Saturday, October 19, 2024

Latest Posts

ಪುರುಷರು ಎಂದಿಗೂ ಈ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದಂತೆ..

- Advertisement -

ಚಾಣಕ್ಯರು ಹಲವು ಜೀವನ ನೀತಿಯನ್ನು ಹೇಳಿದ್ದಾರೆ. ಆ ನೀತಿಯನ್ನು ನಾವು ಜೀವನದಲ್ಲಿ ಅಳವಡಿಸಿಕೊಂಡರೆ, ಖಂಡಿತ ನಮ್ಮ ಜೀವನ ಅತ್ಯುತ್ತಮವಾಗಿರುತ್ತದೆ. ಇಂದು ನಾವು ಪುರುಷರು ಯಾವ 3 ಗುಣವುಳ್ಳ ಹೆಣ್ಣಿನ ಸಹವಾಸ ಮಾಡಬಾರದೆಂದು ಹೇಳಿದ್ದಾರೆ ಅನ್ನೋ ಬಗ್ಗೆ ತಿಳಿಸಲಿದ್ದೇವೆ..

ಮೊದಲನೇಯ ಗುಣ ಸ್ವಾರ್ಥ ಸ್ವಭಾವ. ಸ್ವಾರ್ಥ ಸ್ವಭಾವವಿರುವ ಹೆಣ್ಣು ಮಕ್ಕಳನ್ನ ಮಾತಿನಲ್ಲೇ ಗುರುತಿಸಬಹುದು. ನೀವು ಯಾವ ಹೆಣ್ಣನ್ನ ವಿವಾಹವಾಗಬೇಕೆಂದಿದ್ದೀರೋ, ಅವರ ಮಾತನ್ನ ಸರಿಯಾಗಿ ಗಮನಿಸಿ. ಆಕೆಯ ಮಾತಿನಲ್ಲಿ ಎಲ್ಲ ವಿಷಯದಲ್ಲೂ ಬರೀ ಸ್ವಾರ್ಥ ಕಂಡರೆ, ಆಕೆಗೆ ದಾನ ಮಾಡುವ ಸ್ವಭಾವ, ಸಹಾಯದ ಸ್ವಭಾವ ಕಿಂಚಿತ್ತೂ ಇಲ್ಲವೆಂದಲ್ಲಿ, ಅಂಥವಳನ್ನ ಎಂದಿಗೂ ವಿವಾಹವಾಗಬೇಡಿ. ಇದರಿಂದ ನೀವು ಜೀವನ ಪೂರ್ತಿ ಕಷ್ಟ ಅನುಭವಿಸಬೇಕಾಗುತ್ತದೆ. ಯಾಕಂದ್ರೆ ಇಂಥ ಹೆಣ್ಣು ಮಕ್ಕಳು ಕುಟುಂಬಕ್ಕೊಂದು ಶಾಪವಿದ್ದ ಹಾಗೆ.

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 1

ಎರಡನೇಯ ಗುಣ ಸಿಹಿ ಮಾತಿಲ್ಲದ ಹೆಣ್ಣು. ಹೆಣ್ಣು ಮಾತನಾಡಿದರೆ, ಆಕೆಯ ಮಾತಿನಲ್ಲಿ ನಮೃತೆ ಇರಬೇಕು. ಆಕೆಯ ಮಾತು ಇನ್ನೊಬ್ಬರ ಮನಸ್ಸಿಗೆ ಖುಷಿ ಕೊಡುವ ಹಾಗಿರಬೇಕೇ ಹೊರತು, ಆಕೆಯ ಮಾತಿನಿಂದ ಇನ್ನೊಬ್ಬರ ಮನಸ್ಸು ನೋಯಿಸುವ ಹಾಗಿರಬಾರದು. ಕೆಲ ಹೆಣ್ಣು ಮಕ್ಕಳಿಗೆ ಇಂಥ ಗುಣವಿದ್ದರೂ, ಅವರು ಅದನ್ನು ಸುಧಾರಿಸಿಕೊಂಡು ಹಿತವಾಗಿ ಮಾತನಾಡಲು ಕಲಿಯುತ್ತಾರೆ. ಆದ್ರೆ ನೀವು ವರಿಸುವ ಹೆಣ್ಣಿನ ಮಾತಿನಲ್ಲಿ ಸಹನೆ, ಪ್ರೀತಿ, ಕಾಳಜಿ ಇಲ್ಲದಿದ್ದಲ್ಲಿ, ಅದು ನಾಟಕೀಯವಾಗಿದ್ದಲ್ಲಿ, ಅಂಥವಳನ್ನು ನೀವು ವರಿಸದಿರುವುದೇ ಉತ್ತಮ.

