ಪ್ರತಿದಿನ ಚಪಾತಿ, ರೊಟ್ಟಿ, ದೋಸೆ ತಿಂದು ತಿಂದು ನಿಮಗೆ ಬೋರ್ ಬಂದಿರಬಹುದು. ಹಾಗಾಗಿ ನಾವಿಂದು ಬಟಾಣಿ ಪರೋಠಾ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ. ಅದನ್ನ ಮಾಡೋದು ಹೇಗೆ, ಅದಕ್ಕೆ ಬೇಕಾಗಿರುವ ಸಾಮಗ್ರಿಗಳೇನು ಅಂತಾ ತಿಳಿಯೋಣ ಬನ್ನಿ..
ಬೇಕಾಗುವ ಸಾಮಗ್ರಿ: ಒಂದು ಕಪ್ ಗೋಧಿ ಹಿಟ್ಟು, ಎರಡು ಸ್ಪೂನ್ ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಬಿಸಿ ನೀರು. ಕಣಕ ತಯಾರಿಸಲು, ಅರ್ಧ ಕಪ್ ಹಸಿ ಬಟಾಣಿ, 2 ಹಸಿ ಮೆಣಸಿನಕಾಯಿ, ಚಿಕ್ಕ ತುಂಡು ಹಸಿ ಶುಂಠಿ, ಅರ್ಧ ಸ್ಪೂನ್ ಜೀರಿಗೆ, 3 ಸ್ಪೂನ್ ಎಣ್ಣೆ, ಅರ್ಧ ಸ್ಪೂನ್ ಖಾರದ ಪುಡಿ, ಗರಂ ಮಸಾಲೆ ಪುಡಿ, ಅರ್ಧ ಸ್ಪೂನ್ ಜೀರಿಗೆ ಪುಡಿ, ಕೊಂಚ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಮೊದಲು ಗೋಧಿ ಹಿಟ್ಟಿಗೆ ಉಪ್ಪು, ಎಣ್ಣೆ ಮತ್ತು ಬಿಸಿ ನೀರು ಹಾಕಿ, ಕಲಿಸಿ, ಸಾಫ್ಟ್ ಹಿಟ್ಟನ್ನ ತಯಾರಿಸಿ. ಬಿಸಿ ನೀರು ಬಳಸಿದ್ರೆ, ಹಿಟ್ಟು ಸಾಫ್ಟ್ ಆಗತ್ತೆ. ಚಪಾತಿಯೂ ರುಚಿಯಾಗಿರತ್ತೆ.
ಈಗ ಮಿಕ್ಸಿ ಜಾರ್‌ಗೆ ಹಸಿ ಬಟಾಣಿ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ನಂತರ ಒಂದು ಪ್ಯಾನ್ ಬಿಸಿ ಮಾಡೋಕ್ಕೆ ಇಟ್ಟು, ಅದಕ್ಕೆ ಕೊಂಚ ಎಣ್ಣೆ ಹಾಕಿ ಬಿಸಿ ಮಾಡಿ, ಜೀರಿಗೆ, ಖಾರದ ಪುಡಿ, ಗರಂ ಮಸಾಲೆ ಪುಡಿ, ಉಪ್ಪು, ಜೀರಿಗೆ ಪುಡಿ, ಬಟಾಣಿ ಪೇಸ್ಟ್ ಹಾಕಿ ಮಿಕ್ಸ್ ಮಾಡಿ. 2 ನಿಮಿಷ ಬೇಯಿಸಿ. ಈಗ ಈ ಮಿಶ್ರಣ ತಣ್ಣಗಾದ ಬಳಿಕ ಹೂರಣದಂತೆ ಬಳಸಿ, ಚಪಾತಿ ಹಿಟ್ಟಿನಲ್ಲಿಟ್ಟು, ಪರೋಠಾ ತಯಾರಿಸಿ.
ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?