Friday, October 18, 2024

Latest Posts

ಹೆಸರು ಬೇಳೆಯ ದೋಸೆ ರೆಸಿಪಿ

- Advertisement -

ಯಾವಾಗಲೂ ಉಪ್ಪಿಟ್ಟು, ಅವಲಕ್ಕಿ, ಇಡ್ಲಿ, ದೋಸೆ ತಿಂದು ನಿಮಗೆ ಬೋರ್ ಬಂದಿರಬಹುದು. ಅದರಲ್ಲೂ ಅಕ್ಕಿ ದೋಸೆ, ಮೆಂತ್ಯೆ ದೋಸೆ ತಿನ್ನಲು ಆಗಲ್ಲ. ಹಾಗಾಗಿ ನಾವಿಂದು ಹೆಸರು ಬೇಳೆಯಿಂದ ಮಾಡಬಹುದಾದ ಸಿಂಪಲ್ ದೋಸೆ ರೆಸಿಪಿಯನ್ನ ಹೇಳಲಿದ್ದೇವೆ. ಹಾಗಾದ್ರೆ ಈ ದೋಸೆ ಮಾಡೋಕ್ಕೆ ಏನೇನು ಸಾಮಗ್ರಿ ಬೇಕು..? ಇದನ್ನ ಮಾಡೋದು ಹೇಗೆ ಅಂತಾ ತಿಳಿಯೋಣ ಬನ್ನಿ..

ಬೇಕಾಗುವ ಸಾಮಗ್ರಿ: ಅರ್ಧ ಕಪ್ ಹೆಸರು ಬೇಳೆ, 10 ಎಸಳು ಬೆಳ್ಳುಳ್ಳಿ, ಚಿಕ್ಕ ತುಂಡು ಶುಂಠಿ, ಮತ್ತು ಎರಡು ಹಸಿ ಮೆಣಸು, ¼ ಕಪ್ ಕಡಲೆ ಹಿಟ್ಟು, ¼ ಕಪ್ ರವಾ, ¼ ಕಪ್ ಕಾರ್ನ್ ಪುಡಿ, ಒಂದು ಟೊಮೆಟೋ, ಎರಡು ಬೇಯಿಸಿದ ಬಟಾಟೆ, ಒಂದು ಈರುಳ್ಳಿ, ಒಂದು ಕ್ಯಾರೆಟ್ ತುರಿ, ಒಂದು ಕ್ಯಾಪ್ಸಿಕಂ, ಕೊಂಚ ಗೋಡಂಬಿ, ದ್ರಾಕ್ಷಿ, ಅರ್ಧ ಸ್ಪೂನ್ ಜೀರಿಗೆ, ಒಂದು ಚಮಚ ಖಾರದ ಪುಡಿ, ಒಂದು ಚಮಚ ಕೊತ್ತೊಂಬರಿ ಕಾಳಿನ ಪುಡಿ, ಚಿಟಿಕೆ ಅರಿಶಿನ, ಅರ್ಧ ಚಮಚ ಜೀರಿಗೆ ಪುಡಿ, ಚಿಟಿಕೆ ಕಸೂರಿ ಮೇಥಿ, ಅರ್ಧ ಚಮಚ ಕಾಳುಮೆಣಸಿನಪುಡಿ, ಕೊಂಚ ವೋಮ, ಚಿಟಿಕೆ ಹಿಂಗು, ಅಗತ್ಯಕ್ಕೆ ತಕ್ಕಷ್ಟು ಎಣ್ಣೆ ಮತ್ತು ಉಪ್ಪು.

