- Advertisement -
Movie News: ಕಳೆದ ವರ್ಷ ಡಿವೋರ್ಸ್ ಪಡೆದು, ಇದೀಗ ಫಿಲ್ಮ್ ಇಂಡಸ್ಟ್ರಿಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ನಟ ಜಯಂ ರವಿ ನಿರ್ಧರಿಸಿದ್ದಾರೆ. ಹಾಗಾಗಿ ಇದೀಗ ರವಿ ತಮ್ಮ ಹೆಸರು ಬದಲಿಸಿಕೊಂಡಿದ್ದು, ರವಿ ಮೋಹನ್ ಎಂದು ಹೆಸರು ಬದಲಿಸಿಕೊಂಡಿದ್ದಾರೆ.
ಜಯಂ ರವಿ ಅನ್ನೋ ಹೆಸರಿಗೆ ನೀಡಿದಷ್ಟೇ ಬೆಂಬಲವನ್ನು, ರವಿ ಮೋಹನ್ ಎಂಬ ಹೆಸರಿಗೂ ನೀಡಬೇಕು ಎಂದಿರುವ ರವಿ, ರವಿ ಮೋಹನ್ ಸ್ಟುಡಿಯೋಸ್ ಎಂಬ ಪ್ರೊಡಕ್ಷನ್ ಹೌಸ್ ಕೂಡ ಶುರು ಮಾಡಿದ್ದಾರೆ. ಈ ಸಂಸ್ಥೆಯಡಿ ಹೊಸ ಸಿನಿಮಾ, ನಟ, ನಿರ್ದೇಶಕ, ನಿರ್ಮಾಪಕರನ್ನು ಪರಿಚಯಿಸಿ, ಹೊಸ ಪ್ರತಿಭೆಗಳಿಗೆ ಬೆಂಬಲಿಸುವುದಾಗಿ ರವಿ ಹೇಳಿದ್ದಾರೆ.
ಇಷ್ಟೇ ಅಲ್ಲದೇ, ಜಯಂ ರವಿ ಫ್ಯಾನ್ಸ್ ಕ್ಲಬ್, ರವಿ ಮೋಹನ್ ಫ್ಯಾನ್ಸ್ ಫೌಂಡೇಷನ್ ಎಂದು ಪರಿವರ್ತನೆಯಾಗಿದ್ದು, ಈ ಸಂಸ್ಥೆಯಡಿ ಅವಶ್ಯಕತೆ ಇರುವವರಿಗೆ ಸಹಾಯ ಮಾಡುವುದಾಗಿ ರವಿ ಹೇಳಿದ್ದಾರೆ.
- Advertisement -