ಮೂರನೇಯ ಗುಣ ನೀಚ ಸ್ವಭಾವದ ಹೆಣ್ಣು. ಕೆಲ ಹೆಣ್ಣು ಮಕ್ಕಳು ಗಂಡಿನ ಮನೆ ನೋಡಿ, ಅಥವಾ ಆಸ್ತಿ ನೋಡಿ ವಿವಾಹವಾಗುತ್ತಾರೆ. ಅಥವಾ ಹುಡುಗ ತಾನು ಹೇಳಿದ್ದಕ್ಕೆಲ್ಲ ತಲೆಯಲ್ಲಾಡಿಸುತ್ತಾನೆ ಅನ್ನೋ ಕಾರಣಕ್ಕೆ ಮದುವೆಯಾಗುತ್ತಾರೆ. ಅಂಥವರು ಹೇಗೆ ಬೇಕಾದರೂ ಬದಲಾಗಬಹುದು. ನಿಮ್ಮ ಬಳಿ ಹಣ ಕಡಿಮೆಯಾಗುತ್ತಿದ್ದಂತೆ, ನೀವು ಆಕೆಯ ಮಾತು ಕೇಳುವುದನ್ನು ನಿಲ್ಲಿಸಿದರೆ, ಆಕೆ ಇನ್ನೊಬ್ಬನ ಸಂಗ ಮಾಡಲೂಬಹುದು. ಅಥವಾ ನಿಮ್ಮನ್ನು ನಾಶ ಮಾಡಲೂಬಹುದು. ಹಾಗಾಗಿ ನೀವು ಮದುವೆಯಾಗುವ ಹುಡುಗಿಗೆ ಇಂಥ ಮನಸ್ಥಿತಿ ಇದೆಯಾ ಇಲ್ಲವಾ ಅನ್ನೋದನ್ನ ಪರೀಕ್ಷಿಸಿಯೇ ವಿವಾಹವಾಗಿ.

ಈ 6 ರೀತಿಯ ಜನರ ಮನೆಯಲ್ಲಿ ಎಂದಿಗೂ ಊಟ ಮಾಡಬೇಡಿ..- ಭಾಗ 2

ಹಾಗಾದ್ರೆ ಎಂಥ ಹೆಣ್ಣಿನ ಜೊತೆ ಸಂಬಂಧ ಬೆಳೆಸಬೇಕು ಅಂತಾ ಹೇಳಿದ್ರೆ, ಸ್ವಾರ್ಥವಿಲ್ಲದ, ನಿಮ್ಮನ್ನಷ್ಟೇ ಪ್ರೀತಿ ಮಾಡುವ, ನೀಚ ಗುಣವಿಲ್ಲದ, ನಿಮ್ಮ ಕುಟುಂಬಸ್ಥರಿಗೆ ಗೌರವಿಸುವ, ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬಲ್ಲ ಹೆಣ್ಣನ್ನ ವಿವಾಹವಾಗಬೇಕು ಅಂತಾರೆ ಚಾಣಕ್ಯರು.

- Advertisement -

Latest Posts

Don't Miss