ಬೆಂಗಳೂರು : ವಿಧಾನಸೌಧ(Vidhana Soudha)ದಲ್ಲಿ ನಡೆಯುತ್ತಿರುವ 25 ವಿಧಾನಪರಿಷತ್ ಅಭ್ಯರ್ಥಿಗಳ ಪ್ರತಿಜ್ಞಾವಿಧಿ ನಡೆಯುತ್ತಿದ್ದು, ಅಲ್ಲಿ 500ಕ್ಕೂ ಹೆಚ್ಚು ಜನರು ಸೇರಿದ್ದಾರೆ. ಯಾವುದೇ ಕೊರೋನಾ ನಿಯಮಗಳನ್ನು ಪಾಲಿಸುತ್ತಿಲ್ಲ, ಆದ್ದರಿಂದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakuma) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದಾರೆ, ಅವರನ್ನು ನಿಯಂತ್ರಿಸಿದ್ದಾರಾ?, ಇಲ್ಲಿ ಕೋವಿಡ್ (Covid)ಇಲ್ಲವಾ?, ಗುಡ್ಡ ಸಚಿವರು ಏನು ಮಾಡುತ್ತಿದ್ದಾರೆ?, ಪ್ರತಿಜ್ಞಾವಿಧಿ ಕಾರ್ಯಕ್ರಮಕ್ಕೆ ಅವಕಾಶ ಕೊಟ್ಟಿದ್ದು ಹೇಗೆ?, ಸರ್ಕಾರದವರು ನಮ್ಮನೇನು ಹೆದರಿಸುತ್ತಿದ್ದಾರಾ?, ನನ್ನ ಬಂಧಿಸಲಿ ,ಸಿದ್ದರಾಮಯ್ಯರನ್ನು(Siddaramaiah) ಬಂಧಿಸಲಿ, ನಾವು ನೀರಿಗಾಗಿ ಪಾದಯಾತ್ರೆಯನ್ನು ಮಾಡೇ ಮಾಡುತ್ತೇವೆ ಎಂದು ವಿಧಾನಸೌಧದಲ್ಲಿ ಕಾಂಗ್ರೆಸ್ನ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.