Sunday, September 15, 2024

Latest Posts

ಸ್ಪೀಕರ್ ವಿಚಾರಣೆಗೆ ಕೈ ಕೊಟ್ಟ ಶಾಸಕ ರಾಮಲಿಂಗಾ ರೆಡ್ಡಿ, ಗೋಪಾಲಯ್ಯ..!

- Advertisement -

ಬೆಂಗಳೂರು: ರಾಜೀನಾಮೆ ಅಂಗೀಕಾರ ಕುರಿತಾಗಿ ಇಂದು ಸ್ಪೀಕರ್ ನಡೆಸಲಿದ್ದ ವಿಚಾರಣೆಗೆ ಅತೃಪ್ತ ಶಾಸಕರಾದ ರಾಮಲಿಂಗಾ ರೆಡ್ಡಿ ಮತ್ತು ಗೋಪಾಲಯ್ಯ ಗೈರಾಗಿದ್ದಾರೆ.

ರಾಜೀನಾಮೆ ಕುರಿತಾಗಿ ಇಂದು ಸ್ಪೀಕರ್ ಎದುರು ಹಾಜರಾಗಬೇಕಿದ್ದ ಬೆಂಗಳೂರಿನ ಶಾಸಕರಾದ ರಾಮಲಿಂಗಾ ರೆಡ್ಡಿ ಮತ್ತು ಕೆ.ಗೋಪಾಲಯ್ಯ ಗೈರಾಗಿದ್ದಾರೆ. ತಾವು ಸ್ಪೀಕರ್ ವಿಚಾರಣೆಗೆ ಇಂದು ಬರಲು ಸಾಧ್ಯವಿಲ್ಲ ಅಂತ ಸಚಿವಾಲಯಕ್ಕೆ ಕರೆ ಮಾಡಿ ಈ ತಿಳಿಸಿರುವ ಈ ಇಬ್ಬರು ಶಾಸಕರು, ವಿಚಾರಣೆಗಾಗಿ ಮತ್ತೊಂದು ದಿನಾಂಕ ನಿಗದಿ ಮಾಡಲು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಶಾಸಕರು ಸ್ವಇಚ್ಛೆಯಿಂದ ರಾಜೀನಾಮೆ ನೀಡಿದ್ದಾರೋ ಅಥವಾ ಒತ್ತಾಯಕ್ಕೆ ಮಣಿದು ರಾಜೀನಾಮೆ ನೀಡಿದ್ದಾರೋ ಎನ್ನುವ ನಿಟ್ಟಿನಲ್ಲಿ ಇಂದು ಸ್ಪೀಕರ್ ರಮೇಶ್ ಕುಮಾರ್ , ರಾಮಲಿಂಗಾ ರೆಡ್ಡಿ ಮತ್ತು ಗೋಪಾಲಯ್ಯರಿಗೆ ಇಂದು ಖುದ್ದು ಹಾಜರಾಗಲು ದಿನಾಂಕ ನಿಗದಿಪಡಿಸಿದ್ದರು. ಸ್ಪೀಕರ್ ಶೀಘ್ರವೇ ನಮ್ಮ ರಾಜೀನಾಮೆ ಅಂಗೀಕಾರ ಮಾಡಬೇಕು ಅಂತಿದ್ದ ಈ ಶಾಸಕರು ಇದೀಗ ಗೈರುಹಾಜರಾಗಿರೋದು ಮತ್ತೆ ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಇಂದು ನಾಲ್ಕು ಗಂಟೆಗೆ ಸಮಯ ನಿಗದಿ ಮಾಡಿದ್ದ ಸ್ಪೀಕರ್ ಈ ಇಬ್ಬರು ಶಾಸಕರಿಗೆ ಕಾದು ಕೊನೆಗೆ ತಮ್ಮ ಕಚೇರಿಯಿಂದ ಹೊರಟಿದ್ದಾರೆ ಎನ್ನಲಾಗಿದೆ.

ವಿಶ್ವಾಸ v/s ಅವಿಶ್ವಾಸ. ಗೆಲ್ಲೋದ್ಯಾರು…? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=T5nDY4TEg8s
- Advertisement -

Latest Posts

Don't Miss