Friday, December 5, 2025

Latest Posts

ಮ್ಯಾಂಗೋ ಮಸ್ತಾನಿ ರೆಸಿಪಿ

- Advertisement -

Recipe: ಮಳೆಗಾಲ ಬಂದ್ರೂ ಇನ್ನೂ ಮಾವಿನ ಹಣ್ಣಿನ ಸೀಸನ್ ಮುಗಿದಿಲ್ಲ. ಹಾಗಾಗಿ ಜನ ಈಗಲೂ ಮನೆಗೆ ಮಾವಿನ ಹಣ್ಣನ್ನು ಕೊಂಡೊಯ್ಯುತ್ತಿದ್ದಾರೆ. ಮಾವಿನ ಹಣ್ಣಿನಿಂದ ಬರೀ ಜ್ಯೂಸ್, ಮಿಲ್ಕ್ ಶೇಕ್ ಮಾಡುವ ಬದಲು, ನೀವು ಹೊಟೇಲ್ ರೀತಿ ಮ್ಯಾಂಗೋ ಮಸ್ತಾನಿಯನ್ನೂ ತಯಾರಿಸಬಹುದು. ಹಾಗಾದ್ರೆ ಮ್ಯಾಂಗೋ ಮಸ್ತಾನಿ ತಯಾರಿಸುವುದು ಹೇಗೆ ಅಂತಾ ತಿಳಿಯೋಣ ಬನ್ನಿ..

ಮೊದಲು ಎರಡು ಮಾವಿನ ಹಣ್ಣನ್ನು ತೆಗೆದುಕೊಂಡು ಒಂದು ಮಾವಿನ ಹಣ್ಣಿನ ಮಿಲ್ಕ್ ಶೇಕ್ ತಯಾರಿಸಿಕೊಳ್ಳಿ. ಮಾವಿನ ಹಣ್ಣು, ಒಂದು ಗ್ಲಾಸ್ ಹಾಲು, ಅವಶ್ಯಕತೆ ಇದ್ದಷ್ಟು ಸಕ್ಕರೆ, ಎರಡು ಸ್ಕೂಪ್ ವೆನಿಲ್ಲಾ ಐಸ್‌ಕ್ರೀಮ್ ಸೇರಿಸಿ, ಥಿಕ್ ಮ್ಯಾಂಗೋ ಮಿಲ್ಕ್ ಶೇಕ್ ತಯಾರಿಸಿ. ಇನ್ನೊಂದು ಮಾವಿನ ಹಣ್ಣನ್ನು ಸಣ್ಣ ಸಣ್ಣ ಹೋಳು ಮಾಡಿ.

ಈಗ ಒಂದು ಗ್ಲಾಸ್‌ಗೆ ಸ್ವಲ್ಪ ಮಾವಿನ ಹಣ್ಣಿನ ಹೋಳನ್ನು ಹಾಕಿ, ಇದಕ್ಕೆ ಮಾವಿನ ಹಣ್ಣಿನ ಮಿಲ್ಕ್ ಶೇಕ್ ಸೇರಿಸಿ. ಮೇಲಿನಿಂದ 2 ಸ್ಕೂಪ್ ವೆನಿಲ್ಲಾ ಐಸ್‌ಕ್ರೀಮ್ ಹಾಕಿ. ಇದರ ಮೇಲೆ ಮತ್ತೆ ಮಾವಿನ ಹಣ್ಣಿನ ಹೋಳು, ಸಣ್ಣಗೆ ತುಂಡರಿಸಿ ಬಾದಾಮ್, ಕಾಜು, ಪಿಸ್ತಾ ಹಾಕಿ, ಚೆರಿ ಹಣ್ಣಿನಿಂದ ಗಾರ್ನಿಶ್ ಮಾಡಿ, ಸರ್ವ್ ಮಾಡಿ.

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?

ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

- Advertisement -

Latest Posts

Don't Miss