Monday, December 23, 2024

Latest Posts

ದುರ್ಗಾಪರಮೇಶ್ವರಿ ಕಟೀಲಿನಲ್ಲಿ ಬಂದು ನೆಲೆಸಿದ್ದು ಹೇಗೆ..?

- Advertisement -

Spiritual : ಬರೀ ದಕ್ಷಿಣ ಕನ್ನಡದವರಿಗಷ್ಟೇ ಅಲ್ಲ. ಕರ್ನಾಟಕದ, ದೇಶ ವಿದೇಶದಲ್ಲಿರುವ ಕನ್ನಡಿಗರಿಗೆ, ಕಟೀಲು ದುರ್ಗಾಪರಮೇಶ್ವರಿ ಅಂದ್ರೆ ಅಪಾರ ಭಕ್ತಿ. ಹಾಗಾಗಿಯೇ ಬಾಲಿವುಡ್‌ಗೆ ಹಾರಿರುವ, ವಿದೇಶದಲ್ಲಿ ಕೆಲಸ ಮಾಡುವವರು ಕೂಡ ಅಪರೂಪಕ್ಕಾದರೂ, ದೇವಿಯ ದರ್ಶನಕ್ಕೆ ಬಂದು ಹೋಗುತ್ತಾರೆ. ಆದರೆ ಕಟೀಲು ದುರ್ಗಾಪರಮೇಶ್ವರಿ ಕಟೀಲಿಗೆ ಬಂದು ನೆಲೆಸಿದ್ದು ಹೇಗೆ ಅನ್ನೋ ಬಗ್ಗೆ ಹಲವರಿಗೆ ಗೊತ್ತಿಲ್ಲ. ಇಂದು ನಾವು ಈ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಲಿದ್ದೇವೆ..

ನಂದಿನಿ ನದಿ ಮಧ್ಯಭಾಗದಲ್ಲಿರುವ ಕಟೀಲು ದುರ್ಗಾಪರಮೇಶ್ವರಿ, ದುಂಬಿ ರೂಪದಲ್ಲಿ ಬಂದು ಭಕ್ತರ ರಕ್ಷಣೆಗೆ ನೆಲೆನಿಂತವಳು. ದೇವಿ ಮಹಾತ್ಮೆಯ ಪ್ರಕಾರ, ದೇವಿ ಈ ಮೊದಲೇ ಶುಂಭ ನಿಶುಂಭರನ್ನು ಸಂಹರಿಸಿದ್ದಳು. ಇದಾದ ಬಳಿಕ ಶುಂಭ ನಿಶುಂಭರ ಮಂತ್ರಿಯಾಗಿದ್ದ ಅರುಣಾಸುರ, ಋಷಿಮುನಿಗಳಿಗೆ ಉಪಟಳ ನೀಡುತ್ತಿದ್ದ. ಅವರು ಮಾಡುತ್ತಿದ್ದ ಯಜ್ಞ, ಯಾಗಾದಿಗಳಿಗೆ ಭಂಗ ತರಲೆತ್ನಿಸಿದ. ಆಗ ಲೋಕದಲ್ಲಿ ಕ್ಷಾಮ ಉಂಟಾಗಿ, ಜನ ಕಂಗಾಲಾದರು.

ಆಗ ಜಾಬಾಲಿ ಮಹರ್ಷಿಗಳು ಭೂಲೋಕದಲ್ಲಿ ಮಳೆಹರಿಸಲು ನಿಶ್ಚಿಯಿಸಿ, ಸ್ವರ್ಗಲೋಕಕ್ಕೆ ಬಂದು ತಮ್ಮ ಯಜ್ಞಕ್ಕೆ ಕಾಮಧೇನುವಿನ ಅವಶ್ಯಕತೆ ಇದೆ. ಅವಳನ್ನು ನನ್ನೊಡನೆ ಕಳುಹಿಸಿ ಕೊಡಿ ಎಂದು ದೇವೇಂದ್ರನಲ್ಲಿ ಕೇಳಿಕೊಂಡರು. ಕಾಮಧೇನು ವರುಣಲೋಕಕ್ಕೆ ತೆರಳಿದ ಕಾರಣ, ಆಕೆಯ ಮಗಳಾದ ನಂದಿನಿಯನ್ನು ಕರೆದುಕೊಂಡು ಹೋಗಿ ಎಂದು ಹೇಳಿದರು. ಜಾಬಾಲಿ ಋಷಿಗಳು, ನಂದಿಯ ಬಳಿ ಹೋಗಿ, ಭೂಲೋಕಕ್ಕೆ ಬರುವಂತೆ ಕೇಳಿಕೊಂಡಾಗ, ನಂದಿನಿ ದುರಹಂಕಾರದಿಂದ ತಾನು ಭೂಲೋಕಕ್ಕೆ ಬರುವುದಿಲ್ಲವೆಂದು ಹೇಳಿದಳು.

