- Advertisement -
ಬೇಕಾಗುವ ಸಾಮಗ್ರಿ: ಎರಡು ಸ್ಪೂನ್ ಎಣ್ಣೆ ಅಥವಾ ತುಪ್ಪ, ಸಣ್ಣಗೆ ಹೆಚ್ಚಿದ ನಾಲ್ಕೈದು ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು, 2 ಈರುಳ್ಳಿ, ಕ್ಯಾರೆಟ್, ಬಟಾಣಿ, ಸ್ವೀಟ್ ಕಾರ್ನ್, ಉಪ್ಪು, ಪೆಪ್ಪರ್ ಪುಡಿ, ಕಾರ್ನ್‌ಫ್ಲೋರ್ ಪುಡಿ.
ಮಾಡುವ ವಿಧಾನ: ಮೊದಲು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಬೆಳ್ಳುಳ್ಳಿ, ಶುಂಠಿ, ಹಸಿಮೆಣಸು ಹಾಕಿ ಹುರಿಯಿರಿ. ಬಳಿಕ ಈರುಳ್ಳಿ, ಕ್ಯಾರೆಟ್, ಬಟಾಣಿ, ಸ್ವೀಟ್ ಕಾರ್ನ್, ಇವಿಷ್ಟನ್ನು ಒಂದೊಂದರಂತೆ ಹಾಕಿ ಹುರಿದುಕೊಳ್ಳಿ.
ಬಳಿಕ ಕಾರ್ನ್ಫ್ಲೋರ್‌ನ್ನು ನೀರಿನಲ್ಲಿ ಮಿಕ್ಸ್ ಮಾಡಿ, ಅದನ್ನು ಈ ಹುರಿದ ಮಿಶ್ರಣಕ್ಕೆ ಸೇರಿಸಿ, ಮಿಕ್ಸ್ ಮಾಡಿ, ಬಳಿಕ, ಪೆಪ್ಪರ್ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿ. ಈಗ ಬಿಸಿ ಬಿಸಿ ವೆಜ್ ಸೂಪ್ ರೆಡಿ. ಇದಕ್ಕೆ ಕಾರ್ನ್ ಫ್ಲೋರ್ ಹಾಕಿರುವ ಕಾರಣ, ಇದನ್ನು ಬಿಸಿ ಬಿಸಿಯಾಗಿಯೇ ಸರ್ವ್ ಮಾಡಬೇಕು.
Summer Special: ಬೇಸಿಗೆಯಲ್ಲಿ ಉತ್ತಮ ಆರೋಗ್ಯಕ್ಕಾಗಿ ಥಾಯ್ ಪಪಾಯಾ ಸ್ಯಾಲೆಡ್
- Advertisement -