿ ಪ್ರಜ್ಞಾನಂದ ಸೊರಬ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ನಿರ್ದೇಶನದ ಜೊತೆಗೆ ರಿಷಿಕೇಶ್ ಚಿತ್ರದ ಛಾಯಾಗ್ರಹಣ, ಸಂಕಲನ ಜವಾಬ್ದಾರಿಯನ್ನೂ ಹೊತ್ತುಕೊಂಡಿದ್ದಾರೆ. ಚಿತ್ರಕ್ಕೆ ಲೋಹಿತ್ ಎಲ್.ನಾಯಕ್ ಸಂಗೀತ ನಿರ್ದೇಶನ, ಅಭಿಷೇಕ್ ಮಠದ್ ನೃತ್ಯ ನಿರ್ದೇಶನವಿದೆ.

ಫಿಲಂ ಬ್ಯೂರೋ, ಕರ್ನಾಟಕ ಟಿವಿ

- Advertisement -

Latest Posts

Don't Miss