Friday, June 20, 2025

Latest Posts

ಚಳಿಗಾಲಕ್ಕಾಗಿ ಸಕ್ಕರೆ ಇಲ್ಲದೇ ಆರೋಗ್ಯಕರ, ರುಚಿಕರ ಲಾಡು ತಯಾರಿಸಿ..

- Advertisement -

ಚಳಿಗಾಲದಲ್ಲಿ ನಮ್ಮ ದೇಹವನ್ನು ಆರೋಗ್ಯಕರವಾಗಿ ಇಟ್ಟುಕೊಳ್ಳಬೇಕು ಅಂದ್ರೆ, ನಾವು ನಮ್ಮ ದೇಹಕ್ಕೆ ಶಕ್ತಿ ಕೊಡುವಂಥ ಆಹಾರವನ್ನು ಸೇವಿಸಬೇಕು. ಹಾಗಾಗಿ ಇಂದು ನಾವು ಶಕ್ತಿಯುತವಾದ, ಆರೋಗ್ಯಕರ, ರುಚಿಕರ ಲಾಡು ಮಾಡೋದು ಹೇಗೆ..? ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: ನಾಲ್ಕು ಸ್ಪೂನ್ ಮೆಂತ್ಯೆ, ಅರ್ಧ ಕಪ್ ಮಖಾನಾ, 20ರಿಂದ 25 ಬಾದಾಮಿ ಬೀಜ, 25 ಗೋಡಂಬಿ ಮತ್ತು ಪಿಸ್ತಾ, ಕಾಲು ಕಪ್ ಕಲ್ಲಂಗಡಿ ಬೀಜ, ಒಂದು ಕಪ್ ತುರಿದ ಒಣ ಕೊಬ್ಬರಿ, ತುಪ್ಪ, ಅರ್ಧ ಕಪ್ ತಿನ್ನುವ ಅಂಟು, ಎರಡು ಸ್ಪೂನ್ ಕಡಲೆ ಹಿಟ್ಟು, ಅರ್ಧ ಕಪ್ ಗೋಧಿ ಹಿಟ್ಟು, ಒಂದು ಸ್ಪೂನ್ ಗಸಗಸೆ.

ಮಾಡುವ ವಿಧಾನ: ಮೊದಲು ಒಂದು ಮಿಕ್ಸಿ ಜಾರ್ ತೆಗೆದುಕೊಂಡು ಅದರಲ್ಲಿ ಮೆಂತ್ಯೆ ಹಾಕಿ, ಫೈನ್ ಪೌಡರ್ ಮಾಡಿಕೊಳ್ಳಿ. ಈ ಪುಡಿಯನ್ನು ಒಂದು ಬೌಲ್‌ಗೆ ಹಾಕಿ. ಇದಕ್ಕೆ ಒಂದು ಕಪ್ ಕಾಯಿಸಿ, ಆರಿಸಿದ ಹಾಲು ಹಾಕಿ, ಮಿಕ್ಸ್ ಮಾಡಿ, ಪಕ್ಕಕ್ಕಿರಿಸಿ.

ಈಗ ಒಂದು ಪ್ಯಾನ್ ಬಿಸಿ ಮಾಡಿ, ಅದರಲ್ಲಿ ಒಣ ಕೊಬ್ಬರಿ ತುರಿ ಹಾಕಿ, ಹುರಿಯಿರಿ. ಈಗ ಅದೇ ಪ್ಯಾನ್‌ಗೆ ಒಂದು ಸ್ಪೂನ್ ತುಪ್ಪ ಹಾಕಿ, ಬಾದಾಮ್, ಪಿಸ್ತಾ, ಗೋಡಂಬಿ ಹಾಕಿ, ಹುರಿಯಿರಿ. ಈಗ ಡ್ರೈಫ್ರೂಟ್ಸ್ ತೆಗೆದಿಟ್ಟು, ಪ್ಯಾನ್‌ನಲ್ಲಿದ್ದ ತುಪ್ಪಕ್ಕೆ ಮಖಾನಾ ಮತ್ತು ಕಲ್ಲಂಗಡಿ ಬೀಜ ಹಾಕಿ, ಹುರಿಯಿರಿ. ಈಗ ಹುರಿದ ಪದಾರ್ಥಗಳನ್ನು ಒಂದು ಬೌಲ್‌ನಲ್ಲಿರಿಸಿ.

