ಎಲ್ಲಾ ಹೆಣ್ಣು ಮಕ್ಕಳಿಗೂ ಚೆಂದದ ಬಟ್ಟೆ ಹಾಕೋಬೇಕು ಅಂತಾ ಆಸೆ ಇರತ್ತೆ. ಕೆಲವರಿಗೆ ಸ್ಲಿವಲೆಸ್ ಬಟ್ಟೆ, ಮತ್ತೆ ಕೆಲವರಿಗೆ ಶಾರ್ಟ್ ಸ್ಕರ್ಟ್, ಹೀಗೆ ತರಹೇವಾರಿ ಬಟ್ಟೆ ಹಾಕಬೇಕು ಅಂತಾ ಇರತ್ತೆ. ಆದ್ರೆ ಮಂಡಿ, ಮೊಣಕೈ, ಕಂಕುಳ ಭಾಗದಲ್ಲಿ ಕಪ್ಪಾದ ಕಲೆ ಇದ್ದ ಕಾರಣ, ಇಂಥ ಬಟ್ಟೆ ಹಾಕೋಕ್ಕೆ ಮುಜುಗರ ಆಗತ್ತೆ. ಹಾಗಾಗಿ ನಾವಿಂದು ಮಂಡಿ, ಮೊಣಕೈ, ಕಂಕುಳ ಭಾಗದಲ್ಲಿರುವ ಕಪ್ಪು ಬಣ್ಣವನ್ನ ಹೇಗೆ ತಿಳಿಯಾಗಿಸಬೇಕು ಅಂತಾ ಹೇಳಲಿದ್ದೇವೆ..
ಮೊದಲನೇಯ ಟಿಪ್ಸ್. ಒಂದು ಸ್ಪೂನ್ ಮೊಸರು ಮತ್ತು ಒಂದು ಸ್ಪೂನ್ ಆ್ಯಪಲ್ ಸೀಡರ್ ವಿನೇಗರ್ ಮಿಕ್ಸ್ ಮಾಡಿ, ಕಪ್ಪಾಗಿರುವ ಸ್ಥಳಕ್ಕೆ ಹಚ್ಚಿ. 15 ನಿಮಿಷ ಬಿಟ್ಟು ವಾಶ್ ಮಾಡಿ.
ಎರಡನೇಯ ಟಿಪ್ಸ್, ನ್ಯಾಚುರಲ್ ಆ್ಯಲೋವೆರಾ ಜೆಲ್ನಿಂದ ಮೊಣಕೈ, ಮೊಣಕಾಲು ಮತ್ತು ಕಂಕುಳಿಗೆ ಮಸಾಜ್ ಮಾಡಿದ್ರೆ, ಆ ಸ್ಥಳದಲ್ಲಿರುವ ಕಪ್ಪು ಕಲೆ ಮಾಯವಾಗತ್ತೆ.
ಮೂರನೇಯ ಟಿಪ್ಸ್, ಒಂದು ಸ್ಪೂನ್ ನಿಂಬೆರಸ, ಒಂದು ಸ್ಪೂನ್ ಸೌತೇಕಾಯಿ ಪೇಸ್ಟ್, ಮತ್ತು ಅರ್ಧ ಸ್ಪೂನ್ ಅರಿಶಿನ ಮಿಕ್ಸ್ ಮಾಡಿ, ಡಾರ್ಕನ್ ಏರಿಯಾಗೆ ಹಚ್ಚಿ, 15 ನಿಮಿಷ ಬಿಟ್ಟು ವಾಶ್ ಮಾಡಿ.
ನಾಲ್ಕನೇಯ ಟಿಪ್ಸ್, ಆಲೂಗಡ್ಡೆ ಸ್ಲೈಸ್ ಮಾಡಿ, ಅದರಿಂದ ಡಾರ್ಕನ್ ಏರಿಯಾಕ್ಕೆ ಮಸಾಜ್ ಮಾಡಿ.
Women’s day special ವಿದ್ಯಾಭ್ಯಾಸವಿಲ್ಲದವರು ಕೂಡ ಈ ಕೆಲಸ ಮಾಡಬಹುದು.. ಭಾಗ 2