ಇದರಿಂದ ಕೋಪಗೊಂಡ ಋಷಿಗಳು, ನಂದಿನಿ ನೀನು ಭೂಲೋಕದಲ್ಲಿ ನದಿಯಾಗಿ ಹರಿಯೆಂದು ಶಾಪ ನೀಡಿದರು. ಆಗ ನಂದಿನಿಗೆ ಆಕೆಯ ತಪ್ಪಿನ ಅರಿವಾಗಿ, ಕ್ಷಮೆ ಕೇಳಿದಳು. ಶಾಪವಿಮೋಚನೆಗಾಗಿ ದುರ್ಗೆಯನ್ನು ಆರಾಧಿಸೆಂದು ಹೇಳಿದರು. ನಂದಿನಿ ದುರ್‌ಗೆಯನ್ನು ಪ್ರಾರ್ಥಿಸಿದಾಗ, ಜಾಬಾಲಿ ಮುನಿಯ ಶಾಪ ಹಿಂದೆಗೆದುಕೊಳ್ಳಲು ಆಗುವುದಿಲ್ಲ. ನೀನು ಭೂಲೋಕದಲ್ಲಿ ನದಿಯಾಗಿ ಹರಿಯಲೇಬೇಕು. ನಾನು ನಿನ್ನ ಮಗಳಾಗಿ ಬಂದು, ನಿನ್ನ ಶಾಪವನ್ನು ವಿಮೋಚನೆ ಮಾಡುತ್ತೇನೆ ಎನ್ನುತ್ತಾಳೆ. ಅದರಂತೆ ನಂದಿನಿ ಭೂಲೋಕದಲ್ಲಿ ನದಿಯಾಗಿ ಹರಿಯುತ್ತಾಳೆ.

ಬಳಿಕ ಅರುಣಾಸುರನ ಉಪಟಳ ಮುಂದುವರಿಯುತ್ತದೆ. ತ್ರಿಮೂರ್ತಿಗಳು, ದೇವಿಯ ಮೊರೆ ಹೋಗುತ್ತಾರೆ. ದೇವಿ ಮೋಹಿನಿಯ ರೂಪವನ್ನು ತಾಳಿ ಅರುಣಾಸುರನ ಉದ್ಯಾನದಲ್ಲಿ ನರ್ತಿಸುತ್ತಿರುತ್ತಾಳೆ. ಆಕೆಯ ರೂಪಕ್ಕೆ ಮನಸೋತ ಅರುಣಾಸುರ ಆಕೆಯ ಬಳಿ ಬರುತ್ತಾನೆ. ಅವನಿಗೆ ಆಕೆ ತನ್ನನ್ನು ವಧಿಸಲು ಬಂದಿರುವ ದೇವಿ ಎಂದು ಗೊತ್ತಾಗುತ್ತದೆ. ಆಕೆಯ ಮೇಲೆ ದಾಳಿ ಮಾಡಲು ಹೋದಾಗ, ದೇವಿ ದುಂಬಿಯ ರೂಪ ತಾಳಿ, ಬಂಡೆಯೊಳಗೆ ಹೋಗುತ್ತಾಳೆ. ಅರುಣಾಸುರ ಆ ಬಂಡೆಯನ್ನು ಒಡೆದಾಗ, ಅದರಿಂದ ಸಾವಿರಾರು ದುಂಬಿಗಳು ಬಂದು, ಅರುಣಾಸುರದ ಮೇಲೆ ದಾಳಿ ಮಾಡುತ್ತದೆ. ಕೊನೆಗೆ ದೇವಿ ದೊಡ್ಡ ದುಂಬಿ ರೂಪದಲ್ಲಿ ಬಂದು ಅರುಣಾಸುರನನ್ನು ಕಚ್ಚಿ ಸಾಯಿಸುತ್ತಾಳೆ.

ಬಳಿಕ ದೇವಿ, ನಂದಿಯ ಮಗಳಾಗಿ ಭೂಲೋಕಕ್ಕೆ ಬರುತ್ತಾಳೆ. ನಂದಿಯ ಶಾಪ ವಿಮೋಚನೆಯಾಗುತ್ತದೆ. ನಂದಿನಿ ನಂದಿಯ ಮಧ್ಯ ಭಾಗದಲ್ಲಿ ಅಂದರೆ, ನಂದಿನಿಯ ಸೊಂಟದ ಭಾಗದಲ್ಲಿ ದೇವಿ ನೆಲೆ ನಿಲ್ಲುತ್ತಾಳೆ. ಇಲ್ಲಿ ಸೊಂಟದ ಇನ್ನೊಂದು ಹೆಸರು ಕಟಿ. ಆಕೆ ಇಳೆ ಅಂದರೆ ಭೂಮಿಯ ಮೇಲೆ ಉದ್ಭವಿಸಿದ್ದಕ್ಕೆ, ಕಟಿ- ಇಳೆ ಎಂದು ಹೇಳಲಾಯಿತು. ಇದನ್ನೇ ಇಂದು ಕಟೀಲು ಎಂದು ಹೇಳಲಾಗುತ್ತದೆ.

ಬೀಟ್ರೂಟ್ ಈ ರೀತಿಯಾಗಿ ಬಳಸಿದರೆ, ಮೇಕಪ್ ಮಾಡುವುದೇ ಬೇಕಾಗಿಲ್ಲ..

ಬಾಯಿ ವಾಸನೆ ತಡೆಗಟ್ಟಲು ಇಲ್ಲಿದೆ ನೋಡಿ ಉತ್ತಮ ಪರಿಹಾರ..

ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..

- Advertisement -

Latest Posts

Don't Miss