ವಿಷ್ಣುವಿನ ಅವತಾರವಾದ ಶ್ರೀಕೃಷ್ಣ ಜನ್ಮ ಪಡೆದಾಗ, ದೇವಾನು ದೇವತೆಗಳೆಲ್ಲ ಶ್ರೀಕೃಷ್ಣನನ್ನು ನೋಡಲು ದೇವಲೋಕದಿಂದ ಬರುತ್ತಾರೆ. ಆಗ ಆ ದೇವತೆಗಳಲ್ಲಿ ಶನಿದೇವ ಕೂಡ ಒಬ್ಬನಾಗಿರುತ್ತಾನೆ. ಈಗಾಗಲೇ ಎಲ್ಲರಿಗೂ ಗೊತ್ತಿರುವ ಪ್ರಕಾರ, ಶನಿದೇವ ಯಾರ ಹೆಗಲೇರಿ ಕೂರುತ್ತಾನೋ, ಅವನ ಜೀವನ ಕಷ್ಟದಲ್ಲಿರುವುದು ಖಚಿತ. ಯಾಕಂದ್ರೆ ಶನಿದೇವ, ಈ ಚರಾಚರಗಳ ಒಡೆಯನಾದ ಶಿವನನ್ನೇ ಬಿಡಲಿಲ್ಲ. ಇನ್ನು ಸಾಮಾನ್ಯರಿಗೆ ಬಿಡೋದುಂಟೇ..? ಹಾಗಾಗಿ ಊರಿನ ಜನರಿಗೆ ಭಯ ಶುರುವಾಯಿತು.
ನವರಾತ್ರಿಯ ಮೊದಲ ದಿನಕ್ಕೆ ಈ ಪ್ರಸಾದ ಮಾಡಿ..
ಶನಿ ದೇವನೇನಾದ್ರೂ ನಮ್ಮ ಊರಿಗೆ ಬಂದ್ರೆ, ಕೃಷ್ಣನನ್ನು ಕಂಡರೆ, ಬಾಲ ಕೃಷ್ಣನಿಗೆ ತೊಂದರೆಯಾಗಬಹುದು. ಹಾಗಾಗಿ ಶನಿದೇವ ಶ್ರೀಕೃಷ್ಣನನ್ನು ನೋಡದಂತೆ ತಡಿಯಬೇಕೆಂದು ನಿರ್ಧಿಸಿದರು. ಎಲ್ಲರೂ ಹೋಗಿ, ಉಳಿದ ದೇವತೆಗಳನ್ನು ಶ್ರೀಕೃಷ್ಣನ ದರ್ಶನಕ್ಕೆ ಬಿಟ್ಟರೂ ಕೂಡ, ಶನಿ ದೇವನನ್ನು ಬಿಡಲಿಲ್ಲ. ಆಗ ಶನಿದೇವನಿಗೆ ಬೇಸರವಾಗುತ್ತದೆ. ಅವನು ಶ್ರೀಕೃಷ್ಣನನ್ನು ನೆನೆದು ಕಣ್ಣೀರು ಹಾಕುತ್ತಾನೆ.
ನವರಾತ್ರಿಯ ಮೂರನೇ ದಿನದ ಪ್ರಸಾದ ರೆಸಿಪಿ..
ಶ್ರೀಕೃಷ್ಣ, ದೇವರು ನನ್ನನ್ನು ಸೃಷ್ಟಿ ಮಾಡಿರುವುದೇ, ತಪ್ಪು ಮಾಡಿದವರಿಗೆ ಶಿಕ್ಷೆ ಕೊಡಲೆಂದು. ಹಾಗಾಗಿ ನಾನು ತಪ್ಪು ಮಾಡಿದವರ ಹೆಗಲೇರಿ ಕುಳಿತು, ನನ್ನ ಕೆಲಸ ಮಾಡುತ್ತೇನೆ. ಆದ್ರೆ ಜನರೆಲ್ಲ ನನ್ನನ್ನು ಘಾತಕ ಮತ್ತು ಕ್ರೂರಿ ಎಂದು ತಪ್ಪು ತಿಳಿದಿದ್ದಾರೆ. ಈ ಕಾರಣಕ್ಕೆ ನಾನೆಲ್ಲಿ ನಿಮ್ಮನ್ನು ಘಾಸಿಗೊಳಿಸಿಬಿಡುತ್ತೇನೋ.. ಎಂಬ ಕಾರಣಕ್ಕೆ ನಿಮ್ಮ ದರ್ಶನಕ್ಕೆ ನನ್ನನ್ನು ಮಾತ್ರ ಬಿಡಲಿಲ್ಲ ಎಂದು ಬೇಸರ ಪಡುತ್ತಾನೆ.
ನವರಾತ್ರಿಯ ಎರಡನೇಯ ದಿನದ ಪ್ರಸಾದ ರೆಸಿಪಿ..
ಆಗ ಆ ಸ್ಥಳಕ್ಕೆ ಕೋಗಿಲೆಯ ವೇಷದಲ್ಲಿ ಬಂದ ಶ್ರೀಕೃಷ್ಣ, ನಿಮ್ಮ ಕರ್ತವ್ಯವನ್ನು ನೀವು ಚೆನ್ನಾಗಿ ನಿಭಾಯಿಸುತ್ತೀದ್ದೀರಿ. ನಿಮ್ಮಿಂದಲೇ, ಜನ ಕಪಟ ಮಾಡಲು ಹೆದರುತ್ತಾರೆ. ಮತ್ತು ಅಂಥವರಿಗೆ ನೀವು ತಕ್ಕ ಶಿಕ್ಷೆಯನ್ನೂ ನೀಡುತ್ತಿದ್ದೀರಿ. ಹಾಗಾಗಿ ನಿಮ್ಮ ಕೆಲಸ ನನಗೆ ಪ್ರೀತಿ ಪಾತ್ರವಾಗಿದೆ. ಇನ್ನು ನಾನಿಲ್ಲಿ ಕೋಗಿಲೆಯ ರೂಪದಲ್ಲಿ ಬಂದಿರುವುದಕ್ಕೂ ಒಂದು ಕಾರಣವಿದೆ.
ಮುಂದೊಂದು ದಿನ ಈ ಕಾಡನ್ನು ಕೋಕಿಲಾ ವನ ಎಂದು ಕರೆಯಲಾಗತ್ತೆ. ಮತ್ತು ಇಲ್ಲಿ ನನ್ನ ದೇವಸ್ಥಾನವಾಗುತ್ತದೆ. ಈ ದೇವಸ್ಥಾನಕ್ಕೆ ಬಂದು, ನನ್ನ ದರ್ಶನ ಮಾಡಿ, ಇಲ್ಲಿನ ವನದಲ್ಲಿ ನನ್ನನ್ನು ಪ್ರದಕ್ಷಿಣೆ ಹಾಕುತ್ತಾರೋ, ಅವರ ಕಷ್ಟವೆಲ್ಲ ಪರಿಹಾರವಾಗುತ್ತದೆ ಎನ್ನುತ್ತಾನೆ. ಹಾಗಾಗಿ ಕೋಕಿಲಾ ಗ್ರಾಮದಲ್ಲಿ ಕೃಷ್ಣನಿಗಾಗಿ ದೇವಸ್ಥಾನ ಕಟ್ಟಿಸಲಾಗಿದ್ದು, ಇಲ್ಲಿನ ಕಾಡನ್ನು ಕೋಕಿಲಾ ವನ ಎಂದು ಕರೆಯಲಾಗುತ್ತಿದೆ.