Thursday, September 19, 2024

Latest Posts

ಕೋಲ್ಕತ್ತಾ ಸ್ಟೈಲ್ ಝಾಲ್ಮುರಿ ರೆಸಿಪಿ..

- Advertisement -

ನಾವು ನೀವು ಚುರ್ಮುರಿ, ಭೇಲ್‌ಪುರಿಯನ್ನ ತಿಂದೀರ್ತಿವಿ. ಆದ್ರೆ ನಾವಿವತ್ತು ಕೋಲ್ಕತ್ತಾ ಶೈಲಿಯ ಝಾಲ್ಮುರಿ ಮಾಡೋದು ಹೇಗೆ ..? ಅದಕ್ಕೆ ಬೇಕಾಗುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: ಒಂದೊಂದು ಚಮಚ ಸೋಂಪು- ಜೀರಿಗೆ- ಕೊತ್ತೊಂಬರಿ ಕಾಳು,  ಒಂದು ದೊಡ್ಡ ಬೌಲ್ ಚುರ್ಮುರಿ, ಸಣ್ಣಗೆ ಕತ್ತರಿಸಿದ ಈರುಳ್ಳಿ ಮತ್ತು ಟೊಮೆಟೋ, ಒಂದು ಬೇಯಿಸಿದ ಆಲೂಗಡ್ಡೆ, ಅರ್ಧ ಕಪ್ ಬೇಯಿಸಿದ ಬಟಾಣಿ, ಸಣ್ಣಗೆ ಕತ್ತರಿಸಿದ ಹಸಿ ಮೆಣಸು, ತುರಿದುಕೊಂಡ ಬೆಳ್ಳುಳ್ಳಿ, ಕಪ್ಪು ಉಪ್ಪು, ಸೇವು, ಚೌಚೌ, ಒಂದು ಸ್ಪೂನ್ ಸಾಸಿವೆ ಎಣ್ಣೆ ಮತ್ತು ಉಪ್ಪಿನ ಕಾಯಿಯ ಎಣ್ಣೆ, ಸಣ್ಣಗೆ ಕತ್ತರಿಸಿದ ಕೊತ್ತೊಂಬರಿ ಸೊಪ್ಪು, ಅರ್ಧ ನಿಂಬೆ ಹಣ್ಣಿನ ರಸ.

ಮಾಡುವ ವಿಧಾನ: ಸೋಂಪು, ಜೀರಿಗೆ ಮತ್ತು ಕೊತ್ತೊಂಬರಿ ಕಾಳನ್ನು ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿದು, ಪುಡಿ ಮಾಡಿಕೊಳ್ಳಿ. ಈಗ ಒಂದು ದೊಡ್ಡ ಬೌಲ್ ಅಥವಾ ಬೋಗುಣಿ ತೆಗೆದುಕೊಂಡು, ಅದರಲ್ಲಿ ಚುರುಮುರಿ, ಈರುಳ್ಳಿ, ಟೋಮೆಟೋ, ಹಸಿಮೆಣಸಿನಕಾಯಿ, ಆಲೂಗಡ್ಡೆ, ಬಟಾಣಿ, ಬೆಳ್ಳುಳ್ಳಿ, ರೆಡಿ ಮಾಡಿಟ್ಟುಕೊಂಡ ಪುಡಿಯಲ್ಲಿ ಅರ್ಧ ಚಮಚ ಮಸಾಲೆ ಪುಡಿ, ಉಪ್ಪು, ಸಾಸಿವೆ ಎಣ್ಣೆ, ಉಪ್ಪಿನಕಾಯಿಯ ಎಣ್ಣೆ, ಚೌಚೌ, ಸೇವು, ಕೊತ್ತೊಂಬರಿ ಸೊಪ್ಪು ಮತ್ತು ನಿಂಬೆ ರಸವನ್ನ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದ್ರೆ, ಕೋಲ್ಕತ್ತಾ ಸ್ಟೈಲ್ ಝಾಲ್ಮುರಿ ರೆಡಿ. ಇದನ್ನು ತಕ್ಷಣವೇ ತಿನ್ನಬೇಕು.

ಪೇರಲೆ ಮರದ ಎಲೆಗಳು ಆರೋಗ್ಯಕ್ಕೆಷ್ಟು ಲಾಭಕಾರಿ ಗೊತ್ತಾ..?

ಸಂಜೆ ತಿಂಡಿಗಾಗಿ ಮಸಾಲಾ ಪೂರಿ ರೆಸಿಪಿ..

- Advertisement -

Latest Posts

Don't Miss