Saturday, April 12, 2025

Latest Posts

ಈ ಮೊದಲು ನನಗೆ ಇಷ್ಟೆಲ್ಲ ಜನರ ಬೆಂಬಲ ಸಿಕ್ಕಿರಲೇ ಇಲ್ಲ: ಜಗದೀಶ್ ಶೆಟ್ಟರ್

- Advertisement -

Dharwad News: ಧಾರವಾಡ:ದಿಂಗಾಲೇಶ್ವರ ಶ್ರೀಗಳು ಧಾರವಾಡ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ಪಕ್ಷೇತರರಾಗಿ ಸ್‌ಪರ್ಧಿಸುವ ವಿಚಾರದ ಬಗ್ಗೆ ಮಾತನಾಡಿದ ಜಗದೀಶ್ ಶೆಟ್ಟರ್, ದಿಂಗಾಲೇಶ್ವರ ಶ್ರೀಗಳ ಮನವೊಲಿಕೆ ಸಾಧ್ಯವಾಗಿಲ್ಲ. ಹೀಗಾಗಿ ಅಖಾಡದಲ್ಲಿ ಮುಖಾಮುಖಿಯಾಗಲೇಬೇಕಿದೆ ಎಂದಿದ್ದಾರೆ.

ನಾನು ಬೇರೆ ಜಿಲ್ಲೆಯಲ್ಲಿ ಬ್ಯುಸಿಯಾಗಿದ್ದೇನೆ. ದಿಂಗಾಲೇಶ್ವರ ಶ್ರೀ ಗಳ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಒಮ್ಮೆ ಶ್ರೀಗಳ ಜೊತೆ ಮಾತನಾಡಿದೆ. ನನ್ನ ನಿಲುವು ಅಚಲ ಅಂತ ಅವರು ಹೇಳಿದ್ದಾರೆ. ಹೀಗಾಗಿ ಚುನಾವಣೆಯಲ್ಲಿ ಮುಖಮುಖಿಯೊಂದೆ ಬಾಕಿ. ಇಂದು ಜೋಶಿ ಅವರು ನಾಮಪತ್ರ ಸಲ್ಲಿಸಿದ್ದಾರೆ. ಧಾರವಾಡ ದಲ್ಲಿ ಸತತವಾಗಿ ಜೋಶಿ ಗೆದ್ದು ಬರ್ತಿದ್ದಾರೆ. ಈ ಬಾರಿ ಬಿಜೆಪಿ ಜೆಡಿಎಸ್ ಅಲೈನ್ಸ್ ಆಗಿದೆ. ರಾಜ್ಯದಲ್ಲಿ ಎಲ್ಲ 28 ಸ್ಥಾನ ಗೆಲ್ಲುತ್ತೇವೆ. ನರೇಂದ್ರ ಮೋದಿ ಆಡಳಿತ ನೋಡಿ ಮತ ಹಾಕ್ತಾರೆ ಎಂದರು.

ಬೆಳಗಾವಿ ಜನ ಪ್ರೀತಿಯಿಂದ ಬರಮಾಡಿಕೊಂಡಿದ್ದಾರೆ. ಜನರಿಂದ ಒಳ್ಳೆಯ ಪ್ರತಿಕ್ರಿಯೆ ಸಿಗ್ತಾ ಇದೆ. ಅಲ್ಲಿನ ಜನ ಹೊರಗಿನವರಂತ ನೋಡ್ತಾ ಇಲ್ಲ. ನಮ್ಮವರೇ ಅಂತ ತಿಳಿದುಕೊಂಡು ಬೆಂಬಲ ಕೊಡುತ್ತಿದ್ದಾರೆ. ನನ್ನ ಜೀವನದಲ್ಲಿ ಇಷ್ಟೊಂದು ಜನರ ಬೆಂಬಲ‌ ಇರಲಿಲ್ಲ ಎಂದು ಶೆಟ್ಟರ್ ಹೇಳಿದ್ದಾರೆ.

ಗ್ಯಾರೆಂಟಿಗಳ ಕುರಿತು ಮಾಜಿ ಸಿಎಂ ಹೆಚ್‍ಡಿಕೆ ಟೀಕೆ ವಿಚಾರದ ಬಗ್ಗೆ ಶೆಟ್ಟರ್ ಮಾತನಾಡಿದ್ದು, ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಅರ್ಥೈಸುತ್ತಿದ್ದಾರೆ ಎಂದಿದ್ದಾರೆ.

ಐದು ಹತ್ತು ವರ್ಷ ಆಡಳಿತವಲ್ಲ, ಆಂತರಿಕ ಕಚ್ಚಾಟದಿಂದ ಸರಕಾರ ಬದಲಾವಣೆ ಆಗುತ್ತೆ: ಜೋಶಿ ವ್ಯಂಗ್ಯ

ಪ್ರಧಾನಿ ಮೋದಿಯಿಂದ ಮಂಗಳೂರಿನಲ್ಲಿ ರೋಡ್‌ ಶೋ: ಕೇಸರಿಮಯವಾದ ಕುಡ್ಲ..

ಮೋದಿಯವರು ಹೇಳಿರುವ ಅಭಿವೃದ್ಧಿ ಯೋಜನೆಗಳು ಬರೀ ಟ್ರೈಲರ್ ಅಷ್ಟೇ, ಸಾಧಿಸುವುದು ಬಹಳಷ್ಟಿದೆ: ಸುಮಲತಾ

- Advertisement -

Latest Posts

Don't Miss