Saturday, July 5, 2025

Latest Posts

ಪ್ರತಿದಿನ ಮಾಡುವ ಇಂಥ ಸಣ್ಣಪುಟ್ಟ ತಪ್ಪುಗಳಿಗೂ ಕ್ಷಮೆ ಇಲ್ಲವೆನ್ನುತ್ತಾನೆ ಶ್ರೀಕೃಷ್ಣ- ಭಾಗ 1

- Advertisement -

ಕೆಲವರು ಏನಾದರೂ ತಪ್ಪು ಮಾಡಿದಾಗ, ಅದೇನು ಬಿಡು ಸಣ್ಣ ತಪ್ಪು, ಸುಧಾರಿಸಿಕೊಳ್ತಾನೆ ಅಂತಾ ಹೇಳ್ತಾರೆ. ಆದ್ರೆ ತಪ್ಪು ಸಣ್ಣದಾಗಿದ್ರೂ, ದೊಡ್ಡದಾಗಿದ್ರೂ ತಪ್ಪು ತಪ್ಪೇ. ಅಂತೆಯೇ ತಿಳಿದು ಮಾಡಿದ್ರು, ತಿಳಿಯದೇ ಮಾಡಿದ್ರು ತಪ್ಪು ತಪ್ಪೇ. ಹಾಗಾಗಿ ನಾವು ಮಾಡುವ ಸಣ್ಣ ಪುಟ್ಟ ತಪ್ಪುಗಳು ಕೂಡ, ಯಮನ ಪಟ್ಟಿಯಲ್ಲಿ ಸೇರುತ್ತಂತೆ.

ಈ ದೇವಸ್ಥಾನಗಳಿಗೆ ಪುರುಷರು ಹೋಗುವಂತಿಲ್ಲ..

ಒಮ್ಮೆ ಕೃಷ್ಣ ಮತ್ತು ಅರ್ಜುನ ನಗರದಲ್ಲಿ ವಾಯುವಿಹಾರಕ್ಕೆಂದು ಬಂದಿರುತ್ತಾರೆ. ಅಲ್ಲಿ ಓರ್ವ ಕಳ್ಳ ಓಡುತ್ತ ಇವರ ಎದುರು ಬರುತ್ತಿದ್ದ. ಅದೇ ವೇಳೆ ಅಲ್ಲಿನ ಜನ ಕಳ್ಳ ಕಳ್ಳನೆಂದು ಬೊಬ್ಬೆ ಹಾಕುತ್ತಿದ್ದರು. ಕಳ್ಳನನ್ನು ಕಂಡ ಕೃಷ್ಣ ಮತ್ತು ಅರ್ಜುನ ಅವನನ್ನು ಹಿಡಿದು ನಿಲ್ಲಿಸಿದರು. ಮತ್ತು ಅವನು ಏನು ಕದ್ದನೆಂದು ಕೇಳಿದರು. ಆಗ ಅಲ್ಲಿದ್ದ ಒಬ್ಬ ಮಹಿಳೆ, ಇವನು ನಮ್ಮ ತೋಟದಿಂದ ಹಣ್ಣನ್ನು ಕದ್ದು ತಿಂದ ಎನ್ನುತ್ತಾಳೆ.

ಅಂತ್ಯ ಸಂಸ್ಕಾರದ ವೇಳೆ ಶವದ ತಲೆಯ ಮೇಲೆ 3 ಬಾರಿ ಕೋಲಿನಿಂದ ಹೊಡೆಯುವುದಕ್ಕೆ ಕಾರಣವೇನು..?

ಆಗ ಕೃಷ್ಣ, ಯಾಕೆ ಹೀಗೆ ಮಾಡಿದೆ ಎಂದು ಕೇಳುತ್ತಾನೆ. ಆಗ ಕಳ್ಳ, ನನಗೆ ಹಸಿವಾಗಿತ್ತು, ಹಾಗಾಗಿ ನಾನು ಹಣ್ಣು ಕದ್ದು ತಿಂದೆ ಎನ್ನುತ್ತಾನೆ. ಆಗ ಕೃಷ್ಣ, ನಿನ್ನ ಈ ತಪ್ಪಿಗೆ ನೀವು ಇವರ ಮನೆಯಲ್ಲಿ ಒಂದು ತಿಂಗಳು ಕೃಷಿ ಮಾಡಿಕೊಡಬೇಕು ಎನ್ನುತ್ತಾನೆ. ಆಗ ಕಳ್ಳ, ಇದು ಚಿಕ್ಕ ತಪ್ಪು. ನಾನು ಹಸಿವಾಗಿದ್ದಕ್ಕೆ, ಹಣ್ಣು ಕದ್ದು ತಿಂದೆ, ಅದಕ್ಕೆ ಈ ಶಿಕ್ಷೆ ಯಾಕೆ..? ನನ್ನನ್ನು ಕ್ಷಮಿಸಿಬಿಡಿ. ನನ್ನನ್ನು ಬಿಟ್ಟುಬಿಡಿ ಎನ್ನುತ್ತಾನೆ. ಆಗ ಕೃಷ್ಣ ಅವನ ಶಿಕ್ಷೆಯನ್ನು ಒಂದು ತಿಂಗಳಿನಿಂದ 6 ತಿಂಗಳಿಗೆ ಹೆಚ್ಚಿಸುತ್ತಾನೆ. ಅಲ್ಲಿಂದ ಎಲ್ಲರೂ ಹೊರಡುತ್ತಾರೆ.

ಎಂಥ ಮನೆಯಲ್ಲಿ ಹೆಣ್ಣು ಮಕ್ಕಳ ಜನನವಾಗುತ್ತದೆ..?