ಮಾಡುವ ವಿಧಾನ: ಮೊದಲು ಅರ್ಧ ಕಪ್ ಹೆಸರು ಬೇಳೆಯನ್ನು ಒಂದು ಗಂಟೆ ನೆನೆಸಿಡಿ. ನಂತರ ಬೆಳ್ಳುಳ್ಳಿ, ಹಸಿಮೆಣಸು, ಶುಂಠಿ ಪೇಸ್ಟ್ ಮಾಡಿ ಇಟ್ಟುಕೊಳ್ಳಿ. ನೆನೆಸಿಟ್ಟ ಹೆಸರು ಬೇಳೆಯನ್ನು ಪೇಸ್ಟ್ ಮಾಡಿಕೊಳ್ಳಿ. ನಂತರ ಅದಕ್ಕೆ ಕಡಲೆ ಹಿಟ್ಟು ಮತ್ತು ರವಾ ಹಾಕಿ ಮಿಕ್ಸ್ ಮಾಡಿ, 15 ನಿಮಿಷ ಪಕ್ಕಕ್ಕಿರಿಸಿ.

ಈಗ ಒಂದು ಪ್ಯಾನ್‌ ಬಿಸಿ ಮಾಡಿ, ಅದಕ್ಕೆ ಎರಡು ಸ್ಪೂನ್ ಎಣ್ಣೆ ಹಾಕಿ, ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಹಸಿಮೆಣಸಿನ ಪೇಸ್ಟ್, ಈರುಳ್ಳಿ, ಟೊಮೆಟೋ, ಕ್ಯಾರೆಟ್, ಕ್ಯಾಪ್ಸಿಕಂ, ಇವೆಲ್ಲವನ್ನೂ ಹಾಕಿ ಹುರಿಯಿರಿ. ಬಳಿಕ ಜೀರಿಗೆ ಪುಡಿ, ಧನಿಯಾ ಪುಡಿ, ಖಾರದ ಪುಡಿ, ಉಪ್ಪು, ಅರಿಶಿನ, ಪೆಪ್ಪರ್ ಪುಡಿ, ಹಾಕಿ ಮಿಕ್ಸ್ ಮಾಡಿ. ನಂತರ ಆಲೂ ಮ್ಯಾಶ್ ಮಾಡಿ ಸೇರಿಸಿ. ಕೊನೆಗೆ ದ್ರಾಕ್ಷಿ, ಗೋಡಂಬಿ, ಕೊತ್ತಂಬರಿ ಸೊಪ್ಪು ಸೇರಿಸಿ. ಈಗ ಪಲ್ಯ ರೆಡಿ.

ಈಗ ದೋಸೆ ಹಿಟ್ಟಿಗೆ ಕಾರ್ನ್ ಫ್ಲೋರ್, ಉಪ್ಪು, ಚಿಟಿಕೆ ಅರಿಶಿನ, ಚಿಟಿಕೆ ಕಸೂರಿ ಮೇಥಿ, ಚಿಟಿಕೆ ಹಿಂಗು, ಕೊಂಚ ವೋಮ, ಅವಶ್ಯಕತೆ ಇದ್ದಷ್ಟು ನೀರು ಸೇರಿಸಿ ಮಿಕ್ಸ್ ಮಾಡಿ. ಈ ಹಿಟ್ಟಿನಿಂದ ದೋಸೆ ಮಾಡಿ, ಈಗಾಗಲೇ ರೆಡಿ ಮಾಡಿಟ್ಟುಕೊಂಡ ಪಲ್ಯವನ್ನ ಇದಕ್ಕೆ ಸೇರಿಸಿ. ಮಸಾಲೆ ದೋಸೆಯಂತೆ ಮಾಡಿ ಸವಿಯಿರಿ.

ಮುಖದ ಕಾಂತಿ ಹೆಚ್ಚಿಸಲು ಈ ಎಣ್ಣೆಯನ್ನು ಬಳಸಿ..

ಉಪಯುಕ್ತವಾದ ಕಿಚನ್ ಟಿಪ್ಸ್..

ಮಕ್ಕಳಲ್ಲಿ ಕ್ಯಾಲ್ಶಿಯಂ ಕಡಿಮೆ ಇದ್ದರೆ ಹೇಗೆ ಗೊತ್ತಾಗತ್ತೆ..? ಇದರ ಲಕ್ಷಣ ಮತ್ತು ಪರಿಹಾರವೇನು..?

ಗರ್ಭಿಣಿಯರು ಯಾವ ರೀತಿಯ ಡಯಟ್ ಮಾಡಬೇಕು..?

- Advertisement -

Latest Posts

Don't Miss