ಈಗ ಅದೇ ಪ್ಯಾನ್‌ಗೆ ತುಪ್ಪ ಹಾಕಿ, ಅಂಟು ಹಾಕಿ ಕರಿದುಕೊಳ್ಳಿ. ಅಂಟು ಕರಿದ ಬಳಿಕ ಕ್ರಿಸ್ಪಿಯಾಗುತ್ತದೆ. ಈಗ ಹುರಿದುಕೊಂಡ ಪದಾರ್ಥಗಳು ತಣ್ಣಗಾಗಲು ಬಿಡಿ. ನಂತರ ಒಂದು ಮಿಕ್ಸಿ ಜಾರ್‌ಗೆ, ಹುರಿದುಕೊಂಡ, ಡ್ರೈಫ್ರೂಟ್ಸ್, ಮಖಾನಾ, ಅಂಟು ಎಲ್ಲವನ್ನೂ ಹಾಕಿ, ತರಿ ತರಿಯಾಗಿ ಪುಡಿ ಮಾಡಿ. ಈ ಪ್ಯಾನ್‌ಗೆ ಮತ್ತಷ್ಟು ತುಪ್ಪ ಹಾಕಿ, ಅದಕ್ಕೆ ಮೊದಲೇ ನೆನೆಸಿಟ್ಟಿದ್ದ ಮೆಂತ್ಯೆ ಹಿಟ್ಟು ಮತ್ತು ಹಾಲಿನ ಮಿಶ್ರಣ ಹಾಕಿ, ಚೆನ್ನಾಗಿ ಹುರಿಯಿರಿ.

ಇದರ ಕಲರ್ ಕೊಂಚ ಚೇಂಜ್ ಆಗಿ, ಒಳ್ಳೆಯ ಪರಿಮಳ ಬರಲು ಶುರುವಾದರೆ, ಇದು ಸರಿಯಾಗಿ ಹುರಿದಿದೆ ಎಂದರ್ಥ. ಇದನ್ನ ಪಕ್ಕಕ್ಕಿರಿಸಿ, ಮತ್ತೆ ಪ್ಯಾನ್‌ಗೆ ತುಪ್ಪ ಹಾಕಿ, ಎರಡು ಸ್ಪೂನ್ ಕಡಲೆ ಹಿಟ್ಟನ್ನು ಹುರಿದುಕೊಳ್ಳಿ. ಅದಕ್ಕೆ ಗೋದಿ ಹಿಟ್ಟು ಹಾಕಿ, ಮತ್ತಷ್ಟು ಹುರಿಯಿರಿ. ಇದಕ್ಕೆ ಮತ್ತಷ್ಟು ತುಪ್ಪ ಮತ್ತು ಒಂದು ಸ್ಪೂನ್ ಗಸಗಸೆ ಹಾಕಿ ಹುರಿಯಿರಿ. ಈಗ ಇವೆಲ್ಲವನ್ನೂ ಮಿಕ್ಸ್ ಮಾಡಿ ಲಾಡು ಕಟ್ಟಿದ್ರೆ, ಚಳಿಗಾಲಕ್ಕೆ ಬೇಕಾಗಿರುವ ಪೌಷ್ಠಿಕಾಂಶ ಭರಿತ ಲಾಡು ರೆಡಿ.

ಕೆಂಪು ಸೇಬು, ಹಸಿರು ಸೇಬು..ಎರಡರಲ್ಲಿ ಯಾವುದು ತಿಂದರೆ ಉತ್ತಮ..?

ಹೆಚ್ಚು ಹಾಲು ಕುಡಿದರೆ ಇಷ್ಟೆಲ್ಲಾ ಸಮಸ್ಯೆಗಳು ಬರುತ್ತದಾ…?

- Advertisement -

Latest Posts

Don't Miss