ಹಾಸನದಲ್ಲಿ ಹಾಡುಹಗಲೇ ಚಿರತೆ ಪ್ರತ್ಯಕ್ಷ, ಗ್ರಾಮಸ್ಥರಲ್ಲಿ ಆತಂಕ

Hassan News: ಹಾಸನ : ಹಾಸನದಲ್ಲಿ ಹಾಡುಹಗಲೇ ಚಿರತೆ ಪ್ರತ್ಯಕ್ಷವಾಗಿದ್ದು, ರಸ್ತೆ ಬದಿಯ ರೈತರ ಜಮೀನಿನಲ್ಲಿ ಕುಳಿತಿದೆ. ಹಾಸನ ತಾಲೂಕಿನ ಕಟ್ಟಾಯ ಗ್ರಾಮಮದಲ್ಲಿ ಈ ಘಟನೆ ನಡೆದಿದ್ದು, ಚಂದ್ರಶೇಖರ್ ಎಂಬುವವರ ಜಮೀನಿನಲ್ಲಿ ಚಿರತೆ ಕಾಣಿಸಿಕೊಂಡಿದೆ.

ಹಲವು ದಿನಗಳಿಂದ ಈ ರೀತಿ ಚಿರತೆ ಕಾಣಿಸಿಕೊಳ್ಳುತ್ತಿದ್ದು, ಆಹಾರ ಅರಸಿ ಬರುತ್ತಿದೆ ಎನ್ನಲಾಗಿದೆ. ಇನ್ನು ಪ್ರತಿದಿನ ಇಲ್ಲಿನ ಗ್ರಾಮಸ್ಥರು ತಮ್ಮ ದನಕರುಗಳನ್ನು ಮೇಯಿಸಲು ಜಮೀನಿಗೆ ಕರೆದುಕೊಂಡು ಹೋಗುತ್ತಿದ್ದಾರೆ. ಇದೀಗ ಚಿರತೆ ಕಂಡು ಜನ ಜಮೀನಿಗೆ ಹೋಗಲು ಹೆದರುವಂತಾಗಿದೆ.

ಹೀಗಾಗಿ ಕೂಡಲೇ ಚಿರತೆ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ಗ್ರಾಮಸ್ಥರು ಒತ್ತಾಯಿಸಿದ್ದು, ಅನಾಹುತ ಸಂಭವಿಸುವ ಮುನ್ನ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಕಾಂಗ್ರೆಸ್‌ನ್ನು ಅಧಿಕಾರದಿಂದ ಕೆಳಗಿಳಿಸಿ, ವಿಧಾನಸೌಧದಿಂದ ಹೊರ ಕಳಿಸುವ ಹೋರಾಟ ಬಿಜೆಪಿ ಕೈಗೆತ್ತಿಕೊಳ್ಳಲಿದೆ: ವಿಜಯೇಂದ್ರ

ಮೋದಿ ಅಲೆಯಲ್ಲಿ ಯಾರೇ ನಿಂತರೂ ಸೋಲು ಗ್ಯಾರಂಟಿ: ಸಿ.ಟಿ.ರವಿ

ಅನಂತ್ ಅಂಬಾನಿ ಪ್ರಿವೆಡ್ಡಿಂಗ್ ಕಾರ್ಯಕ್ರಮದ ರಂಗು ಹೆಚ್ಚಿಸಿದ ಪಾಪ್ ಗಾಯಕಿ: ಸಂಭಾವನೆ ಎಷ್ಟು ಗೊತ್ತಾ..?

About The Author