Wednesday, July 9, 2025

Latest Posts

Madhya Pradesh News: ಪ್ರಾಂಶುಪಾಲೆ- ಲೈಬ್ರರಿಯನ್ ಮಧ್ಯೆ ಡಿಶುಂ ಡಿಶುಂ

- Advertisement -

Madhya Pradesh News: ಶಾಲೆ, ಕಾಲೇಜು ಅಂದ್ರೆ, ಮಕ್ಕಳಿಗೆ ಶಿಕ್ಷಣ, ಸಭ್ಯತೆ ಹೇಳಿಕ“ಡುವ ಜಾಗ. ವಿದ್ಯಾರ್ಥಿಗಳು ಉತ್ತಮ ಭವಿಷ್ಯ ರೂಪಿಸಿಕ“ಳ್ಳಲು ಯಾವ ರೀತಿ ತಯಾರಾಗಬೇಕು ಎಂದು ತಿಳಿಸುವ ಜಾಗ. ಆದರೆ ಅಂಥ ಸ್ಥಳದಲ್ಲೇ, ಮಕ್ಕಳಿಗೆ ಬುದ್ಧಿ ಹೇಳಬೇಕಾದವರು ಬುದ್ಧಿಗೇಡಿಗಳ ಹಾಗೆ ವರ್ತಿಸಿದರೆ, ಹೇಗಿರುತ್ತದೆ..? ಇಂಥದ್ದೇ 1 ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು, ಘಟನಾ ಸ್ಥಳದಲ್ಲೇ ಇದ್ದ 1 ಇದನ್ನು ವೀಡಿಯೋ ಮಾಡಿದ್ದಾರೆ. ಈ ವೀಡಿಯೋ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಮಧ್ಯಪ್ರದೇಶದ ಖಾರ್ಗೋನ್ ಏಕಲವ್ಯ ಆದರ್ಶ ಶಾಲೆಯಲ್ಲಿ ಈ ಘಟನೆ ನಡೆದಿದೆ. ಈ ವೀಡಿಯೋದಲ್ಲಿ ಪ್ರಾಂಶಪಾಲೆ ಮತ್ತು ಲೈಬ್ರರಿಯನ್ ಜಗಳವಾಡಿಕ“ಂಡಿದ್ದು, ಪ್ರಾಂಶುಪಾಲೆ ಲೈಬ್ರರಿಯನ್‌ನ Mobile ನೆಲಕ್ಕೆ ಬಡಿದು ಬಡಿದು ಒಡೆದು ಹಾಕಿದ್ದಾರೆ. ಅಲ್ಲದೇ, ಲೈಬ್ರರಿಯನ್ ಕಪಾಳಕ್ಕೆ ಬಡಿದಿದ್ದಾರೆ.

ಇನ್ನು ಲೈಬ್ರರಿಯನ್‌ಗೂ ಕೋಪ ಬಂದಿದ್ದು, ಆಕೆಯೂ ಪ್ರಾಂಶುಪಾಲೆಯ ದುಪಟ್ಟಾ ಎಳೆದು, ಬಡಿದಿದ್ದಾರೆ. ಹೀಗೆ ಜಗಳ ಮುಂದುವರಿದಿದ್ದು, ಇಬ್ಬರೂ ಜಡೆ ಹಿಡಿದು ಜಗಳವಾಡಿದ್ದಾರೆ. ಈ ವೀಡಿಯೋದಲ್ಲಿರುವ ಪ್ರಾಂಶುಪಾಲೆಯನ್ನು ಪ್ರವೀಣ್ ದಹಿಯಾ ಎಂದು ಗುರುತಿಸಲಾಗಿದ್ದು, ಲೈಬ್ರರಿಯನ್ ಮಧುರಾಣಿ ಎನ್ನಲಾಗಿದೆ. ಘಟನೆ ನಡೆದ ಬಳಿಕ, ಇಬ್ಬರನ್ನೂ ಅವರವರ ಸ್ಥಾನದಿಂದ ಕಿತ್ತು ಹಾಕಲಾಗಿದೆ.

ಈ ವೀಡಿಯೋ ಎಕ್ಸ್ ಖಾತೆಯಲ್ಲಿ ಶೇರ್ ಆಗುತ್ತಿದ್ದಂತೆ, ಸಖತ್ ವೈರಲ್ ಆಗಿದೆ. ಅಲ್ಲದೇ, ಇದಕ್ಕೆ ಬಂಂದಿರುವ Comments ಕೂಡ ತರಹೇವಾರಿಯಾಗಿದೆ. ಇವರಲ್ಲಿ ಪ್ರಾಂಶುಪಾಲೆ ಗೆದ್ದಿದ್ದಾಳೆ. ಈಕೆಗೆ ಭಾರತ ರತ್ನ ಪ್ರಶಸ್ತಿ ನೀಡಿ, ಪಾಕಿಸ್ತಾನ ಬಾರ್ಡರ್‌ಗೆ ಕಳುಹಿಸಿಬಿ ಅಂತಾ ಓರ್ವ ಹೇಳಿದರೆ, ಇನ್ನೋರ್ವ ಶಿಕ್ಷಕಿಯರೇ ಈ ರೀತಿ ಇದ್ದರೆ, ಮಕ್ಕಳ ಪರಿಸ್ಥಿತಿ ಏನಾಗಬೇಡ ಎಂದಿದ್ದಾರೆ.

ಮತ್ತೋಬ್ಬರು, ಈ ಶಿಕ್ಷಕಿಯರಿಗೆ ಶಿಕ್ಷಣದ ಅವಶ್ಯಕತೆ ಇದೆ ಎಂದಿದ್ದಾರೆ. ಒಟ್ಟಾರೆಯಾಗಿ, ಮಕ್ಕಳಿಗೆ ಮಾದರಿಯಾಗಬೇಕಿದ್ದವರು, ಸೋಶಿಯಲ್ ಮೀಡಿಯಾದಲ್ಲಿ ಮರ್ಯಾದೆಗೆಟ್ಟಿದ್ದಾರೆ.

- Advertisement -

Latest Posts

Don't Miss