ಪುದೀನಾ- ನಿಂಬು ಶರ್ಬತ್ ರೆಸಿಪಿ..

Recipe: ರುಚಿಯಾದ ಪೇಯವನ್ನು ಕುಡಿಯಬೇಕು ಎನ್ನಿಸುವ ಕಾರಣಕ್ಕಾಗಿ, ಜನ ಮಾರುಕಟ್ಟೆಯಲ್ಲಿ ಸಿಗುವ ಕೂಲ್ ಡ್ರಿಂಕ್ಸ್ ತಂದು ಫ್ರಿಜ್‌ನಲ್ಲಿರಿಸಿಕೊಳ್ಳುತ್ತಾರೆ. ಆದರೆ ಇದರಲ್ಲಿ ಎಷ್ಟು ರುಚಿ ಇದೆಯೋ, ಅಷ್ಟೇ ಕೆಟ್ಟ ಕೆಮಿಕಲ್ಸ್‌ ಇದೆ. ಇವುಗಳ ಸೇವನೆಯಿಂದ ಕಿಡ್ನಿ ಫೇಲ್ ಆಗುವ ಸಾಧ್ಯತೆ ಇರುತ್ತದೆ. ಹಾಗಾಗಿ ನಾವಿಂದು ಮನೆಯಲ್ಲೇ ಪುದೀನಾ- ನಿಂಬು ಶರ್ಬತ್ ಹೇಗೆ ಮಾಡೋದು ಅಂತಾ ಹೇಳಲಿದ್ದೇವೆ.

ಮೊದಲು 1 ಕಪ್ ಪುದೀನಾವನ್ನು ಮಿಕ್ಸಿ ಜಾರ್‌ಗೆ ಹಾಕಿ, ಇದಕ್ಕೆ 2 ಟೇಬಲ್ ಸ್ಪೂನ್ ಸೋಂಪು ಸೇರಿಸಿ, ನೀರು ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಮತ್ತೆ ಮಿಕ್ಸಿ ಜಾರ್‌ಗೆ 1 ಕಪ್ ಕಲ್ಲುಸಕ್ಕರೆ ಹಾಕಿ, ಪುಡಿ ತಯಾರಿಸಿಕೊಳ್ಳಿ. ಪ್ಯಾನ್ ಬಿಸಿ ಮಾಡಿ. ಅದಕ್ಕೆ ಪುಡಿ ಮಾಡಿದ ಕಲ್ಲು ಸಕ್ಕರೆ ಮತ್ತು ನೀರು ಹಾಕಿ ಲೈಟ್ ಆಗಿ ಪಾಕ ತಯಾರಿಸಿಕೊಳ್ಳಿ.

ಈಗ ಇದನ್ನು ಪುದೀನಾ ಪೇಸ್ಟ್ ಗಾಳಿಸಿ ಹಾಕಿ. ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ ಇದು ಕುದಿ ಬರಬೇಕು. ಆದರೆ ಚೆನ್ನಾಗಿ ಕುದಿ ಬರುವ ಅಗತ್ಯವಿಲ್ಲ. ಸ್ವಲ್ಪ ಕುದಿ ಬಂದಾಗಲೇ, ಗ್ಯಾಸ್ ಆಫ್ ಮಾಡಿ. ಈಗ ಇದಕ್ಕೆ 1 ಸ್ಪೂನ್ ಜೀರಿಗೆ ಪುಡಿ, 1 ಸ್ಪೂನ್ ಕಾಳುಮೆಣಸಿನ ಪುಡಿ, ಕಪ್ಪು ಉಪ್ಪು, ಚಾಟ್ ಮಸಾಲೆ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ.

ಇದು ತಣ್ಣಗಾದ ಬಳಿಕ, ಸ್ವಲ್ಪ ಗಟ್ಟಿಯಾಗುತ್ತದೆ. ಆಗ ಇದಕ್ಕೆ ಒಂದು ನಿಂಬೆಹಣ್ಣಿನ ರಸ ಸೇರಿಸಿ. ಈಗ ಪುದೀನಾ ಸಿರಪ್ ರೆಡಿ. ಇದನ್ನು ನೀವು 1 ವಾರ ಫ್ರಿಜ್‌ನಲ್ಲಿರಿಸಿ, ಶರ್ಬತ್ ಮಾಡಿ ಸೇವಿಸಬಹುದು. ನಿಮಗೆ ಶರ್ಬತ್ ಕುಡಿಯಬೇಕು ಎನ್ನಿಸಿದಾಗ, ಒಂದು ಗ್ಲಾಸ್ ತೆಗೆದುಕೊಂಡು ಅದರಲ್ಲಿ ಕಾಲು ಭಾಗ ಈ ಪುದೀನಾ ಸಿರಪ್, ಕೊಂಚ ನೆನೆಸಿಟ್ಟ ಚೀಯಾ ಸೀಡ್ಸ್, ಮತ್ತು ತಣ್ಣಗಿನ ನೀರನ್ನು ಮಿಕ್ಸ್ ಮಾಡಿ, ಶರ್ಬತ್ ಮಾಡಿ ಕುಡಿಯಬಹುದು.

ಎದೆಹಾಲು ಉಣಿಸುವುದರಿಂದ ಕ್ಯಾನ್ಸರ್ ಬರುವುದನ್ನು ತಡೆಗಟ್ಟಬಹುದಾ..?

ನಾಯಿ ಕಡಿತ ಇದ್ದಲ್ಲಿ, ಅದನ್ನೆಂದಿಗೂ ನಿರ್ಲಕ್ಷಿಸಬೇಡಿ..

ಹುಚ್ಚು ನಾಯಿ ಕಚ್ಚಿದ್ರೆ ಏನು ಮಾಡಬೇಕು..?

About The Author