Recipe: ಮಂಗಳೂರಿನಲ್ಲಿ ಬರೀ ನಾನ್‌ವೆಜ್ ತಿನ್ನುವವರಿಗಷ್ಟೇ ಅಲ್ಲ, ವೆಜ್ ತಿನ್ನುವವರಿಗೆ ಅತೀ ಹೆಚ್ಚು ವೆರೈಟಿ ಫುಡ್‌ಗಳಿದೆ. ಗೋಳಿಬಜೆ, ನೀರ್‌ದೋಸೆ, ಕೊಟ್ಟೆಕಡಬು, ಪತ್ರೋಡೆ ಹೀಗೆ ಹೇಳುತ್ತಾ ಹೋದರೆ, ಬಾಯಲ್ಲಿ ನೀರೂರಿಸುತ್ತದೆ. ಅದೇ ರೀತಿ ಕಾಯಿವಡೆ ಕೂಡ ಮಂಗಳೂರಿನ ಸ್ಪೆಶಲ್ ಸ್ನ್ಯಾಕ್ಸ್‌ನಲ್ಲಿ ಒಂದಾಗಿದೆ. ಇಂದು ನಾವು ಕಾಯಿ ಒಡೆ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ.
ಒಂದು ಕಪ್ ಕಾಯಿ ತುರಿ, 3 ಒಣಮೆಣಸಿನಕಾಯಿ, ಅರ್ಧ ಸ್ಪೂನ್ ಜೀರಿಗೆ, ಕೊತ್ತೊಂಬರಿ ಕಾಳು, ಖಾರ ಹೆಚ್ಚು ಬೇಕಾದಲ್ಲಿ ಹಸಿಮೆಣಸು ಬಳಸಬಹುದು. ಇವನ್ನೆಲ್ಲ ಸೇರಿಸಿ, ಮಿಕ್ಸಿ ಜಾರ್‌ಗೆ ಹಾಕಿ ತರಿತರಿಯಾಗಿ ರುಬ್ಬಿಕೊಳ್ಳಿ. ಬಳಿಕ ಇದಕ್ಕೆ ಉಪ್ಪು ಮತ್ತು ಒಂದು ಕಪ್ ಅಕ್ಕಿ ಹಿಟ್ಟು ಸೇರಿಸಿಕೊಳ್ಳಿ. ಚಪಾತಿ ಹಿಟ್ಟಿನ ಹದಕ್ಕೆ, ಈ ಹಿಟ್ಟನ್ನ ಕಲಿಸಿಕೊಳ್ಳಿ. ಬಳಿಕ ಚಿಕ್ಕ ಚಿಕ್ಕ ಪೂರಿಯಾಕಾರಕ್ಕೆ ಇವನ್ನ ತಟ್ಟಿ, ಕಾದ ಎಣ್ಣೆಯಲ್ಲಿ ಕರಿದರೆ, ಕಾಯಿ ವಡೆ ರೆಡಿ.
ಇಲ್ಲಿ ನೀವು ಅಕ್ಕಿ ಹಿಟ್ಟಿನ ಬದಲು, ಅಕ್ಕಿಯನ್ನು 4 ಗಂಟೆ ನೆನೆಸಿ, ಅದನ್ನೇ ರುಬ್ಬಿ ಬಳಸಬಹುದು. ಇದು ಸಾಂಪ್ರದಾಯಿಕ ಕಾಯಿ ವಡೆ ಮಾಡುವ ವಿಧಾನ. ಆದರೆ ಮನೆಗೆ ಯಾರಾದ್ರೂ ಗೆಸ್ಟ್ ಬಂದಾಗ, ತಕ್ಷಣ ಕಾಯಿವಡೆ ರೆಡಿ ಮಾಡುವುದಿದ್ದರೆ, ಹೀಗೆ ಮಾಡಬಹುದು.
ನೀವು ಆಹಾರದ ವಿಷಯದಲ್ಲಿ ಇಂಥ ತಪ್ಪು ಮಾಡುವುದರಿಂದಲೇ ಸಂತಾನ ಸಮಸ್ಯೆಯಾಗುತ್ತದೆ..