Friday, April 11, 2025

Latest Posts

ಅಭಿಮಾನಿಯನ್ನು ತಳ್ಳಿ ಬೀಳಿಸಿದ ನಾಗಾರ್ಜುನ ಬಾಡಿಗಾರ್ಡ್: Viral Video

- Advertisement -

Movie News: ಎಷ್ಟೋ ನಟ ನಟಿಯರು ಏರ್ಪೋರ್ಟ್‌ನಲ್ಲಿ ಪ್ರತಿದಿನ ಓಡಾಡುತ್ತಿರುತ್ತಾರೆ. ಅಂಥವರನ್ನು ನೋಡಲು ಅಭಿಮಾನಿಗಳಶು ಮುಗಿಬೀಳೋದು ಸಹಜ. ಕೆಲವರು ತಾಳ್ಮೆಯಿಂದ ಅವರೊಂದಿಗೆ ನಿಂತು ಫೋಟೋ ತೆಗೆಸಿಕೊಳ್ಳುತ್ತಾರೆ. ಇನ್ನು ಕೆಲವರು ಕೇರ್ ಇಲ್ಲದ ಹಾಗೆ ಹೋಗುತ್ತಾರೆ. ಆದರೆ ನಟ ನಟಿಯರೊಂದಿಗೆ ಬರುವ ಬಾಡಿಗಾರ್ಡ್‌ಗಳು ಮಾತ್ರ ದುರಹಂಕಾರದಿಂದ ನಡೆದುಕೊಳ್ಳುವುದು ಕಾಮನ್.

ಇದೀಗ ಒಂದು ವೀಡಿಯೋ ವೈರಲ್ ಆಗಿದ್ದು, ನಟ ನಾಗಾರ್ಜುನ್ ಏರ್ಪೋರ್ಟ್‌ನಿಂದ ಬರುತ್ತಿದ್ದು, ಅಲ್ಲೇ ಇದ್ದ ಓರ್ವ ಅಂಗಡಿಯ ಸಿಬ್ಬಂದಿ, ಅವರೊಂದಿಗೆ ಫೋಟೋ ತೆಗೆಸಿಕೊಳ್ಳಲು ಬಂದಾಗ, ನಾಗಾರ್ಜುನ್ ಅವರ ಬಾಡಿಗಾರ್ಡ್ ಅವರನ್ನು ತಳ್ಳಿ, ಬೀಳಿಸಿದ್ದಾನೆ. ವಿಪರ್ಯಾಸ ಎಂದರೆ, ಬಾಡಿಗಾರ್ಡ್ ಮಾಡಿದ ಕೆಲಸಕ್ಕೆ, ನಾಗಾರ್ಜುನ ಒಂದು ಮಾತು ಕೂಡ ಹೇಳದೇ, ಡೋಂಟ್‌ ಕೇರ್ ಮಾಡಿದ್ದಾರೆ.

ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಗಾರ್ಜುನ್ ಬಾಡಿಗಾರ್ಡ್‌ನ ದುರಹಂಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೇ, ನಾಗಾರ್ಜುನ ಕೂಡ ಇದನ್ನು ನೋಡಿಯೂ ನೋಡದಂತೆ ಹೋಗಿದ್ದನ್ನ, ನೆಟ್ಟಿಗರು ಖಂಡಿಸಿದ್ದಾರೆ.

ಈ ವೀಡಿಯೋ ವೈರಲ್ ಆಗಿ, ಜನ ಕ್ಲಾಸ್ ತೆಗೆದುಕೊಳ್ಳಲಲು ಶುರು ಮಾಡುತ್ತಿದ್ದಂತೆ, ನಾಗಾರ್ಜುನ ಕೂಡ, ಕ್ಷಮೆ ಕೇಳಿದ್ದಾರೆ. ಇದು ಈಗ ತಾನೇ ನನ್ನ ಗಮನಕ್ಕೆ ಬಂದಿದೆ. ಈ ರೀತಿ ಆಗಬಾರದಿತ್ತು, ನಾನು ಇನ್ನು ಮುಂದೆ ಎಚ್ಚರಿಕೆ ವಹಿಸುತ್ತೇನೆ. ಆ ವ್ಯಕ್ತಿಯಲ್ಲಿ ಕ್ಷಮೆ ಕೇಳುತ್ತೇನೆ. ಇನ್ನೊಮ್ಮೆ ಈ ರೀತಿಯಾಗುವುದಿಲ್ಲವೆಂದು ಹೇಳಿದ್ದಾರೆ.

ರಷ್ಯಾದ ಚರ್ಚ್ ಮೇಲೆ ಭಯೋತ್ಪಾದಕ ದಾಳಿ: 15 ಪೊಲೀಸರು ಸೇರಿ ಹಲವರ ಸಾವು

ಈಗ ಪ್ರಶ್ನೆಪತ್ರಿಕೆ ಸೋರಿಕೆ ಮಾಡಿದವರ ಮನೆ ಮೇಲೂ ಅಟ್ಯಾಕ್‌ ಮಾಡಲಿದೆ ಬುಲ್ಡೋಜರ್

ಮದುವೆಯಾಗಿ ಒಂದೇ ತಿಂಗಳಲ್ಲಿ ಕೋಟಿ ಕೋಟಿ ಸಾಲದಲ್ಲಿ ಮುಳುಗಿದ ನಟಿಯ ಗಂಡ: ಆಸ್ತಿ ಮಾರಾಟ

- Advertisement -

Latest Posts

Don't Miss