ನಂತರ ಕೃಷ್ಣ, ಅರ್ಜುನನಲ್ಲಿ ಕೇಳುತ್ತಾನೆ. ಯಾಕೆ ನೀನು ಅವನು ಕ್ಷಮೆ ಕೇಳಿದಾಗ, ಕ್ಷಮಿಸುವುದು ಬಿಟ್ಟು, ಶಿಕ್ಷೆ ಹೆಚ್ಚಿಸಿದೆ ಎಂದು ಕೇಳುತ್ತಾನೆ. ಆಗ ಕೃಷ್ಣ, ಇಂಥ ಸಣ್ಣ ತಪ್ಪೇ ಮುಂದೆ ದೊಡ್ಡ ತಪ್ಪಾಗುತ್ತದೆ ಎಂದು ಹೇಳುತ್ತ ಒಂದು ಕಥೆ ಹೇಳಲು ಶುರು ಮಾಡಿದ. ಓರ್ವ ಬಡವ ಬಡತನದಿಂದ ಕಂಗಾಲಾಗಿ, ರಾಜನ ಬಳಿ ಸಹಾಯ ಕೇಳಲು ಹೋದ. ರಾಜ ದಾನಿಯಾಗಿದ್ದ. ಆದ್ರೆ ಯಾರಿಗೆ ಅವಶ್ಯಕತೆ ಇದೆಯೋ ಅವರಿಗಷ್ಟೇ ದಾನ ನೀಡುತ್ತಿದ್ದ.

ರಾವಣನ ಮಗ ಮೇಘನಾಥ, ರಾವಣನಿಗಿಂತಲೂ ಬಲಶಾಲಿಯಾಗಲು ಏನು ಕಾರಣ..? ಯಾರೀತ..?

ಇಂಥವರನ್ನು ಪರೀಕ್ಷಿಸುವುದಕ್ಕಾಗಿಯೇ ರಾಜ ತನ್ನ ಅರಮನೆಗೆ 4 ದ್ವಾರ ಮಾಡಿದ್ದ. ಆ ನಾಲ್ಕು ದ್ವಾರದಲ್ಲಿ ಒಂದು ದ್ವಾರದಲ್ಲಿ ಮುಂದಾಗುವ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಳ ಬಂದವರಿಗೆ ಅವನು ಸಹಾಯ ಮಾಡುತ್ತಿದ್ದ. ಒಮ್ಮೆ ಈ ಬಡವ ಅರಮನೆಗೆ ಹೋದ. ಮೊದಲ ದ್ವಾರದಲ್ಲಿ ವೇಷ್ಯೆ ಎದುರಾದಳು, ಅವನು ಅವಳಲ್ಲಿ ಬಂದ ಕಾರಣ ಹೇಳಿದ. ಅದಕ್ಕೆ ಅವಳು, ಈ ದ್ವಾರದಿಂದ ನೀವು ರಾಜನ ಬಳಿ ಹೋಗಬೇಕೆಂದರೆ, ನೀವು ನನ್ನೊಂದಿಗೆ ರಾಸಲೀಲೆಯಲ್ಲಿ ತೊಡಗಿ, ನನ್ನನ್ನು ತೃಪ್ತಿಪಡಿಸಿ, ಹೋಗಬೇಕು ಎನ್ನುತ್ತಾಳೆ.

ಭ್ರೂಣಹತ್ಯೆ ಮಾಡುವವರಿಗೆ ನರಕದಲ್ಲಿ ಎಂಥ ಶಿಕ್ಷೆ ಸಿಗುತ್ತದೆ ಗೊತ್ತಾ..?

ಇದನ್ನು ಕೇಳಿ ಬಡವ ತಲೆ ತಗ್ಗಿಸಿ, ಇನ್ನೊಂದು ದ್ವಾರಕ್ಕೆ ಹೋದ, ಅಲ್ಲಿ ಓರ್ವ ಸೈನಿಕ ಎದುರಾದ. ಅವನು ಈ ದ್ವಾರದಿಂದ ನೀವು ರಾಜನ ಬಳಿ ಹೋಗಬೇಕಾದಲ್ಲಿ ನನ್ನ ಜೊತೆ ಕುಳಿತು ಮಾಂಸಾಹಾರ ಸೇವಿಸಿ, ಹೋಗಬೇಕು ಎಂದ.ಆದರೆ ಬಡವ ಬ್ರಾಹ್ಮಣನಾಗಿದ್ದ. ಹಾಗಾಗಿ ಮಾಂಸಾಹಾರ ತ್ಯಜಿಸಿ, ಮುಂದಿನ ದ್ವಾರಕ್ಕೆ ಹೋದ. ಅಲ್ಲಿ ಓರ್ವ ವ್ಯಕ್ತಿ ಬಂದು, ನೀವು ಮದಿರೆಯನ್ನು ಸೇವಿಸಿದರಷ್ಟೇ ಇಲ್ಲಿಂದ ಹೋಗಲು ಸಾಧ್ಯ ಎಂದ. ಬಡ ಬ್ರಾಹ್ಮಣ ಮುಂದೆ ಹೋದ. ನಾಲ್ಕನೇ ದ್ವಾರದಲ್ಲಿ ಅವನಿಗೆ ಯಾರು ಸಿಕ್ಕರು, ಮುಂದೇನಾಯಿತು ಎನ್ನುವ ಬಗ್ಗೆ ಮುಂದಿನ ಭಾಗದಲ್ಲಿ ತಿಳಿಯೋಣ ..

- Advertisement -

Latest Posts

Don't Miss