ಸಂಜೆ ತಿಂಡಿಗೆ ಬಜ್ಜಿ ಬೋಂಡಾ ಮಾಡಿ ತಿಂದು ನಿಮಗೆ ಬೋರ್ ಬಂದಿರಬಹುದು. ಆದ್ರೆ ನಾವಿಂದು ಈಸಿಯಾಗಿ ಮಸಾಲೆ ಪೂರಿ ಮಾಡೋದು ಹೇಗೆ..? ಅದಕ್ಕೆ ಬೇಕಾದ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: 5ರಿಂದ 6 ಬೆಳ್ಳುಳ್ಳಿ ಎಸಳು, ಅರ್ಧ ಸ್ಪೂನ್ ಜೀರಿಗೆ, ಎರಡು ಹಸಿ ಮೆಣಸಿನಕಾಯಿ, ಚಿಟಿಕೆ ಓಮದ ಕಾಳು, ಒಂದು ಚಮಚ ಕಸೂರಿ ಮೇಥಿ, 2 ಕಪ್ ಜೋಳದ ಹಿಟ್ಟು, ಕಾಲು ಕಪ್ ಕಡಲೆ ಹಿಟ್ಟು, ಚಿಟಿಕೆ ಅರಿಶಿನ, ಒಂದು ಸ್ಪೂನ್ ಮೆಣಸಿನಪುಡಿ, ಕೊಂಚ ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.
ಮಾಡುವ ವಿಧಾನ: ಮೊದಲು ಹಿಟ್ಟಿಗೆ ಸೇರಿಸುವ ಮಸಾಲೆ ತಯಾರಿಸಿಕೊಳ್ಳಿ. ಮಿಕ್ಸಿ ಜಾರ್‌ಗೆ ಬೆಳ್ಳುಳ್ಳಿ, ಹಸಿಮೆಣಸಿನಕಾಯಿ, ಜೀರಿಗೆ, ಓಮದ ಕಾಳು, ಕಸೂರಿ ಮೇಥಿ, ಹಾಕಿ ಗ್ರೈಂಡ್ ಮಾಡಿಕೊಂಡ್ರೆ ಮಸಾಲೆ ರೆಡಿ. ಈಗ ಜೋಳದ ಹಿಟ್ಟು, ಕಡಲೆ ಹಿಟ್ಟಿಗೆ ಅರಿಶಿನ, ಮೆಣಸಿನ ಪುಡಿ, ಕೊತ್ತಂಬರಿ ಸೊಪ್ಪು, ಉಪ್ಪು ಹಾಕಿ ಪೂರಿ ಹಿಟ್ಟನ್ನು ತಯಾರಿಸಿಕೊಳ್ಳಿ. ಈಗ ಇದನ್ನು ಪೂರಿ ಆಕಾರಕ್ಕೆ ಲಟ್ಟಿಸಿ, ಕಾದ ಎಣ್ಣೆಯಲ್ಲಿ ಪೂರಿ ಕರಿಯಿರಿ.
ತ್ವಚೆಗೆ ಹಸಿ ಹಾಲಿನಿಂದ ಎಷ್ಟೆಲ್ಲಾ ಲಾಭ..? ಗೊತ್ತಾದರೆ ಬೆಚ್ಚಿ ಬೀಳಲೇ ಬೇಕು..
ನಿಮಗೆ ಇತರರಗಿಂತ ಹೆಚ್ಚು ಚಳಿಹಾಗುತ್ತಿದೆಯೇ ಹಾಗಾದರೆ ಈ ಲೋಪಗಳು ಇದೆ ಎಂದು ಪರಿಶೀಲಿಸಿ..!