Saturday, September 21, 2024

Latest Posts

ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ರೆಸಿಪಿ..

- Advertisement -

ನೀವು ಗೋಧಿ ಪಾಯಸ, ಗೋಧಿ ಹುಗ್ಗಿ ತಿಂದಿರುತ್ತೀರಿ. ಆದ್ರೆ ಮಂಗಳೂರು ಶೈಲಿಯ ಗೋಧಿ ಕಡಿ ಪಾಯಸ ಇನ್ನೂ ರುಚಿಯಾಗಿರತ್ತೆ. ಯಾಕಂದ್ರೆ ಇದಕ್ಕೊಂದು ಸ್ಪೆಶಲ್ ಪದಾರ್ಥ ಸೇರಿಸಲಾಗತ್ತೆ. ಹಾಗಾದ್ರೆ ಆ ಸಿಕ್ರೇಟ್‌ ಪದಾರ್ಥ ಯಾವುದು..? ಗೋಧಿಕಡಿ ಪಾಯಸ ತಯಾರಿಸೋದು ಹೇಗೆ ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ಈ 7 ಲಕ್ಷಣಗಳಿಂದಲೇ ನೀವು ಯಶಸ್ವಿಯಾಗುತ್ತೀರೋ, ಇಲ್ಲವೋ ಎಂದು ತಿಳಿಯಬಹುದು- ಭಾಗ 2

ಬೇಕಾಗುವ ಸಾಮಗ್ರಿ: 2 ಕಪ್ ಗೋಧಿ ಕಡಿ, 1 ಕಪ್ ಬೆಲ್ಲ, 1 ದೊಡ್ಡ ಕಪ್ ಕೊಬ್ಬರಿ ತುರಿ, ಪುಡಿ ಮಾಡಿದ ಎರಡು ಏಲಕ್ಕಿ, ನಾಲ್ಕು ಸ್ಪೂನ್ ತುಪ್ಪ, ಬೇಕಾದಷ್ಟು ದ್ರಾಕ್ಷಿ, ಗೋಡಂಬಿ, ನೆನೆಸಿಟ್ಟ ಬಾದಾಮ್.

ಬೆಂಡೇಕಾಯಿ ತಿನ್ನುವ ಮುನ್ನ ಈ ವಿಷಯಗಳನ್ನು ಖಂಡಿತ ನೆನಪಿನಲ್ಲಿಡಿ..

ಮಾಡುವ ವಿಧಾನ: ಮೊದಲು ಗೋಧಿ ಕಡಿಯನ್ನು ಚೆನ್ನಾಗಿ ತೊಳೆಯಿರಿ. ಕುಕ್ಕರ್‌ನಲ್ಲಿ 5ರಿಂದ 6 ವಿಶಲ್ ಬರುವವರೆಗೂ ಬೇಯಿಸಿ. ಈಗ ಕೊಬ್ಬರಿ ತುರಿಗೆ ನೀರು ಹಾಕಿ, ಚೆನ್ನಾಗಿ ರುಬ್ಬಿಕೊಳ್ಳಿ. ಒಂದು ಬಟ್ಟೆಗೆ ಹಾಕಿ, ಕಾಯಿ ಹಾಲು ತೆಗೆಯಿರಿ. ಬೆಂದ ಗೋಧಿ ಕಡಿಗೆ, ಈ ಕಾಯಿ ಹಾಲನ್ನು ಸೇರಿಸಿ, ಮಿಕ್ಸ್ ಮಾಡಿ. ನಾವು ಹೇಳಿದ ಸ್ಪೆಶಲ್ ಪದಾರ್ಥ ಇದೇ. ಕಾಯಿ ಹಾಲು ಸೇರಿಸಿದಷ್ಟು ರುಚಿ ಹೆಚ್ಚು. ಈಗ ಬೆಲ್ಲ ಹಾಕಿ, ಮಿಕ್ಸ್ ಮಾಡಿ ಚೆನ್ನಾಗಿ ಕುದಿಸಿ.

ಕೊನೆಗೆ ಏಲಕ್ಕಿ ಪುಡಿ ಹಾಕಿ, ಗ್ಯಾಸ್ ಆಫ್ ಮಾಡಿ. ಈಗ ಒಂಗು ಸೌಟಿನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ಗೋಡಂಬಿ, ದ್ರಾಕ್ಷಿ, ಬಾದಾಮಿ ಎಲ್ಲಾ ಹುರಿದುಕೊಂಡು, ಪಾಯಸಕ್ಕೆ ಮಿಕ್ಸ್ ಮಾಡಿದ್ರೆ, ಗೋಧಿ ಕಡಿ ಪಾಯಸ ರೆಡಿ.

- Advertisement -

Latest Posts

Don't Miss