Sunday, June 1, 2025

Latest Posts

ಮ್ಯಾಂಗೋ ಪರ್ಫೇಟ್ ರೆಸಿಪಿ..

- Advertisement -

Recipe: ನಾವು ನಿಮಗೆ ಈಗಾಗಲೇ, ಮ್ಯಾಂಗೋ ಫಾಲೂದಾ, ಮ್ಯಾಂಗೋ ಮಸ್ತಾನಿ ರೆಸಿಪಿಯನ್ನ ತಿಳಿಸಿದ್ದೇವೆ. ಇದೀಗ ಮ್ಯಾಂಗೋ ಪರ್ಫೇಟ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಹಾಗಾದ್ರೆ ಮ್ಯಾಂಗೋ ಪರ್ಫೇಟ್ ಮಾಡಲು ಏನೇನು ಸಾಮಗ್ರಿ ಬೇಕು..? ಇದನ್ನು ಹೇಗೆ ಮಾಡುವುದು ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: 2 ಮಾವಿನ ಹಣ್ಣು, ನಾಲ್ಕು ತುಂಡು ಕಿವಿ ಫ್ರೂಟ್ಸ್, 4 ಸ್ಟ್ರಾಬೇರಿ, ಅರ್ಧ ಕಪ್ ದಾಳಿಂಬೆ, ಇಷ್ಟವಾಗಿದ್ದಲ್ಲಿ, ಕಿತ್ತಳೆಯೂ ಬಳಸಬಹುದು. ಒಂದು ಕಪ್ ಹಾಲು, 3 ಸ್ಪೂನ್ ಕಾರ್ನ್‌ಫ್ಲೋರ್‌, ಕೊಂಚ ವೆನಿಲ್ಲಾ ಎಸ್ಸೆನ್ಸ್, ಅರ್ಧ ಕಪ್ ಮ್ಯಾಂಗೋ ಪಲ್ಪ, ಅರ್ಧ ಕಪ್ ಮಾವಿನ ಹಣ್ಣಿನ ಹೋಳು, ಒಂದು ಟೇಬಲ್ ಸ್ಪೂನ್ ಸಕ್ಕರೆ, 1 ಕಪ್ ಕ್ರೀಮ್,

ಮಾಡುವ ವಿಧಾನ: ಮೊದಲು ಪ್ಯಾನ್‌ಗೆ ಹಾಲು ಹಾಕಿ ಕಾಯಿಸಿ, ಬಳಿಕ ಇದಕ್ಕೆ ಕಾರ್ನ್ ಫ್ಲೋರ್, ವೆನಿಲ್ಲಾ ಎಸೆನ್ಸ್, ಮ್ಯಾಂಗೋ ಪಲ್ಪ್ ಹಾಕಿ, ಗಂಟು ಬಾರದ ಹಾಗೆ ಚೆನ್ನಾಗಿ ಮಿಕ್ಸ್ ಮಾಡಿ. ಇದನ್ನು ಕೈಯಾಡಿಸುತ್ತಿದ್ದರೆ, ಥಿಕ್ ಆಗುತ್ತದೆ. ಬಳಿಕ ಒಂದು ಟೇಬಲ್‌ ಸ್ಪೂನ್ ಸಕ್ಕರೆ ಹಾಕಿ, ಮಿಕ್ಸ್ ಮಾಡಿ. ಈಗ ಗ್ಯಾಸ್ ಆಫ್ ಮಾಡಿ, ಈ ಮಿಶ್ರಣವನ್ನು ಪಕ್ಕಕ್ಕಿರಿಸಿ.

ಈ ಮಾವಿನ ಮಿಶ್ರಣ ತಣಿದ ಬಳಿಕ, ಬೌಲ್ನಲ್ಲಿ ಕ್ರೀಮ್ ಹಾಕಿ, ಅದರೊಂದಿಗೆ ಈ ಮಿಶ್ರಣ ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಈಗ ಒಂದು ಗ್ಲಾಸ್‌ನಲ್ಲಿ ಈ ಮಿಶ್ರಣ ಹಾಕಿ, ಇದರ ಮೇಲೆ ಮಾವಿನ ಹೋಳು ಹಾಕಿ, ಬಳಿಕ ಮತ್ತೆ ಕ್ರೀಮ್ ಹಾಕಿ, ಕಿವಿಫ್ರೂಟ್ ಹಾಕಿ. ಹೀಗೆ ಕ್ರೀಮ್ ಮತ್ತು ನಿಮಗಿಷ್ಟವಾದ ಹಣ್ಣಿನ ಲೇಯರ್‌ ಮಾಡಿ. ಕೊನೆಗೆ ಕ್ರೀಮ್ ಮತ್ತು ಮಾವಿನ ಹಣ್ಣಿನ ಹೋಳುಗಳನ್ನು ಹಾಕಿ, ಪರ್ಫೇಟ್ ಸರ್ವ್ ಮಾಡಿ.

ಚಹಾ ಮಾಡುವಾಗ ಈ ಪದಾರ್ಥಗಳನ್ನು ಬಳಸಿದರೆ ಆರೋಗ್ಯಕ್ಕೆ ಒಳ್ಳೆಯದು..

ಇಡ್ಲಿ ಎಂಥ ಆರೋಗ್ಯಕರ ತಿಂಡಿ ಅಂತಾ ಗೊತ್ತಾ..?

ಈ ರೀತಿಯಾಗಿ ಮಗುವಿನ ಫೀಡಿಂಗ್ ಬಾಟಲಿಯನ್ನು ಸ್ವಚ್ಛಗೊಳಿಸಬೇಕು..

- Advertisement -

Latest Posts

Don't Miss