ನೀವು ಟೊಮೆಟೋ ರಸಂ ತಿಂದಿರಬಹುದು. ಬೇರೆ ಬೇರೆ ತರಕಾರಿಗಳ ರಸಂ ತಿಂದಿರಬಹುದು. ಆದ್ರೆ ನಿಂಬೆಹಣ್ಣಿನ ರಸಂ ತಿಂದವರು ತುಂಬಾ ಅಪರೂಪ. ಹಾಗಾಗಿ ನಾವಿಂದು ಐದೇ ನಿಮಿಷದಲ್ಲಿ ಮಾಡಬಹುದಾದ ನಿಂಬೆಹಣ್ಣಿನ ರಸಂ ರೆಸಿಪಿ ಹೇಳಲಿದ್ದೇವೆ. ಹಾಗಾದ್ರೆ ಇದನ್ನ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಹೇಗೆ ಮಾಡೋದು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಅರ್ಧ ಕಪ್ ತೊಗರಿ ಬೇಳೆ, ಮೂರು ಹಸಿ ಮೆಣಸು, ಕೊಂಚ ಕೊತ್ತಂಬರಿ ಸೊಪ್ಪು, ಎರಡು ಟೊಮೆಟೋ, ಕೊಂಚ ಅರಿಶಿನ, ಬೆಲ್ಲ, ಒಂದು ನಿಂಬೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ತುಪ್ಪ. ಒಗ್ಗರಣೆಗೆ ಕರಿಬೇವು, ಸಾಸಿವೆ, ಜೀರಿಗೆ, ಒಣಮೆಣಸು, ಉದ್ದಿನ ಬೇಳೆ, ಕಡಲೆ ಬೇಳೆ.
ಮಾಡುವ ವಿಧಾನ: ಮೊದಲು ತೊಗರಿ ಬೇಳೆಯನ್ನು ಚೆನ್ನಾಗಿ ತೊಳೆದು, ಅದಕ್ಕೆ ಅರಿಶಿನ ಕೊಂಚ ತುಪ್ಪ ಹಾಕಿ ಚೆನ್ನಾಗಿ ಬೇಯಿಸಿ. ನಂತರ ಒಂದು ಪ್ಯಾನ್‌ಗೆ ಕೊಂಚ ತುಪ್ಪ ಹಾಕಿ, ಹಸಿಮೆಣಸು, ಟೊಮೆಟೋ ಹಾಕಿ ಹುರಿಯಿರಿ. ಇದಕ್ಕೆ ನೀರು, ಉಪ್ಪು, ಬೇಯಿಸಿದ ಬೇಳೆ ಹಾಕಿ ಕುದಿ ಬರಿಸಿ. ರಸಂ ರೆಡಿಯಾದ ಬಳಿಕ ಒಗ್ಗರಣೆ ಕೊಟ್ಟು, ಕೊತ್ತಂಬರಿ ಸೊಪ್ಪು ಸೇರಿಸಿ. ಕೊನೆಗೆ ಗ್ಯಾಸ್ ಆಫ್ ಮಾಡಿ, ನಿಂಬೆ ರಸ ಹಿಂಡಿದ್ರೆ, ನಿಂಬೆ ರಸಂ ರೆಡಿ. ನೀವು ಬೇಳೆ ಸೇರಿಸದೆಯೂ ಇದೇ ರೀತಿ ನಿಂಬೆರಸಂ ಮಾಡಬಹುದು.




