Saturday, July 27, 2024

Latest Posts

ಮಂಡಕ್ಕಿ ಮತ್ತು ಆಲೂವನ್ನ ಮಿಕ್ಸ್ ಮಾಡಿದ್ರೆ, ಈ ರುಚಿಕರ ಸ್ನ್ಯಾಕ್ಸ್ ರೆಡಿಯಾಗತ್ತೆ..

- Advertisement -

ಚುರುಮುರಿ ಅಂದ್ರೆ ಬೇಲ್ಪುರಿ ಮಾಡಬಹುದು, ಮಂಡಕ್ಕಿ ಉಂಡೆ, ಮಂಡಕ್ಕಿ ಉಪ್ಕರಿ ಮಾಡಬಹುದು ಅಂತಷ್ಟೇ ಎಲ್ಲರಿಗೂ ಗೊತ್ತು. ಆದ್ರೆ ನಾವಿಂದು ಚುರುಮುರಿ ಮತ್ತು ಆಲೂವನ್ನ ಮಿಕ್ಸ್ ಮಾಡಿ, ಹೊಸ ಸ್ನ್ಯಾಕ್ಸ್ ಮಾಡೋದು ಹೇಗೆ ಅಂತಾ ಹೇಳಲಿದ್ದೇವೆ..

ಬೇಕಾಗುವ ಸಾಮಗ್ರಿ: ಒಂದು ಕಪ್ ಚುರುಮುರಿ, 2 ಬೇಯಿಸಿ ಸಿಪ್ಪೆ ತೆಗೆದ ಆಲೂಗಡ್ಡೆ, ಅರ್ಧ ಸ್ಪೂನ್ ಚಿಲ್ಲಿ ಫ್ಲೇಕ್ಸ್, ಅರ್ಧ ಸ್ಪೂನ್ ಜೀರಿಗೆ, ಅರ್ಧ ಸ್ಪೂನ್ ಜಿಂಜರ್ ಪೇಸ್ಟ್, 1 ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ, 3 ಟೇಬಲ್ ಸ್ಪೂನ್ ಕಡಲೆ ಹಿಟ್ಟು, ಕಾಲು ಸ್ಪೂನ್ ಬೇಕಿಂಗ್ ಸೋಡಾ, 2 ಈರುಳ್ಳಿ, ಕೊಂಚ ಕೊತ್ತೊಂಬರಿ ಸೊಪ್ಪು, ರುಚಿಗೆ ತಕ್ಕಷ್ಟು ಉಪ್ಪು, ಕರಿಯಲು ಎಣ್ಣೆ.

ಮಾಡುವ ವಿಧಾನ: ಮೊದಲು ಚುರುಮುರಿಯನ್ನು ತೊಳೆದು ಸ್ವಚ್ಛಗೊಳಿಸಿ. ನಂತರ ಚುರುಮುರಿಯನ್ನು ಹಿಂಡಿ, ಒಂದು ಬೌಲ್‌ಗೆ ಹಾಕಿ. ಇದಕ್ಕೆ ಬೇಯಿಸಿದ ಆಲೂಗಡ್ಡೆ ಸೇರಿಸಿ, ಚೆನ್ನಾಗಿ ಮ್ಯಾಶ್ ಮಾಡಿ. ಚಿಲ್ಲಿ ಫ್ಲೇಕ್ಸ್, ಜೀರಿಗೆ, ಜಿಂಜರ್ ಪೇಸ್ಟ್, ಹಸಿಮೆಣಸಿನಕಾಯಿ, ಕಡಲೆ ಹಿಟ್ಟು, ಬೇಕಿಂಗ್‌ ಸೋಡಾ, ಈರುಳ್ಳಿ, ಕೊತ್ತೊಂಬರಿ ಸೊಪ್ಪು, ಉಪ್ಪು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿ. ಚಪಾತಿ ಹಿಟ್ಟಿನ ಹದಕ್ಕಿರಲಿ.

ಈಗ ಎಣ್ಣೆ ಕಾಯಲು ಇಡಿ. ರೆಡಿ ಮಾಡಿಟ್ಟುಕೊಂಡ ಮಿಶ್ರಣದಿಂದ ಬಾಲ್ ರೆಡಿ ಮಾಡಿಕೊಳ್ಳಿ. ಕಾದ ಎಣ್ಣೆಯಲ್ಲಿ ಇದನ್ನು ಕರಿದರೆ, ಸ್ಪೆಶಲ್ ತಿಂಡಿ ರೆಡಿ.. ಇದರ ಜೊತೆ, ಸಾಸ್ , ಅಥವಾ ಚಟ್ನಿ ಸೂಪರ್ ಕಾಂಬಿನೇಷನ್.

ಬೆಳಗ್ಗಿನ ಜಾವಕ್ಕೆ ಶಕ್ತಿಯುತವಾದ ಪ್ರೋಟೀನ್ ಬ್ರೇಕ್ಫಾಸ್ಟ್..

ಹಸಿ ಹಾಲು(ಕಾಯಿಸದ ಹಾಲು) ಕುಡಿಯುವುದರಿಂದ ಆರೋಗ್ಯಕ್ಕೆ ಲಾಭವೋ..? ನಷ್ಟವೋ..?

ಎಣ್ಣೆಯಿಂದ ಬಾಯಿ ಮುಕ್ಕಳಿಸುವುದರಿಂದ (oil pulling) ಏನು ಲಾಭ..?

- Advertisement -

Latest Posts

Don't Miss