News: ಜಿಮ್ ಜೊತೆ ಡಯಟ್ ಮಾಡುವ ವ್ಯಕ್ತಿಯೋರ್ವ ಜೊಮೆಟೋ ಮೂಲಕ ಫ್ರೆಶ್‌ಮೆನು ಸಂಸ್ಥೆಯಿಂದ ಸಲಾಡ್ ಆರ್ಡರ್ ಮಾಡಿದ್ದು, ಈ ಸಲಾಡ್ ಬಾಕ್ಸ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ.
ಇನ್ನು ಫ್ರೆಶ್‌ಮೆನುವಿನಲ್ಲಿ ಈ ವ್ಯಕ್ತಿ 4 ಐಟಮ್ ಆರ್ಡರ್ ಮಾಡಿದ್ದನಂತೆ. ಆದರೆ ಬಂದಿದ್ದು 3 ಐಟಮ್ ಮಾತ್ರ ಎಂದು ಯುವಕ ಆರೋಪಿಸಿದ್ದಾರೆ. ಅಲ್ಲದೇ, ಬಂದಿರುವ ಒಂದು ಐಟಂ ಆಗಿರುವ ಸಲಾಡ್‌ನಲ್ಲಿ ಜೀವಂತ ಬಸವನ ಹುಳು ಪತ್ತೆಯಾಗಿದೆ. ಇದನ್ನು ವೀಡಿಯೋ ಸಮೇತ ಈ ವ್ಯಕ್ತಿ ಹಂಚಿಕೊಂಡಿದ್ದು, ಪ್ಯಾಕ್ ಮಾಡುವವರು, ಸಲಾಡ್ ತಯಾರಿಸುವವರ ನಿರ್ಲಕ್ಷ್ಯ ಎಷ್ಟರ ಮಟ್ಟಿಗಿದೆ ಎಂದು ಆಕ್ರೋಶ ಹೊರಹಾಕಿದ್ದಾನೆ.
ಇನ್ನು ತಾನು ಸಲಾಡ್ ಬೌಲ್ ರಿಸೀವ್ ಮಾಡಿದ ಬಳಿಕ, ತಕ್ಷಣವೇ ತನಗೆ ಹುಳು ಕಣ್ಣಿಗೆ ಕಂಡಿದ್ದು, ತಾನು ಸಲಾಡ್ ಬಾಾಕ್ಸ್ ಓಪೆನ್ ಮಾಡಲಿಲ್ಲ. ಬದಲಾಾಗಿ ಹಾಗೇ ವೀಡಿಯೋ ಮಾಡಿದ್ದೇನೆ ಎಂದು ಆ ವ್ಯಕ್ತಿ ಹೇಳಿದ್ದಾರೆ. ಅಲ್ಲದೇ, ಆದಷ್ಟು ಮನೆಯೂಟವೇ ಮಾಡಬೇಕು, ಹೊರಗಿನ ಊಟವನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದ್ದು, ಈತನ ಪೋಸ್ಟ್‌ನಲ್ಲಿ ಕಾಮೆಂಟ್ ಮಾಡಿರುವ ಜನ, ತಮಗಾದ ಕೆಲವು ಅನುಭವಗಳನ್ನು ಹೇಳಿದ್ದಾರಲ್ಲದೇ, ಸಲಾಡ್ ಕಂಪನಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.